ಕೊಪ್ಪಳ : ಶಿಕ್ಷಕ ಸಾಹಿತಿ ಕಲಾವಿದ ಸುರೇಶ ಕಂಬಳಿ ಸಾಹಿತ್ಯ ನೀಡಿರುವ ' ರಾವುತ ' ಕನ್ನಡ ಸಿನಿಮಾದ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆ ರವಿವಾರ ಕೊಪ್ಪಳದಲ್ಲಿ ಜರುಗಿತು. ರಾವುತ ಸಿನಿಮಾ ಇದೇ ತಿಂಗಳು 31 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಕಲರವ ಶಿಕ್ಷಕರ ತಂಡ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು.
ಮನುಷ್ಯರಿಗೆ ಭೂಮಿಗೆ ಬರುವ ಎಂಟ್ರಿ ಗೊತ್ತು ಎಕ್ಸಿಟ್ ಆಗುವ ನಡುವೆ ಬದುಕು ಇರುತ್ತೆ ಆದರೆ ಮನುಷ್ಯರ ಎಕ್ಸಿಟ್ ನಂತರ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ ಆದರೆ ಉತ್ತರ ಯಾರಿಗೂ ಗೊತ್ತಿಲ್ಲ. ಸಾವಿನ ನಂತರ ಏನು ಎಂಬ ಪ್ರಶ್ನೆಗೆ ಸಿನಮಾ ಕ್ಲೈಮ್ಯಾಕ್ಸ್ ನಲ್ಲಿ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ ಎಂದು ಮಾವುತ ಸಿನಿಮಾ ನಿರ್ದೇಶಕ ಸಿದ್ದು ವಜ್ರಪ್ಪ ಹೇಳಿದರು.
ಕೊಪ್ಪಳ ತಾಲೂಕು ಜಬ್ಬಲಗುಡ್ಡ ಬಳಿ ಆಳ್ವಿಕೆ ನಡೆಸಿದ್ದ ಗಂಡುಗಲಿ ಕುಮಾರರಾಮನ ಕಾಲಘಟ್ಡ ಮತ್ತು ಅದೇ ಪ್ರದೇಶದಿಂದ ಆರಂಭವಾಗುವ ಈ ಕತೆ ಅತ್ತ ಆಂಧ್ರ ಇತ್ತ ಗದಗವರೆಗೂ ಸಾಗುತ್ತದೆ. ಹಾಗಾಗಿ ಕನಕಗಿರಿ ಜಬ್ಬಲಗುಡ್ಡ ಮುಕ್ಕುಂಪಿ ಪ್ರದೇಶದಲ್ಲಿ ಹೆಚ್ಚು ಈ ಸಿನಿಮಾ ಶೂಟಿಂಗ್ ಮಾಡಿದ್ದು ಉತ್ತರ ಕರ್ನಾಟಕದ ಭಾಷಾ ಸೊಗಡು ಈ ಸಿನಿಮಾದಲ್ಲಿದೆ ಎಂದರು ನಿರ್ದೇಶಕರು.
ಸಿನಿಮಾ ನಿರ್ದೇಶಕರು ಕನಕಗಿರಿಯ ಮಾದಿನಾಳನವರು. ನಿರ್ಮಾಪಕರು ಈರಣ್ಣ ಬಡಿಗೇರ ಇಳಕಲ್ ನವರು. ರಾವುತ ಅಂದ್ರೆ ಕುದುರೆ ಪಳಗಿಸುವವನು ಎಂದರ್ಥ.
ಸಾಹಿತಿ ಸುರೇಶ ಕಂಬಳಿ ಈ ಸಿನಿಮಾದ ಎಲ್ಲ ಹಾಡುಗಳನ್ನು ರಚಿಸಿದ್ದಾರೆ. ಅವರು ರಚಿಸಿರುವ ಒಂದು ಹಾಡಿನ ಸಾಲು ಕುಣಿದಾಡುವ ನೆಲಕ್ಕಿಂತ ಕುಣಿ ಚಿಕ್ಕದು...ಮನಸೆಳೆಯುತ್ತದೆ.
ರಾವುತ ಸಿನಿಮಾ ತಂಡ ಹಾಗೂ ಕಲರವ ಶಿಕ್ಷಕರ ಬಳಗದ ಸದಸ್ಯರು ಹಾಜರಿದ್ದರು.