ಕೊಪ್ಪಳ : ಗುರುವಾರ ಸಂಜೆ ಸಿಡಿಲು ಬಡಿದು ಮಹಿಳೆಯೊರ್ವಳು ಸಾವಿಗೀಡಾದ ಘಟನೆ ಕುಷ್ಟಗಿ ತಾಲುಕು ಜಾಗೀರ ರಾಂಪುರದಲ್ಲಿ ಜರುಗಿದೆ.
ರತ್ಮಮ್ಮ ಗೊರೆಬಾಳ ಎಂಬ ಮಹಿಳೆ ಸಿಡಿಲಿಗೆ ಬಲಿಯಾದವರು. ರತ್ನಮ್ಮ ತನ್ನ ಅಕ್ಕ ದೇವಮ್ಮ ಜೊತೆ ಹೊಲಕ್ಕೆ ಹೋಗಿದ್ದರು. ಮಳೆ ಬರುತ್ತಿದ್ದಂತೆ ಅಕ್ಕ ದೇವಮ್ಮ ಮನೆಗೆ ಬಂದಿದ್ದರು. ಆದರೆ ಹೊಲದಲ್ಲಿ ಉಳಿದಿದ್ದ ರತ್ನಮ್ಮ ಸಿಡಿಲಿಗೆ ಬಲಿಯಾಗಿದ್ದಾರೆ.
ಸಿಡಿಲಿಗೆ ರತ್ನಮ್ಮ ಮೃತಪಟ್ಟ ವಿಷಯ ತಿಳಿದು ಘಟನೆ ಜರುಗಿದ ಸ್ಥಳಕ್ಕೆ ತಹಶಿಲ್ದಾರ ರವಿ ಎಸ್. ಅಂಗಡಿ ಭೇಟಿ ನೀಡಿದರು. ಮೃತರ ವಾರಸುದಾರರಿಗೆ 5 ಲಕ್ಷ ರೂ.ಗಳ ಪರಿಹಾರ ಚೆಕ್ ವಿತರಿಸಿದರು.