Advt. 
 Views   518
Jan 10 2022 4:05PM

ಮರೆಯಾದ ಕನ್ನಡ ಚೇತನ


ಜನೇವರಿ 10, 2022 ರಂದು ಪ್ರೋ.ಚಂದ್ರಶೇಖರ ಪಾಟೀಲ ( ಚಂಪಾ)  ನಿಧನರಾದರು.

ಎಳಿಮೆಯಲ್ಲಿಯೇ ಖಡಕ್ ಮಾತುಗಳಿಂದ ಬೆಳೆಯುತ್ತ ವಿದೇಶದಲ್ಲೂ ಶಿಕ್ಷಣ ಪಡೆದು ತವರು ನಾಡಿಗೆ ಬಂದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪ್ರೊಫೆಸರ್ ಆದವರು. 

ಸಾಹಿತ್ಯದ ಒಳಹೊರಗನ್ನು ಜತನದಿಂದ ಅಭ್ಯಸಿಸಿ ವಿದ್ವತ್ ಮಣಿ ಆದವರು. ಬರಹ, ಹರಟೆ, ಕಥೆ, ಕವಿತೆ, ಚುಟುಕು ಬರೆದು ನಾಡಿನ ಉದ್ದಗಲಕ್ಕೂ ಸಂಚರಿಸಿ ಪ್ರತಿಭೆಯನ್ನು ಬೆಳಗಿದವರು. ಮೂಲೆ ಮೂಲೆಯ ಕರೆಗೆ ಓಗೊಟ್ಟು ತಲುಪಿ ಭಾಷೆ , ಸಾಹಿತ್ಯ, ವರ್ತಮಾನದ ಸುದ್ದಿಗೆ ಬದ್ದರಾದವರು. ನಿಲುವನ್ನು ಪ್ರತಿಪಾದಿಸಿದವರು. ಹಠವಾದಿ ಗಟ್ಟಿಗರು ಹೌದು.

1982 ರಲ್ಲಿ ಕನ್ನಡ ಭಾಷೆಯ ಅಗ್ರ ಸ್ಥಾನಕ್ಕಾಗಿ ಚಳುವಳಿ ನಡೆದಾಗ ; ಗೋಕಾಕ ಚಳುವಳಿಯಲ್ಲಿ ನಿರಂತರ ಧ್ವನಿಯಾದವರು. ಅವರ ಮಾತಿನ ಗತ್ತೇ ಹಾಗೆ. ಜನಜಾಗೃತಿ ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ಯಾವುದೇ ಆತ್ಮರತಿಯಿರದೆ ಬರೆದರು, ಬರೆಸಿದರು , ಪ್ರತಿಭೆಗಳನ್ನು ಬೆಳಗಿಸಿದವರು. ಬೇಕಾದವರ,  ಬೇಡವಾದವರ ಮನದಲ್ಲೂ ಮೂಡಿದವರು. ಪ್ರಾಮಾಣಿಕ ನಡತೆಯಿಂದ ಹೆಸರಾದರು.

ರಾಜ್ಯದ ಅನೇಕ ಪತ್ರಿಕೆಗಳಿಗೆ ಬರೆದರು. ಪಿ.ಲಂಕೇಶರ 'ಲಂಕೇಶ್ ಪತ್ರಿಕೆ' ಗೆ ಉಪಸಂಪಾದಕರಾಗಿ ನಂತರ ಧಾರವಾಡದ ಪಟ್ಟಣಶೆಟ್ಟಿ, ಗಿರಡ್ಡಿ ಗೆಳೆಯರೊಂದಿಗೆ ''ಸಂಕ್ರಮಣ'  ದ್ವೈಮಾಸಿಕ ಪತ್ರಿಕೆ ಆರಂಭಿಸಿ ನಾಡಿಗೆ ತಲುಪಿಸಿದರು. ನಂತರ ಅದರ ಸಂಪಾದಕತ್ವ ವಹಿಸಿ ಐದು ದಶಕ ಪತ್ರಿಕೆ ನಡೆಸಿದರು. 

ಒಪ್ಪಿದ್ದನ್ನು ತಿಳಿಸುತ್ತ ಒಪ್ಪದೇ ಇರುವುದನ್ನು ನಿರಾಕರಿಸಿದ ದಿಟ್ಟತನದವರು. ನಾಡಿನ ಸಮ್ಮೇಳನ, ಉತ್ಸವ, ವಿಚಾರ ಸಂಕೀರಣ , ಹಲವಾರು ಕನ್ನಡದ ಕಾರ್ಯಕ್ರಮಗಳಿಗೆ ಭಾಗವಹಿಸಿ ಬಲ ತುಂಬಿದರು.

ಗಡಿನಾಡು ಕಾವಲು ಸಮಿತಿ, ಪುಸ್ತಕ ಪ್ರಾಧಿಕಾರ, ಬಂಡಾಯ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತು ಎಲ್ಲದರ ನೇತ್ರತ್ವ ವಹಿಸಿ ಸಂಘಟಿತ ಕಾರ್ಯಗಳನ್ನು ಮಾಡುತ್ತ ಅಲಕ್ಷಿತ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದರು.  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಮ್ಮೇಳನಗಳ ಅಧ್ಯಕ್ಷತೆಗೆ ದಲಿತರು, ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ ಗೌರವಿಸಿದವರು. ಸರಕಾರಗಳು ತಪ್ಪು ಮಾಡಿದಾಗ ಸಮ್ಮೇಳನಗಳಲ್ಲಿಯೇ ಸರಕಾರದ ಎದುರೇ ಛೇಡಿಸಿದವರು ಚಂಪಾ. ಆಡದೇ ಗಟ್ಟಿಯಾಗಿ ನಿಂತು ಮಾಡಿ ತೋರಿದವರು. ಇಂಥ ಗಟ್ಟಿಗ ಹೋರಾಟಗಾರ ಬರಹಗಾರ ನಾಡನ್ನು ಅಗಲಿರುವುದು ಕನ್ನಡ ನಾಡಿನ ಜನರಿಗೆ ದುಃಖ ತಂದಿದೆ.

'ಸಂಕ್ರಮಣ' ದ ಎಲ್ಲ ಸಂಚಿಕೆಗಳನ್ನು ಸರಕಾರಿ ಅನುದಾನದಲ್ಲಿ ಸಂಪುಟಗಳಾಗಿಸಿದ್ದು ಅಭಿನಂದನೀಯ.  ನಿವೃತ್ತಿಯ ನಂತರ ನಾಡಿನ ಸಂಘಟನೆಗಳಿಗೆ ಚಲನಶೀಲತೆ, ಜೀವ ತುಂಬಿದರು. 

2017ರಲ್ಲಿ ಮೈಸೂರಿನಲ್ಲಿ ಜರುಗಿದ 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಿದ್ದರು. 83ರ ವಯಸ್ಸಿನಲ್ಲಿ  ಈಗ ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಭಾವಪೂರ್ಣ ನಮನಗಳು.

 -ಅಕ್ಬರ್ ಕಾಲಿಮಿರ್ಚಿ
ಭಾಗ್ಯನಗರ, ಕೊಪ್ಪಳ
ಮೊ: 9731327829



Share this news

 Comments   4

Post your Comment

PEOPLE'S OPINION

ಹಿರಿಯ ಬಂಡಾಯ ದಿಟ್ಟ ನಿಲುವಿನ ಸಾಹಿತಿಗಳಾಗಿದ್ದರು. ಹೋರಾಟಗಾರರಾಗಿದ್ದರು ಭಾವಪೂರ್ಣ ನುಡಿ ನಮನಗಳು.
Anasuya Jajirdar   Jan 24 2022 6:53PM


ಬಂಡಾಯದ ಧ್ವನಿಗೆ ಗಟ್ಟಿತನವನ್ನು ತಂದುಕೊಟ್ಟವರು ನಿಷ್ಟುರ ನಿರ್ಬಿಡೆ ಅವರ ಬರಹ ಬದುಕು ನಿಜಕ್ಕೂ ನಮಗೆಲ್ಲ ಸ್ಪೂರ್ತಿ ತಮ್ಮ ಮಾಹಿತಿ ಬರಹಕ್ಕೆ ಧನ್ಯವಾದಗಳು ಅಗಲಿದ ಚೇತನಕ್ಕೆ ನಮನಗಳು ಸರ್
D.ramanna   Jan 10 2022 9:35PM


ಒಂದೊಳ್ಳೆ ಮಾಹಿತಿ, ಹಿರಿಕರು ಹಾಕಿಕೊಟ್ಟ ಮಾರ್ಗ,ತಳೆದ ನಿಲುವುಗಳ ನಮಗ ಮಾದರಿ.ಅಂತಿಮ ಶರಣು.. "ಚಂಪಾ" ಸರ್.🙏
ಪ್ರಕಾಶ್ ಶಿಲ್ಪಿ   Jan 10 2022 6:42PM


ಮನ ಮುಟ್ಟಿತು ಬರಹ
ವಿಜಯ ಅಮೃತರಾಜ್   Jan 10 2022 4:56PM


ಹೊಸ ಸುದ್ದಿಗಳು


Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ
Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ





     
Copyright © 2021 Agni Divya News. All Rights Reserved.
Designed & Developed by We Make Digitize