ಕೊಪ್ಪಳ : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಾಹಿತ್ಯಶ್ರೀ ಪ್ರಶಸ್ತಿ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಜನೆವರಿ 22 ಬುಧವಾರ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಸಂಜೆ 4 ಗಂಟೆ ಜರುಗಲಿದೆ.
2021 ನೇ ವರ್ಷದ ಅಕಾಡೆಮಿಯ ಪುಸ್ತಕ ದತ್ತಿ ಬಹುಮಾನಕ್ಕೆ ಅಕ್ಷಯ ಕಾಂತಬೈಲು, ಡಾ. ಶ್ರೀಧರ ಎಚ್.ಜಿ, ಸಹನಾ ಕಾಂತಬೈಲು, ಡಾ. ನಾಗ ಎಚ್. ಹುಬ್ಳಿ , ಡಾ. ಪ್ರಸಾದಸ್ಬಾಮಿ ಎಸ್, ಸುಮಂಗಲಾ, ಅಕ್ಷಯ ಪಂಡಿತ್, ಡಾ. ಸುಶಿ ಕಾಡನಕುಪ್ಪೆ ಆಯ್ಕೆಯಾಗಿದ್ದಾರೆ.
2021 ನೇ ವರ್ಷದ ಪುಸ್ತಕ ಬಹುಮಾನಕ್ಕೆ ಚೀಮನಹಳ್ಳಿ ರಮೇಶಬಾಬು, ಡಾ. ಶೈಲೇಶ್ ಕುಮಾರ್, ಡಾ. ಗಜಾನನ ಶರ್ಮ, ಜಿ.ವಿ. ಆನಂದಮೂರ್ತಿ, ಬಿ. ಆರ್ . ಪೊಲೀಸ್ ಪಾಟೀಲ್, ಭಾರತಿ ಬಿ.ವಿ, ಡಾ. ಎಸ್.ಪಿ. ಪದ್ಮಪ್ರಸಾದ್, ಡಾ. ಡೊಮೆನಿಕ್ ಡಿ, ಡಾ. ಎಚ್.ಎಸ್. ಸತ್ಯನಾರಾಯಣ, ಸಿ.ವಿ.ಶೇಷಾದ್ರಿ ಹೊಳವನಹಳ್ಳಿ , ಡಾ. ಕಿರಣ್ ವಿ.ಎಸ್, ಡಾ. ಕೆ.ಎಸ್. ನಾಗರಾಜ, ಡಾ. ಎ. ಎಸ್. ಪ್ರಭಾಕರ, ದಾದಾಪೀರ್ ಜೈಮನ್, ಮುಜಾಫರ್ ಅಸ್ಸಾದಿ, ಡಾ. ಜಿ. ಕೃಷ್ಣಪ್ಪ , ಯಶಸ್ವಿನಿ ಕದ್ರಿ ಆಯ್ಕೆಯಾಗಿದ್ದಾರೆ.
2022 ನೇ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಗೆ ಡಾ. ಬಂಜಗೆರೆ ಜಯಪ್ರಕಾಶ, ಡಾ. ಎಂ.ಜಿ. ಮಂಜುನಾಥ, ಡಾ. ರಾಜಶೇಖರ ಹತಗುಂದಿ, ದಾಸನೂರು ಕೂಸಣ್ಣ , ಡಾ. ಅನಸೂಯ ಕಾಂಬಳೆ, ಬಿ. ಮಹೇಶ್ ಹರವೆ, ಎಚ್.ಎನ್.ಆರತಿ, ಚಲಂ ಹಾಡ್ಲಹಳ್ಳಿ , ರೂಮಿ ಹರೀಶ್, ಡಾ. ಸಾರಿಕಾದೇವಿ ಎಲ್. ಕಾಳಗಿ ಆಯ್ಕೆಯಾಗಿದ್ದಾರೆ.
2022 ನೇ ವರ್ಷದ ಗೌರವ ಪ್ರಶಸ್ತಿಗೆ ಪ್ರೊ. ಆರ್. ಕೆ. ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಡಾ. ಇಂದಿರಾ ಹೆಗ್ಗಡೆ, ರಂಜಾನ್ ದರ್ಗಾ, ತಂಬಾಡಿ ರಾಮಯ್ಯ ಆಯ್ಕೆಯಾಗಿದ್ದು ಈ ಎಲ್ಲ ಮಹನೀಯರಿಗೆ ಪ್ರಶಸ್ತಿ ಹಾಗೂ ಬಹುಮಾನ ಪ್ರದಾನ ಜರುಗಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಪ್ರಸ್ತಾವಿಕ ನುಡಿ ಹೇಳಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿರುವರು.
ಈ ಕುರಿತು ಸೋಮವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಎಲ್.ಎನ್. ಮುಕುಂದರಾಜ್. ಈ ಸಂದರ್ಭದಲ್ಲಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಅಕಾಡೆಮಿ ಸದಸ್ಯರು ಅಜಮೀರ ನಂದಾಪುರ, ಡಾ. ಪಿ. ಚಂದ್ರಿಕಾ ಉಪಸ್ಥಿತರಿದ್ದರು.