Advt. 
 Views   3243
Nov 22 2022 8:04PM

ಕೊಪ್ಪಳ : ಕಾವೇರಿ ಕಿರುಚಿತ್ರದ ಟೀಸರ್ ಬಿಡುಗಡೆ


ಕೊಪ್ಪಳದ ಶಿಕ್ಷಕ ಸಾಹಿತಿ ನಟನೆ ಮೂಲಕ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿರುವ ಸುರೇಶ ಕಂಬಳಿ ಮೊದಲ ಬಾರಿಗೆ 'ಕಾವೇರಿ' ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.

ನವೆಂಬರ್ 22 ರಂದು 'ಕಾವೇರಿ' ಟೀಸರ್ 'ಕರ್ಣ ಟಾಕಿಸ್'  ಯುಟೂಬ್ ನಲ್ಲಿ ಬಿಡುಗಡೆಯಾಗಿದೆ.

 

ಶಿಕ್ಷಣದ ಬೆಳಕಿನಲ್ಲಿ ತನ್ನ ಬದುಕನ್ನು ಬೆಳಗಿಸಿಕೊಂಡು ಸಮಾಜಕ್ಕೆ ಸೇವೆಗೈಯುವ ಬಾಲಕಿಯ ಕನಸು ನನಸಾಯಿತೆ ?  ಎಂಬುದು ಗೊತ್ತಾಗಲು ಕಾವೇರಿ ಕಿರುಚಿತ್ರ ನೋಡಬೇಕು. ಸಾಮಾಜಿಕ ಪಿಡುಗು, ತಾಯಿ ಸೆಂಟಿಮೆಂಟ್ ಎಲ್ಲವೂ ಒಳಗೊಂಡಂತೆ ಇದೆ ಕಿರುಚಿತ್ರ. ಇದೇ ನವೆಂಬರ್ 26 ರಂದು 'ಕಾವೇರಿ'  ಕಿರುಚಿತ್ರ ಬಿಡುಗಡೆಯಾಗಲಿದೆ.

ವೃತ್ತಿ ಪ್ರವೃತ್ತಿ ಎರಡರ ಮೂಲಕವೂ ಉತ್ತಮ ಸಮಾಜದ ಆಶಯಗಳ ಚಿಂತನೆ ಇರುವ, ಅವುಗಳನ್ನು ಕಾರ್ಯರೂಪಕ್ಕೆ ತರಲು ಯತ್ನಿಸುವ ಸಿಪಿಐ ವಿಶ್ವನಾಥ ಹಿರೇಗೌಡರ ಈ ಚಿತ್ರಕ್ಕೆ ಮಾರ್ಗದರ್ಶನ ಮಾಡಿದ್ದು ಮಂಜುನಾಥಗೌಡ ಗೌಡ್ರ ನಿರ್ಮಾಣದ ಈ ಕಿರುಚಿತ್ರಕ್ಕೆ  ಛಾಯಾಗ್ರಹಣ ಪುರುಷೋತ್ತಮ ಜೂಡಿ, ಸಂಗೀತ ಚಂದ್ರಶೇಖರ ಗೋಗಿ ಮಾಡಿದ್ದಾರೆ. ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸುರೇಶ ಕಂಬಳಿ ಮಾಡಿದ್ದಾರೆ.

ಗಬ್ಬೂರು, ಗಿಣಿಗೇರಿ ಕೆರೆಗಳನ್ನು ಅದರಷ್ಟು ಅದ್ಭುತವಾಗಿ ಸೆರೆ ಹಿಡಿದಿದ್ದಾರೋ ? ಈ ಕಿರುಚಿತ್ರಕ್ಕೂ ದ್ರೋಣ್ ಬಳಸಿದ್ದು ದಸ್ತಗಿರ ಆಪರೇಟ್ ಮಾಡಿದ್ದು ಕುತೂಹಲ ಮೂಡಿಸಿದೆ. ಶಿಕ್ಷಕ ಹನುಮಂತಪ್ಪ ಕುರಿ ಪ್ರಚಾರ ಜವಾಬ್ದಾರಿ ಹೊತ್ತಿದ್ದಾರೆ. 

ಸ್ಪಂದನಾ, ಅರ್ಪಿತಾ, ರೇಣುಕಾ, ಕರಿಯಪ್ಪ ಕಂಬಳಿ, ರೇಣುಕಾ ದೇಸಾಯಿ, ಲಕ್ಷ್ಮಣ ಪೀರಗಾರ, ವೈಶಂಪಾಯನ, ಶುಭಕಿರಣ, ಶರಣು ಕೂಕನಪಳ್ಳಿ,  ಸೋಮಲಿಂಗಪ್ಪ ಬೆಣ್ಣಿ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. 



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jun 12 2025 8:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಕುಷ್ಟಗಿ ರೈಲು ವೇಳಾಪಟ್ಟಿ ಬದಲಾವಣೆ
Jun 11 2025 8:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಟ್ಟಡ ನಿರ್ಮಾಣ ಸಂಬಂಧ 50 ಕಂಪನಿ ಮಳಿಗೆಗಳು
Jun 8 2025 11:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮೃಗಶಿರ ಮಳೆ ಕೂಡುವ ವೇಳೆ ಅಸ್ತಮಾಗೆ ಔಷಧಿ
Jun 6 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಾವರಗೇರಿ ಕೊಲೆ ಪ್ರಕರಣ : ಮುಖ್ಯ ಆರೋಪಿಗಳು ಅರೆಸ್ಟ್ ಆಗಿಲ್ಲ
May 31 2025 9:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ಸಹಾಯ ಮಾಡಲು ಯುವಕನ ಮನವಿ
May 31 2025 8:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಸ್ತ್ರಚಿಕಿತ್ಸೆಗಾಗಿ ಆರ್ಥಿಕ ಸಹಾಯಕ್ಕೆ ಮನವಿ
May 31 2025 8:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೂನ್ 2 ನಂತರ ಕುಡಿಯುವ ನೀರು ಪೋರೈಕೆ ಬಂದ್ ?
May 30 2025 8:54PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಜನೌಷಧಿ ಕೇಂದ್ರ ಸ್ಥಗಿತಕ್ಕೆ ಆದೇಶ : ಬಿಜೆಪಿ ಪ್ರತಿಭಟನೆ
May 30 2025 10:58AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಪತ್ನಿ ಕೊಂದು ಪತಿ ಪರಾರಿ
May 29 2025 10:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಬೈ ಎಲೆಕ್ಷನ್ ಆದ್ರೆ ಕಾಂಗ್ರೆಸ್ ಟಿಕೆಟ್ ಯಾರಿಗೆ ?





     
Copyright © 2021 Agni Divya News. All Rights Reserved.
Designed & Developed by We Make Digitize