ಕೊಪ್ಪಳ : ಭ್ರಷ್ಟಾಚಾರದಲ್ಲಿ ಸಿಲುಕಿ ಜೈಲುಪಾಲಾದರೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡದೆ ಅಧಿಕಾರದಲ್ಲಿ ಮುಂದುವರೆದಿದ್ದ ಭ್ರಷ್ಟ ರಾಜಕಾರಣಿ ಅರವಿಂದ್ ಕೇಜ್ರಿವಾಲ್ ಎಂದು ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಹೇಳಿದರು.
ಶನಿವಾರ ಸಂಜೆ ಅಶೋಕ ವೃತ್ತದಲ್ಲಿ ನಡೆದ ದೆಹಲಿ ಗೆಲುವಿನ ವಿಜಯೋತ್ಸವ ಆಚರಣೆಯಲ್ಲಿ ಅವರು ಮಾತನಾಡಿದರು.
ದೆಹಲಿಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಕಾಂಗ್ರೆಸ್ ಇಲ್ಲಿ ಗ್ಯಾರಂಟಿ ಹೆಸರಿನಲ್ಲಿ ಪಂಗನಾಮ ಹಾಕುತ್ತಿದ್ದು ಅದೇ ರೀತಿ ಆಮಿಷಗಳನ್ನು ಒಡ್ಡಿ ದೆಹಲಿಯಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸಿತು. ಆದರೆ ಕಾಂಗ್ರೆಸ್ ದೆಹಲಿಯಲ್ಲಿ ಒಂದೂ ಸ್ಥಾನ ಗೆದ್ದಿಲ್ಲ. ಅಂತಹದ್ದೇ ಸ್ಥಿತಿ ಮುಂದೆ ಕಾಂಗ್ರೆಸ್ಸಿಗೆ ಕರ್ನಾಟಕದಲ್ಲಿ ಬರಲಿದೆ. ಏಕೆಂದರೆ ಈಗ ರಾಜ್ಯ ಸರ್ಕಾರ ಭ್ರಷ್ಟಾಚಾರ ಹಗರಣ ಒಳ ಜಗಳಗಳಲ್ಲಿ ಮುಳುಗಿ ಒಂದು ಕೋಮನ್ನು ಓಲೈಸಿಕೊಳ್ಳಲು ಹೊರಟಿದೆ. ದೆಹಲಿ ಥರ ಮುಂದೆ ಕರ್ನಾಟಕದಲ್ಲಿಯೂ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತದೆ.
2024 ರಿಂದ ಮೋದಿ ನೇತೃತ್ವದಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಮಹಾರಾಷ್ಟ್ರ ಹರಿಯಾಣ ಈಗ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಗೆದ್ದಿದೆ. ಮುಂದೆ ಪಂಜಾಬ ಬಿಹಾರದಲ್ಲಿಯೂ ಗೆದ್ದು ಕರ್ನಾಟಕದಲ್ಲಿಯೂ ಬಿಜೆಪಿ ಗೆಲ್ಲುತ್ತದೆ ಎಂದು ಡಾ. ಬಸವರಾಜ ಹೇಳಿದರು
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾದ ಬಸವರಾಜ ದಡೇಸೂಗುರು, ಮುಖಂಡರಾದ ಮಹಾಂತೇಶ್ ಪಾಟೀಲ್ ವಿ.ಎಮ್. ಭೂಸನೂರಮಠ, ಆರ್.ಬಿ. ಪಾನಗಂಟಿ, ಚಂದ್ರಶೇಖರ ಗೌಡ ಹಲಗೇರಿ, ಮಹಾಲಕ್ಷ್ಮಿ ಕಂದಾರಿ ಇತರರು ಮಾತನಾಡಿದರು.
ಸುನೀಲ್ ಹೆಸರೂರ, ನೀಲಕಂಠಯ್ಯ ಹಿರೇಮಠ, ಮಲ್ಲಪ್ಪ ಡಿ , ಗಣೇಶ್ ಹೊರತಟ್ನಾಳ, ಪ್ರದೀಪ್ ಪಲ್ಲೇದ್, ಸೋಮಣ್ಣ ಹಳ್ಳಿ, ಪ್ರಾಣೇಶ್ ಮಾದಿನೂರ್, ದೇವರಾಜ್ ಹಾಲಸಮುದ್ರ, ಚನ್ನಬಸವ ಗಾಳಿ , ಪಂಪಯ್ಯ ಹಿರೇಮಠ, ವಾಣಿಶ್ರೀ ಮಠದ, ಶೋಭಾ ನಗರಿ, ರಾಧಾ ಕನಕಮೂರ್ತಿ ಸೇರಿದಂತೆ ಅನೇಕರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.