Advt. 
 Views   236

ಹಣತೆ ಹಚ್ಚಿ ಮನ ಬೆಳಗುವಳು ಕೋಪದಲ್ಲಿ ನನ್ನನ್ನೇ ಜ್ವಲಿಸುವಳು

Feb 21, 2026, 07:50 PM IST
ಹಣತೆ ಹಚ್ಚಿ ಮನ ಬೆಳಗುವಳು ಕೋಪದಲ್ಲಿ ನನ್ನನ್ನೇ ಜ್ವಲಿಸುವಳು

ಅವಳು...

ನನ್ನವಳು ಒಂದರ್ಥದಲಿ ಚಂಚಲೆ
ಬದಲಾಗುವ ಸಮಯದಂತೆ ಅವಳ ಮನಸು

ಒಂದೊಂದು ಸಂದರ್ಭದಲ್ಲಿ ಒಂದೊಂದು ತರಹ
ಒಮ್ಮೆ ನಗಿಸಿ, ಮತ್ತೊಮ್ಮೆ ಅಳಿಸುವಳು

ಒಮ್ಮೊಮ್ಮೆ ನಕ್ಕು ಅಳಿಸುವಳು
ಜೊತೆಗೆ ತಾನೂ ಅಳುವಳು

ನನ್ನನ್ನು ಇಂಚಿಂಚು ಬಲ್ಲವಳು
ಆದರೂ ನನ್ನ ಮುಂದೆ ಅವಳು ಮುಗ್ದೆ

ನನ್ನವಳು ಒಮ್ಮೊಮ್ಮೆ ವಾಗ್ಮಿ, ಬೃಹಸ್ಪತಿ
ಆದರೂ ಕೆಲವು ಸಲ ಮಂತ್ರಮುಗ್ದೆ

ಎಲ್ಲಾ ಅರಿತವಳು ಇವಳು
ಆದರೂ ಮರೆತಂತೆ ನಟಿಸುತ್ತಾಳೆ

ಮನಸ್ಸಲ್ಲಿ ನೋವು ತುಂಬಿದಾಗ
ಮಾತೇ ಮರೆತು ಹೋಗುವಳು

ಒಲವ ತುಂಬಿದ ಹೃದಯಸಾಗರದಲ್ಲಿ
ಮುನಿಸಿನ ಸುನಾಮಿ ಬೀಸಿ ತಾನೇ ಮರೆಯಾಗುವಳು

ಬೆಟ್ಟದಷ್ಟು ಪ್ರೀತಿಯ ತೋರುತ್ತಾ
ಬೆಟ್ಟದ ಮೇಲತ್ತಿ ನಿಲ್ಲುತ್ತಾಳೆ

ಬಯ್ದು ಬಯ್ದು ಸುಸ್ತಾಗಿ
ಬಂದು ಬಿಗಿದಪ್ಪಿ ಮುತ್ತಿಕ್ಕುತ್ತಾಳೆ

ಅವಳು ವಾಚಾಳಿ, ವಾಕ್ಚತುರೆ
ಮುದ್ದಿಸುತ್ತಾಳೆ, ಅಪ್ಪಿಕೊಳ್ಳುತ್ತಾಳೆ

ರೋಷದಲ್ಲಿ ದೂರ ತಳ್ಳಿ ದುಃಖಿಸುವಳು
ವಾತ್ಸಲ್ಯ ತೋರಿ ಹತ್ತಿರ ಕರೆಯುವಳು

ಒಲವಿನ ಸಾಲ ಕೊಡುತ್ತಾಳೆ
ನೋವಿನ ಬಡ್ಡಿ ಸೇರಿಸಿ ವಸೂಲಿ ಮಾಡುತ್ತಾಳೆ

ಹಣತೆ ಹಚ್ಚಿ ಮನ ಬೆಳಗುವಳು
ಕೋಪದಲ್ಲಿ ನನ್ನನ್ನೇ ಜ್ವಲಿಸುವಳು

ಪ್ರತೀ ಮಾತಿಗೂ ಕರಗುತ್ತಾಳೆ
ಕೊನೆಗೆ ಕೊರಗಿ ಸೊರಗಿ ಕೂರುತ್ತಾಳೆ

ಒಮ್ಮೆ ಕವನ, ಒಮ್ಮೆ ಕಥೆ
ಒಮ್ಮೊಮ್ಮೆ ಕ್ಲಿಷ್ಟ ಕಾದಂಬರಿಯಾಗುತ್ತಾಳೆ

ಆದರೂ ಅವಳೇ ನನಗೆ ಸ್ಪೂರ್ತಿ
ನನ್ನನ್ನು ಸೋಲಿಸಲು ಬರುವ ಜಯ ಅವಳು

ನೂರು ನೋವಿನ ನಡುವೆ ಬದುಕುವ ಅವಳು
ನನ್ನ ಉಸಿರಿಗೆ ಉಸಿರಾಗಿ ಬೆರೆಯುತ್ತಾಳೆ
- ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್
---------------
ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್
ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-583231, ಮೊ. ಸಂ: 9448570340
Email:- skotnekal@Gmail.com



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Apr 13 2026 8:34AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಸ್ತೆ ಬದಿ ಯುವಕರಿಬ್ಬರ ಶವ ಪತ್ತೆ
Apr 11 2026 4:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ನಗರ ಬಿಜೆಪಿ ಮಂಡಲಕ್ಕೆ ನೂತನ ತಂಡ ಪ್ರಕಟ
Apr 11 2026 3:44AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಧ್ಯರಾತ್ರಿ ಹೊತ್ತಿನಲ್ಲಿ 10 ಹಂದಿ ಕಳ್ಳತನ
Apr 9 2026 6:45AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಕಾಲೇಜಿಗೆ ಹೆಮ್ಮೆ ತಂದ ಫಲಿತಾಂಶ
Apr 9 2026 5:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ SVC ಕಾಲೇಜು : ಮೊದಲ ಬ್ಯಾಚಿನ ಫಲಿತಾಂಶ ತಾಲೂಕಿಗೆ ಟಾಪ್
Apr 9 2026 6:49AM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ತೀರದಲ್ಲಿ ಅಕ್ರಮ ಮರಳು ದಂಧೆ : ಜನರ ಆಕ್ರೋಶ
Apr 7 2026 7:22AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಿಂದಿ ಪರ ರಾಜ್ಯಪಾಲರು : ಕರವೇ ಆಕ್ರೋಶದ ಪ್ರತಿಭಟನೆ
Apr 6 2026 9:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಹಕ್ಕೊತ್ತಾಯ
Apr 6 2026 6:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಂಪಿ ಪ್ರಾಧಿಕಾರದಿಂದ ಮುಕ್ತಿ ಕೊಡಿ : ಕೊಪ್ಪಳದಲ್ಲಿ ಆಗ್ರಹ
Apr 4 2026 8:52AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಂಚಕ್ಕೆ ಕೈ ಚಾಚಿದ ಪೊಲೀಸರು ಲೋಕಾಯುಕ್ತರ ಬಲೆಗೆ




Copyright © 2026 Agni Divya. All Rights Reserved.
Designed & Developed by We Make Digitize