Advt. 
 Views   195

ಕೆಡಿ ಸಿನಿಮಾ ಹಾಡು ವಿರುದ್ಧ ಮಹಿಳಾ ಸಂಘಟನೆ ಆಕ್ರೋಶ

Mar 18, 2026, 04:47 AM IST
ಕೆಡಿ ಸಿನಿಮಾ ಹಾಡು ವಿರುದ್ಧ ಮಹಿಳಾ ಸಂಘಟನೆ ಆಕ್ರೋಶ

ಕೊಪ್ಪಳ : ನಿರ್ದೇಶಕ ಪ್ರೇಮ್ ರ "ಕೆಡಿ ದಿ ಡೆವಿಲ್" ಚಿತ್ರದ "ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ 'ಎಂಬ ಹಾಡಿನ ವಿವಾದ ರಾಜ್ಯದಲ್ಲಿ ತೀವ್ರಗೊಂಡಿದ್ದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ( ಎಐಎಂಎಸ್ ಎಸ್)ಯ ಜಿಲ್ಲಾ ಕಾರ್ಯದರ್ಶಿ ಶಾರದಾ ಗಡ್ಡಿ ಹಾಡಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೆಡಿ ಸಿನಿಮಾ ಹಾಡಿನಲ್ಲಿ ಸಭ್ಯತೆಯ ಚೌಕಟ್ಟು ಮುರಿದು, ನಿರ್ದೇಶಕರು ಸಾಮಾಜಿಕ ಬೇಜವಾಬ್ದಾರಿತನ ಪ್ರದರ್ಶಿಸಿ ಹಾಡಿನ ಸಾಹಿತ್ಯ ಅಶ್ಲೀಲವಾಗಿ ರಚಿಸಿ ಮಹಿಳೆಯರನ್ನು ಭೋಗದ ವಸ್ತು ಎಂಬಂತೆ ಚಿತ್ರಿಸಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಿಂದ ಮೌಲ್ಯ ಆದರ್ಶ ಕಳೆದುಕೊಂಡು, ವಿಕೃತತೆ ಕ್ರೌರ್ಯ ಹಾಗೂ ಹಿಂಸಾಪ್ರವೃತ್ತಿಗೆ ಬಲಿಯಾಗುತ್ತಿರುವ ಸಮಾಜದಲ್ಲಿ ಇಂಥ ಕೀಳು ಅಭಿರುಚಿಯ ಹಾಡು ತಪ್ಪು ದಾರಿ ತುಳಿಯಲು ಪ್ರೇರೇಪಿಸುವಂತಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅಪರಾಧಗಳ ಸಂದರ್ಭದಲ್ಲಿ ಹೆಣ್ಣನ್ನು ಬಳಸಿ ಬಿಸಾಕುವ, ಮೋಜಿನ ವಸ್ತುವಿನಂತೆ ಬಿಂಬಿಸುವ ಅಶ್ಲೀಲ ಜಾಹೀರಾತು, ಸಿನಿಮಾ ಸಾಹಿತ್ಯ ಮನುಷ್ಯರನ್ನು ಮೃಗೀಯರನ್ನಾಗಿಸಿ ಅಪರಾಧಗಳನ್ನು ಹೆಚ್ಚಿಸುತ್ತದೆ.

ಕೆ ಡಿ - ದಿ ಡೆವಿಲ್ ಸಿನಿಮಾ ಸೆನ್ಸಾರ್ ಮುನ್ನವೆ ಹಾಡನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿರುವುದು ಸೆನ್ಸಾರ್ ಮಂಡಳಿಯ ವೈಫಲ್ಯ ತೋರಿಸುತ್ತದೆ.

ಇದಕ್ಕೂ ಮುನ್ನ ಟಾಕ್ಸಿಕ್ ಸಿನಿಮಾ ಟೀಸರ್‌ನಲ್ಲಿ ನಟ, ನಟಿಯರು ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು
ಇಂಥ ದೃಶ್ಯಗಳಿರುವ ಸಿನಿಮಾಗಳಿಗೆ ಚಿತ್ರಮಂದಿರದಲ್ಲಿ ಮಕ್ಕಳನ್ನು ಪ್ರವೇಶಿಸದಂತೆ ತಡೆಯಬೇಕು.

ಟೀಸರ್‌ಗಳಿಗೂ ಸ್ಪಷ್ಟ ಮಾರ್ಗಸೂಚಿಗಳನ್ನು ಸೆನ್ಸಾರ್ ಮಂಡಳಿ ರೂಪಿಸಬೇಕು. ಮಂಡಳಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಶಾರದಾ ಗಡ್ಡಿ ಆಗ್ರಹಿಸಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize