Advt. 
 Views   151

ಕೊಪ್ಪಳದಲ್ಲಿ ಮಾರ್ಚ್ 4 ಕ್ಕೆ ಹೋಳಿ ಹಬ್ಬ : ಟೈಂ ಫಿಕ್ಸ್ ಆಗಿಲ್ಲ

Feb 26, 2026, 04:29 AM IST
ಕೊಪ್ಪಳದಲ್ಲಿ ಮಾರ್ಚ್ 4 ಕ್ಕೆ ಹೋಳಿ ಹಬ್ಬ : ಟೈಂ ಫಿಕ್ಸ್ ಆಗಿಲ್ಲ

ಕೊಪ್ಪಳ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ನಿಂದ ಕೊಪ್ಪಳ ತಾಲೂಕ ಕ್ರೀಡಾಂಗಣದಲ್ಲಿ ಹೋಳಿ ಹಬ್ಬ ಆಚರಣೆ ಮಾರ್ಚ್ 4ರಂದು ನಡೆಯಲಿದೆ.

ಕಳೆದ ಬಾರಿಯಂತೆ ಈ ಸಲವೂ ಹೋಳಿ ಹಬ್ಬವನ್ನು ಅಸೋಸಿಯೇಷನ್ ಆಯೋಜಿಸಿದ್ದು ಈ ಹೋಳಿ ಹಬ್ಬದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಹೋಳಿ ಹಬ್ಬದಲ್ಲಿ ಖ್ಯಾತ ಡಿಜೆ ಆಪರೇಟರ್ ನಕುಲ್ ಡಿಜೆ ಸೌಂಡ್ ಹಾಗೂ ರೇನ್ ಡ್ಯಾನ್ಸ್ ಇರುತ್ತದೆ.

ಸಾವಿರಾರು ಜನರು ಹೋಳಿ ಹಬ್ಬದಲ್ಲಿ ಭಾಗವಹಿಸುವುದರಿಂದ ತಾಲೂಕು ಕ್ರೀಡಾಂಗಣದಲ್ಲಿ ಸಿಸಿಟಿವಿ ಅಳವಡಿಸಲಾಗುತ್ತದೆ.

ಹೋಳಿ ಹಬ್ಬದಲ್ಲಿ ಭಾಗವಹಿಸಲು ಆಗಮಿಸುವ ಎಲ್ಲರಿಗೂ ಉಚಿತವಾಗಿ ಉಪಹಾರ ಹಾಗೂ ಬಣ್ಣದ ವ್ಯವಸ್ಥೆ ಅಸೋಸಿಯೇಷನ್ ಯಿಂದ ಮಾಡಲಾಗುತ್ತದೆ. ಕೊಪ್ಪಳ ಜನತೆ ಒಂದೇ ಕಡೆ ಸೇರಿ ಹೋಳಿ ಹಬ್ಬ ಆಚರಣೆ ಮಾಡುವಂತೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸಂಸದರು ಹಾಗೂ ಅಸೋಸಿಯೇಷನ್ ಅಧ್ಯಕ್ಷರು ರಾಜಶೇಖರ ಹಿಟ್ನಾಳ , ಉಪಾಧ್ಯಕ್ಷರಾದ ಶ್ರೀನಿವಾಸ ಗುಪ್ತ , ಸದಸ್ಯರಾದ ರಾಮಣ್ಣ ಹದ್ದಿನ್ , ಪರಶುರಾಮ ಕಿಡದಾಳ ಹೇಳಿದರು.

ಆದರೆ ಹೋಳಿ ಹಬ್ಬದ ದಿನದಂದು ಅಂದರೆ ಮಾರ್ಚ್ 4 ರಂದು ಮಧ್ಯಾಹ್ನ 2 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಇರುತ್ತದೆ. ತಾಲೂಕು ಕ್ರೀಡಾಂಗಣಕ್ಕೆ ಹೊಂದಿಕೊಂಡು ಪಿಯುಸಿ ಪರೀಕ್ಷಾ ಕೇಂದ್ರ ಇರುವುದರಿಂದ ಅಂದಿನ ಹೋಳಿ ಹಬ್ಬದ ಟೈಂ ಇನ್ನೂ ಫಿಕ್ಸ್ ಆಗಿಲ್ಲ. ಟೈಂ ಬಗ್ಗೆ ಮಾರ್ಚ್ 1 ರಂದು ಪ್ರಕಟಿಸಲಾಗುತ್ತದೆ. ಹೋಳಿಯಂದು ತಾಲೂಕು ಕ್ರೀಡಾಂಗಣವರೆಗೆ ಹೋಳಿ ಮೆರವಣಿಗೆ ಆಯೋಜಿಸುವ ವಿಚಾರ ಇದೆ ಎಂದು ರಾಜಶೇಖರ ಹಿಟ್ನಾಳ ಹೇಳಿದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Apr 13 2026 8:34AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಸ್ತೆ ಬದಿ ಯುವಕರಿಬ್ಬರ ಶವ ಪತ್ತೆ
Apr 11 2026 4:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ನಗರ ಬಿಜೆಪಿ ಮಂಡಲಕ್ಕೆ ನೂತನ ತಂಡ ಪ್ರಕಟ
Apr 11 2026 3:44AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಧ್ಯರಾತ್ರಿ ಹೊತ್ತಿನಲ್ಲಿ 10 ಹಂದಿ ಕಳ್ಳತನ
Apr 9 2026 6:45AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಕಾಲೇಜಿಗೆ ಹೆಮ್ಮೆ ತಂದ ಫಲಿತಾಂಶ
Apr 9 2026 5:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ SVC ಕಾಲೇಜು : ಮೊದಲ ಬ್ಯಾಚಿನ ಫಲಿತಾಂಶ ತಾಲೂಕಿಗೆ ಟಾಪ್
Apr 9 2026 6:49AM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ತೀರದಲ್ಲಿ ಅಕ್ರಮ ಮರಳು ದಂಧೆ : ಜನರ ಆಕ್ರೋಶ
Apr 7 2026 7:22AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಿಂದಿ ಪರ ರಾಜ್ಯಪಾಲರು : ಕರವೇ ಆಕ್ರೋಶದ ಪ್ರತಿಭಟನೆ
Apr 6 2026 9:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಹಕ್ಕೊತ್ತಾಯ
Apr 6 2026 6:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಂಪಿ ಪ್ರಾಧಿಕಾರದಿಂದ ಮುಕ್ತಿ ಕೊಡಿ : ಕೊಪ್ಪಳದಲ್ಲಿ ಆಗ್ರಹ
Apr 4 2026 8:52AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಂಚಕ್ಕೆ ಕೈ ಚಾಚಿದ ಪೊಲೀಸರು ಲೋಕಾಯುಕ್ತರ ಬಲೆಗೆ




Copyright © 2026 Agni Divya. All Rights Reserved.
Designed & Developed by We Make Digitize