ಕೊಪ್ಪಳ : ವಿವಿಧ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದ್ದ ಸರಕಾರಿ ಹಾಸ್ಟೆಲ್ ಮತ್ತು ಹೊರಗುತ್ತಿಗೆ ನೌಕರರ ಸಂಘ ನಡೆಸುತ್ತಿರುವ ಅಹೋರಾತ್ರಿ ಹೋರಾಟ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಬುಧವಾರ ಮೂರನೇ ದಿನವಾದರೂ ನಮ್ಮ ಬೇಡಿಕೆಗಳ ಬಗ್ಗೆ ಸರಕಾರ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಜಿಲ್ಲಾಡಳಿತ ಭವನಕ್ಕೆ ಹೊರಟ ಹೋರಾಟಗಾರರನ್ನು ಪೊಲೀಸರು ತಡೆದ ಸಂದರ್ಭದಲ್ಲಿ ನೂಕಾಟ ನಡೆದು ಪ್ರತಿಭಟನಾ ನಿರತ ಅನೇಕ ಮಹಿಳೆಯರು ಪ್ರಜ್ಣೆ ತಪ್ಪಿದರು.
ಕೂಡಲೇ ಅವರಿಗೆ ಉಳಿದ ಮಹಿಳೆಯರು ಉಪಚರಿಸಿದರು. ಕೆಲವರಿಗೆ ಪ್ರಜ್ಞೆ ಬಂದರೆ ಓರ್ವ ಹಿರಿಯ ಮಹಿಳೆ ಪ್ರಜ್ಞೆ ಬಾರದ್ದಕ್ಕೆ ಪೊಲೀಸರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ರತಿಭಟನಾ ನಿರತರ ಮುಖಂಡ ಗ್ಯಾನೇಶ್ ಕಡಗದ ಸೇರಿದಂತೆ ಅನೇಕರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.