ಕೊಪ್ಪಳ : ಜೂನ್ 21 ರ ವಿಶ್ವ ಯೋಗ ದಿನಾಚರಣೆ ನಿಮಿತ್ಯ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ 21 ದಿನಗಳ 'ಯೋಗ ಪ್ರೇರಣಾ' ಶಿಬಿರ ಆರಂಭವಾಗಿದೆ.
ಮೇ.31 ರಿಂದ ಜೂನ್ 20 ರವರೆಗೆ ಆಯುರ್ವೇದ ಆಸ್ಪತ್ರೆಯಲ್ಲಿ ಬೆಳಗ್ಗೆ 6 ರಿಂದ 7 ವರೆಗೆ ಜರುಗುವ ಈ ತರಬೇತಿ ಶಿಬಿರದಲ್ಲಿ ಯೋಗಾಸನ, ಪ್ರಾಣಾಯಾಮ, ಯೋಗ ಕ್ರಿಯೆ ಮತ್ತು ಯೋಗದಿಂದ ಆರೋಗ್ಯ ಕುರಿತು ಉಪನ್ಯಾಸ ಕೂಡ ಇರುತ್ತದೆ.
ಆಯುರ್ವೇದ ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗದಿಂದ ಜರುಗುವ ಈ ಶಿಬಿರ, ವಿಭಾಗದ ಮುಖ್ಯಸ್ಥರಾದ ಡಾ. ಪ್ರಭು ನಾಗಲಾಪುರ ಉದ್ಘಾಟಿಸಿದ್ದು ವಿಭಾಗದ ಡಾ. ಅಮಲ್ ಚಂದ್ರನ್, ಡಾ ಆಶಾ ಎಸ್.ಎ, ಡಾ. ನವೀನ್ ಕುಮಾರ 21 ದಿನ ತರಬೇತಿ, ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆಯಬಹುದು.