ಕೊಪ್ಪಳ : ನಿನ್ನೆ ರಾತ್ರಿ ಸುರಿದ ರಭಸದ ಮಳೆಗೆ ನಲವತ್ತು ಕೋಳಿಗಳು ಬಲಿಯಾಗಿವೆ. ಈ ಘಟನೆ ಗಿಣಿಗೇರಿಯಲ್ಲಿ ನಡೆದಿದೆ.
ನಿನ್ನೆಯ ಜೋರು ಮಳೆಗೆ ಚರಂಡಿ ತುಂಬಿ ನೀರು ರಸ್ತೆ ಮೇಲೆ ಹರಿದಿದೆ. ಮಳೆಯ ನೀರು ಚಿಕನ್ ಸೆಂಟರ್ ಗೆ ನುಗ್ಗಿ ಸೆಂಟರ್ ನಲ್ಲಿದ್ದ 40 ಕೋಳಿಗಳು ಪ್ರಾಣ ಕಳೆದುಕೊಂಡಿವೆ.
ಗಿಣಿಗೇರಿಯ ರಾಜು ಎಂಬುವವರ 'ಹುಲಿಗಿ ಚಿಕನ್ ಸೆಂಟರ್ ' ನಲ್ಲಿ ಸತ್ತ ಕೋಳಿಗಳ ಮೌಲ್ಯ ಸುಮಾರು 10 ಸಾವಿರ ರೂಪಾಯಿಗಿಂತ ಹೆಚ್ಚು ಎಂಬ ಅಂದಾಜು ಇದೆ.
ಗಿಣಿಗೇರಿ ಮುಖ್ಯ ರಸ್ತೆ ಅದರಲ್ಲೂ ಮೇಲ್ಸೇತುವೆ ಬಳಿ ಇರುವ ಚಿಕನ್ ಅಂಗಡಿಗೆ ಮಳೆ ನೀರು ನುಗ್ಗಿದ್ದು ಮಳೆ ನೀರು ಸರಾಗ ಹರಿದು ಹೋಗಲು ಸ್ವಚ್ಚತೆ ಮಾಡದ ಗ್ರಾಮ ಪಂಚಾಯತ ಕಾರ್ಯವೈಖರಿ ತೋರಿಸುವಂತಿದೆ. ಚಿಕನ್ ಅಂಗಡಿ ಮಾಲೀಕ ವಿನಾಕಾರಣ ಆರ್ಥಿಕ ನಷ್ಟ ಅನುಭವಿಸುವಂತೆ ಆಯಿತು.