ಕೊಪ್ಪಳ : ಹುಬ್ಬಳ್ಳಿ - ಸಿಂಧನೂರು ನಡುವೆ ಮತ್ತೊಂದು ಹೊಸ ರೈಲು ಸಂಚಾರ ಆರಂಭವಾಗಲಿದೆ. ಬೆಂಗಳೂರಿನ KSR ನಿಲ್ದಾಣದಿಂದ ಹುಬ್ಬಳ್ಳಿ SSS ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ಎಕ್ಸ್ ಪ್ರೆಸ್ ರೈಲು (17391/17392) ಸಿಂಧನೂರಿನವರೆಗೆ ವಿಸ್ತರಣೆ ಆಗುತ್ತಿದೆ.
ಈ ಮೂಲಕ ಹುಬ್ಬಳ್ಳಿ - ಸಿಂಧನೂರು ನಡುವೆ ಹೊಸ ರೈಲು ಇದೇ ಜುಲೈ 12 ರಿಂದ ಸಂಚಾರ ಆರಂಭವಾಗಲಿದ್ದು ಸಿಂಧನೂರಿನಿಂದ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು ಸಂಚಾರ ಸೇವೆ ದೊರೆತಂತೆ ಆಗುತ್ತಿದೆ.
ರೈಲು ಸಂಖ್ಯೆ 17392, ಜುಲೈ 12, 2025 ರಿಂದ ಸಿಂಧನೂರಿನಿಂದ ಸಂಚಾರ ಆರಂಭಿಸಲಿದೆ. ಸಿಂಧನೂರಿನಿಂದ ಮಧ್ಯಾಹ್ನ 13:30 ಗಂಟೆಗೆ ಹೊರಟು ಗೋರೆಬಾಳ 13:38, ಕಾರಟಗಿ 13:49, ಸಿದ್ಧಾಪುರ ಗ್ರಾಮ 14:07, ಗಂಗಾವತಿ 14:26, ಗಿಣಿಗೇರಾ 15:29, ಕೊಪ್ಪಳ 15:43, ಭಾಣಾಪುರ 15:54 , ತಳಕಲ್ 15:59, ಗದಗ 16:40, ಅಣ್ಣಿಗೇರಿ 17:04, ಶಿಶ್ವಿನಹಳ್ಳಿ 17:15 , ಹುಬ್ಬಳ್ಳಿಗೆ 18:10 ಕ್ಕೆ ಆಗಮಿಸಿ, 18:45 ಗಂಟೆಗೆ ಕೆಎಸ್ಆರ್ ಬೆಂಗಳೂರು ಕಡೆ ಹೊರಡುತ್ತದೆ.
-----------
ಅದೇ ರೀತಿ, ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು - ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಜುಲೈ 13, 2025 ರಿಂದ ಸಿಂಧನೂರಿಗೆ ಸಂಚಾರ ಆರಂಭಿಸಲಿದ್ದು ಈ ರೈಲು ಬೆಂಗಳೂರಿನಿಂದ ಹುಬ್ಬಳ್ಳಿಗೆ ಬೆಳಗ್ಗೆ 9:20 ಕ್ಕೆ ಆಗಮಿಸಿ, 9:30 ಕ್ಕೆ ಹೊರಡುತ್ತದೆ. ಶಿಶ್ವಿನಹಳ್ಳಿ 09:51, ಅಣ್ಣಿಗೇರಿ 10:04, ಗದಗ 10:33, ತಳಕಲ್ 11:09, ಭಾಣಾಪುರ 11:15, ಕೊಪ್ಪಳ 11:33, ಗಿಣಿಗೇರಾ 11:46, ಗಂಗಾವತಿ 12:52, ಸಿದ್ಧಾಪುರ 13:15, ಕಾರಟಗಿ 13:34, ಗೋರೆಬಾಳ 13:44, ಸಿಂಧನೂರಿಗೆ 14:20 ಕ್ಕೆ ತಲುಪುತ್ತದೆ.