ಕೊಪ್ಪಳ : ಗ್ರಾಮೀಣ ಅಂಚೆ ನೌಕರರು ಹಾಗೂ ಪೋಸ್ಟ್ ಮ್ಯಾನ್ ಹಾಗೂ ಎಂಟಿಎಸ್ ನೌಕರರು ಇಂದು ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಒಂದು ದಿನದ ಧರಣಿ ನಡೆಸಿದರು.
ಉದ್ದೇಶಿತ ಪೋಸ್ಟಲ್ ಬಿಲ್ - 2023 ವಾಪಸ್ ಪಡೆಯಬೇಕು GDS ನೌಕರರನ್ನು 8ನೇ ವೇತನ ಆಯೋಗಕ್ಕೆ ಸೇರಿಸಬೇಕು GDS ನೌಕರರಿಗೆ 8 ಗಂಟೆ ಕೆಲಸ ನಿಗದಿ ಮಾಡಿ ನೌಕರಿ ಖಾಯಂಗೊಳಿಸಬೇಕು old pension scheme ಜಾರಿಗೊಳಿಸಬೇಕು ಹಲವು ಕಚೇರಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು ಆರ್ ಎಂ ಎಸ್ ಕಚೇರಿಗಳನ್ನು ಮುಚ್ಚುವುದು ಕೈ ಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಿದರು.
ಈಗ ಬರುತ್ತಿರುವ ಹೊಸ ನಿಯಮಗಳು ಕೋಟ್ಯಾಂತರ ನೌಕರರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸುತ್ತಿರುವ ಕಾಯ್ದೆಗಳು ಜಾರಿಯಾದರೆ ನಮ್ಮ ಪಾಲಿಗೆ ಮರಣ ಶಾಸನ ಆಗಲಿವೆ ಎಂದು ಧರಣಿಯಲ್ಲಿ ಅನೇಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ದಿನದ ಈ ಮುಷ್ಕರದಲ್ಲಿ ಪೋಸ್ಟ್ ಮ್ಯಾನ್ , ಎಂಟಿಎಸ್ ಗ್ರುಪ್ ಗ್ರಾಮೀಣ ಅಂಚೆ ನೌಕರರ ರಾಜ್ಯ ಉಪಾಧ್ಯಕ್ಷರು ಬಸವರಾಜ ಗುರಿಕಾರ, ಹಾಗೂ ಬುದ್ದಿವಂತಪ್ಪ ಕೊಪ್ಪಳ ಡಿವಿಜನ್ ಅಂಚೆ ಅಧ್ಯಕ್ಷರು, ಬಸವರಾಜ ಸಾಲಿಮಠ, ಕಾರ್ಯದರ್ಶಿ ನೀಲಕಂಠಪ್ಪ ಖಜಾಂಚಿ, ಮಹಾಂತೇಶಪ್ಪ ರಾಮಣ್ಣ ವಿದ್ಯಾಧರ ಸೊಪ್ಪಿಮಠ, ಮಲ್ಲಪ್ಪ ಪಾಟೀಲ್, ಅಶೋಕ ಮಲ್ಲಣ್ಣ, ಅನಿಲ ಚಾಕ್ರಿ , ಯಲ್ಲಪ್ಪ ಸಂಗಟಿ, ಬಸವರಾಜ ತಲೆಖಾನ, ಜಿ.ಎನ್.ಹಳ್ಳಿ ಬಿ.ಜಿ. ದ್ರಾಕ್ಷಿ ಹಾಗೂ ಅಂಚೆ ನಿವೃತ್ತ ನೌಕರರಾದ ರವಿ ಕಾಂತನವರ, ವೈ ವೈ ಕೊಳೂರು ಇತರರು ಭಾಗವಹಿಸಿದ್ದರು.