ಕೊಪ್ಪಳ : ಮರಗಳು ಇಲ್ಲದ ಮನುಷ್ಯರ ಬದುಕು ಊಹಿಸಲು ಅಸಾಧ್ಯ , ಮರಗಳು ಬೆಳೆದಷ್ಟು ಮನುಕುಲ ಉಳಿಯುತ್ತದೆ ಎಂದು ಡಿ.ಎಸ್.ಪಿ ಮುತ್ತಣ್ಣ ಸವರಗೋಳ ನುಡಿದರು.
ಅವರು ರವಿವಾರ ಕೊಪ್ಪಳ ಚಾರಣ ಬಳಗ ಮತ್ತು ಪರಿಸರ ಪ್ರೇಮಿಗಳು ಆಯೋಜಿಸಿದ್ದಚಜಿಲ್ಲಾ ಕ್ರೀಡಾ ವಸತಿ ಶಾಲೆ ಹತ್ತಿರ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಬಿಸಿಲಿನ ತಾಪ ಅತಿ ಹೆಚ್ಚುತ್ತಿರುವುದಕ್ಕೆ ಮನುಷ್ಯನ ದುರಾಶೆಗಳೇ ಕಾರಣ. ಪ್ರತಿಯೊಬ್ಬರು ಕನಿಷ್ಠ ಒಂದು ಸಸಿ ನೆಟ್ಟು ಬೆಳೆಸಿದರೆ ನಮ್ಮ ಪರಿಸರ ತಂಪಾಗಿರುತ್ತದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠಲ ಜಾಬಗೌಡರ್, ಹಿರಿಯರಾದ ವಿ.ಎಂ.ಭೂಸನೂರುಮಠ, ಡಾ. ಎಸ್.ಬಿ.ದಾನರೆಡ್ಡಿ, ನಗರ ಠಾಣೆಯ ಇನ್ಸಪೆಕ್ಟರ್ ಜಯಪ್ರಕಾಶ .ಕೆ ಡಾ. ಕವಿತಾ ಹ್ಯಾಟಿ ಮುಂತಾದವರು ಮಾತನಾಡಿದರು.
ಡಾ. ವಿ.ಎಸ್.ಮಾದಿನೂರು. ಡಾ. ಅನಿರುದ್ಧ ಕುಷ್ಟಗಿ, ಬಸವರಾಜ ಸಂಕನಗೌಡರ್, ಗವಿಕುಮಾರ ಕಸ್ತೂರಿ, ಜಮುಜಾ, ಡಾ.ಬಾಲು ತಳವಾರ, ಗುರುರಾಜ ವೈ.ಜಿ, ಸಿ.ಬಿ.ಪಾಟೀಲ್, ಮಹಾಂತೇಶ ಸಂಗಟಿ, ಕ್ರೀಡಾ ಇಲಾಖೆ ತರಬೇತಿದಾರ ವಿಶ್ವನಾಥ ಉಪಸ್ಥಿತರಿದ್ದರು.
ಕೊಪ್ಪಳ ಚಾರಣ ಬಳಗದ ಸಂಯೋಜಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಡಾ. ವಿಜಯ ಸುಂಕದ್ ಕಾರ್ಯಕ್ರಮ ನಿರ್ವಹಿಸಿದರು.