Advt. 
 Views   4305
Jan 30 2023 12:05AM

ದಿ. ಶಾಂತಾದೇವಿ ಹಿರೇಮಠ ಅವರ ಪ್ರಥಮ ಪುಣ್ಯಸ್ಮರಣೆ


ಅದೇನೋ ಅವ್ಯಕ್ತ ಆತಂಕ ಭಾವನೆಗಳು
ಕಣ್ಣರಿಯದಿದ್ದರೂ ಚುರುಗುಟ್ಟಿತು ಕರುಳು
ಮುಂಬರುವ ಸಂಕಟದ ಮುನ್ಸೂಚನೆಗಳು
ತಾಯಿಮಗಳ ಕರುಳಬಳ್ಳಿ ಕತ್ತರಿಸಬಹುದೆ ?

ಹೆತ್ತು ಹಾಲುಣಿಸದಿದ್ದರೂ ತುತ್ತಿಟ್ಟವಳು
ಹೊತ್ತು ಲಾಲಿಸದಿದ್ದರೂ ಹೊತ್ತಿಗಾದವಳು
ಮಧುರ ನೆನಪುಗಳ ಉಡಿ ತುಂಬಿದವಳು
ತಾಯಿಮಗಳ ಬಾಂಧವ್ಯಬಳ್ಳಿ ಬಾಡಬಹುದೆ ?

ಪುಟ್ಟ ಹೃದಯವನು ಜೇನಲದ್ದಿದವಳು
ದಿಟ್ಟತನದಿ ಬದುಕಿ  ದಿಕ್ಕು ತೋರಿದವಳು
ಅವರಿವರೆನ್ನದೆ  ಒಪ್ಪಿಅಪ್ಪಿದ ಗುಣದವಳು
ತಾಯಿಮಗಳ ಸ್ನೇಹದಬಳ್ಳಿ ಒಣಗಬಹುದೆ ?

ಕಾಲನಕರೆಯ ಮುನ್ನವೇ ಸ್ವಾಗತಿಸಿದವಳು
ದೇಹದಾನವ ಮಾಡಿ ಮಾದರಿಯಾದವಳು                             
ಅಕ್ಕರದಿ ಅಕ್ಷರಗಳನು ಉಸಿರಾಡಿದವಳು
ತಾಯಿಮಗಳ ಅರಿವಿನಬಳ್ಳಿ ಮುರಟಬಹುದೆ ?

ಸುಟ್ಟ ಬತ್ತಿಯನೇ ಮತ್ತೆಮತ್ತೆ ಹೊಸೆದವಳು
ತಾನುರಿದು ನಂದಾದೀಪವಾಗಿ ಬೆಳಗಿದವಳು
ಬಾಳಸಂಜೆಯ ಪಯಣದಿ ಶಾಂತವಾದವಳು
ತಾಯಿಮಗಳ ಪ್ರೀತಿಬಳ್ಳಿ ಮತ್ತೆ ಚಿಗುರದಿರಬಹುದೆ !

- ಶ್ರೀಮತಿ ವಿಜಯಲಕ್ಷ್ಮಿ ಕೊಟಗಿ

   ಮೊ :  9632240787.
( ದಿ. ಶಾಂತಾದೇವಿ ಹಿರೇಮಠರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ನುಡಿನಮನ)



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 18 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂತೋಷ ಲಾಡ್ ಕಾರ್ಯಕ್ರಮಕ್ಕೆ ತಂಗಡಗಿ ಹಿಟ್ನಾಳ ಗೈರು
Jul 17 2025 2:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಚಿರತೆ ದಾಳಿಗೆ 13 ಕುರಿಗಳು ಬಲಿ
Jul 17 2025 12:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಳೆಗೆ ಮನೆ ಕುಸಿದು ಒಂದೂವರೆ ವರ್ಷದ ಮಗು ಸಾವು
Jul 16 2025 9:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಾಣಾಪುರದಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ ತೆರವು
Jul 16 2025 9:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿ ತಂಗಡಗಿ ಮನೆ ಗೇಟಿನಲ್ಲಿ ಪ್ರತಿಭಟನೆ
Jul 15 2025 9:09PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಫ್ರಿ ಬಸ್ ಸಂಭ್ರಮದ ನಡುವೆ ಕೊಪ್ಪಳ ರಸ್ತೆಯ ದುಃಖಗಾಥೆ
Jul 15 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಕಾರ್ಮಿಕರ ಬೃಹತ್ ಪ್ರತಿಭಟನೆ
Jul 15 2025 9:06AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸ್ಮಶಾನ ಜಾಗ ಅಭಾವ : ರಸ್ತೆ ಪಕ್ಕ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದ ಗ್ರಾಮಸ್ಥರು
Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ





     
Copyright © 2021 Agni Divya News. All Rights Reserved.
Designed & Developed by We Make Digitize