ಕೊಪ್ಪಳ : ಜೂನ್ 1 ರಿಂದ 3 ರವರೆಗೆ ಅಯೋಧ್ಯೆಯಲ್ಲಿ ಇಂಡಿಯನ್ ಆರ್ಟ್ ಮತ್ತು ಕಲ್ಚರಲ್ ಸೊಸಾಯಿಟಿ, ಶ್ರೀ ಡ್ಯಾನ್ಸ್ ಸ್ಟುಡಿಯೋ, ರಾಮಸೇತು ವಲ್ಡ್ ಟ್ರಾವೆಲ್ಸ್ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಕೊಪ್ಪಳದ ವಿದ್ಯಾರ್ಥಿನಿ ಕು. ಮೋಹಿತಾ ಕೊರವರ ಸಿನಿಯರ್ ನೃತ್ಯ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಮುನಿರಾಬಾದ್ ಐಆರ್ ಬಿ ಯ ಚೆನ್ನಬಸು ಹಾಗೂ ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯದ ಭಾಗೀರಥಿಯವರ ಪುತ್ರಿ ಮೋಹಿತಾ ಸ್ವಾಮಿ ವಿವೇಕಾನಂದ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.
ವಿಜಯಪುರದ ನಿತ್ಯಕಲಾ ಅಕಾಡೆಮಿಯ ಲಕ್ಷ್ಮೀ ತೇರದಾಳರವರ ನೇತೃತ್ವದ ತಂಡದಲ್ಲಿ ಭಾಗವಹಿಸಿದ್ದ ಮೋಹಿತಾ ಸಿನಿಯರ್ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.