ಕೊಪ್ಪಳ : ಸಾರಿಗೆ ಸಂಸ್ಥೆಯ 'ಚಾಲಕರ ದಿನ' ವನ್ನು ಶುಕ್ರವಾರ ಬಸ್ ನಿಲ್ದಾಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಡಿವೈಎಸ್ಪಿ ಮುತ್ತಣ್ಣ ಸರವಗೋಳ ಚಾಲನೆ ನೀಡಿ ಉತ್ತಮ ಮತ್ತು ಸುರಕ್ಷೀತ ಚಾಲನೆಗೆ ಹೆಸರಾದ ಸಂಸ್ಥೆಯ ಚಾಲಕರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಕೊಪ್ಪಳ ಸಾರಿಗೆ ವಿಭಾಗದಲ್ಲಿ 2024 ರಲ್ಲಿ 300 ಕ್ಕೂ ಹೆಚ್ಚು ದಿನ ಚಾಲನಾ ಕರ್ತವ್ಯ ನಿರ್ವಹಿಸಿದ ಎಂ.ಡಿ.ಶೇಕ್ ಉಸ್ಮಾನ್, ಅಶೋಕ ಡೊಳ್ಳಿನ, ಉಮೇಶ ಗೌಡ ಸೇರಿದಂತೆ 46 ಚಾಲಕರಿಗೆ ಡಿವೈಎಸ್ಪಿ ಮುತ್ತಣ್ಣ ಸರವಗೊಳ ಸಾರಿಗೆ ವಿಭಾಗೀಯ ಕಚೇರಿಯ ಪ್ರಶಂಸಾ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಡಿಪೋ ಮ್ಯಾನೇಜರ್ ರಮೇಶ ಚಿಣಗಿ ಮಾತನಾಡಿ ನಮ್ಮ ಸಾರಿಗೆ ಸಂಸ್ಥೆಯ ಚಾಲಕರು ನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸುವ ಕಾರ್ಯದಲ್ಲಿ ತೊಡಗಿ ಉಳಿದ ಸಿಬ್ಬಂದಿ ಜೊತೆ ಚಾಲಕರೂ ಸಂಸ್ಥೆಯ ಏಳಿಗೆಗೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅಭಿನಂದನಾರ್ಹರು ಸಂಸ್ಥೆಯ ಪರವಾಗಿ ಚಾಲಕರಿಗೆ ಅಭಿನಂದನೆಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ವೆಂಕಟೇಶ್, ಡಿಟಿಒ ರಾಜೇಂದ್ರ ಜಾಧವ, ಕಾರ್ಮಿಕ ಕಲ್ಯಾಣ ಅಧಿಕಾರಿ ಸತ್ಯನಾರಾಯಣ, ಅಕೌಂಟ್ ಆಫೀಸರ್ ಜಯಶ್ರೀ, ಸಂಚಾರಿ ನಿರೀಕ್ಷಕರು ಕಾವ್ಯ, ನಿಲ್ದಾಣಾಧಿಕಾರಿ ಮಂಜುನಾಥ ಬಂಡಿ, ಕಂಟ್ರೋಲರ್ ಗಳಾದ ರವೀಂದ್ರ , ಶಾಲೂ ತಾಯಿ, ಅಮೀನಸಾಬ ಕೋಳಿ, ಮಾರುತಿ ದಾಸರ, ಚೆನ್ನಮ್ಮ, ಸಾವಿತ್ರಿ, ಶರಣಮ್ಮ , ಕೊಪ್ಪಳ ಡಿಪೋದ ನಾಗರಾಜ ನಾಗಿರೆಡ್ಡಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.