ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸುಪ್ರಸಿದ್ಧ ಹಿಂದೂಸ್ಥಾನಿ ಗಾಯಕರು ಪದ್ಮಶ್ರೀ ಎಮ್. ವೆಂಕಟೇಶ್ ಕುಮಾರ್ ಚಾಲನೆ ನೀಡಿದರು.
ಪದ್ಮಶ್ರೀ ವೆಂಕಟೇಶ್ ಕುಮಾರ್ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಇನ್ನು ಕೊಪ್ಪಳ ಹಾಗೂ ಶ್ರೀ ಗವಿಮಠಕ್ಕೆ ಹೆಮ್ಮೆ ಅಂದ್ರೆ ಪದ್ಮಶ್ರೀ ವೆಂಕಟೇಶ್ ಕುಮಾರ್ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ.
ಮಠದ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಯೊರ್ವರು ದೇಶವೇ ಮೆಚ್ಚಿದ ಸಂಗೀತ ಸಾಧಕರಾಗಿರುವುದು ಕೊಪ್ಪಳಕ್ಕೆ ಹೆಮ್ಮೆ ತಂದಿದೆ.
ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡುತ್ತ ಶಾಲೆಯೇ ಇಲ್ಲದ ಹಳ್ಳಿಯಲ್ಲಿ ಹುಟ್ಟಿದ ವೆಂಕಟೇಶ್ ಕುಮಾರ್ ಅವರಿಗೆ ಇಂದು ಮೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿವೆ.
ಕಡು ಬಡತನದಲ್ಲಿ ಹುಟ್ಟಿದ ವೆಂಕಟೇಶ್ ಕುಮಾರ್ ಪಂ. ಪುಟ್ಟರಾಜ ಗವಾಯಿಗಳವರ ಆಶ್ರಮದಲ್ಲಿ 12 ವರ್ಷದ ಸಂಗೀತ ಕಲಿಕೆಯ ಶುಲ್ಕ ನೂರು ರೂಪಾಯಿ ಕೊಡದಷ್ಟು ಕಡುಬಡತನದ ವೆಂಕಟೇಶ್ ಕುಮಾರ್ ಇಂದು ಪಂ. ಭೀಮಸೇನ ಜೋಷಿಯವರ ನಂತರ ಕರ್ನಾಟ ಪ್ರತಿನಿಧಿಸಿದರೆ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ.
ಜೇಬಿನಲ್ಲಿ ದುಡ್ಡು ಇದ್ದರೆ ನೂರು ಆಟ ಕಲಿಸುತ್ತದೆ. ಆದರೆ ಜೇಬು ಖಾಲಿ ಇದ್ದರೆ ನೂರು ಪಾಠ ಕಲಿಸುತ್ತದೆ ಅನ್ನೊದಕ್ಕೆ ಇವರು ಸಾಕ್ಷಿ ಎಂದು ಹೇಳಿದರು.
ಶ್ರಿ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ವಿಜಯಪುರದ ಅಭಿನವ ಶ್ರೀ ಸಿದ್ದಾರೂಡ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಖ್ಯಾತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ ಆಗಮಿಸಿದ್ದರು. ಕೊಪ್ಪಳ ರಾಯಚೂರು ಜಿಲ್ಲೆಯ ಜನಪ್ರತಿನುಧಿಗಳು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.