Advt. 
 Views   3610
Jul 24 2022 8:13PM

ಹಳೆ ವಿದ್ಯಾರ್ಥಿಗಳ ಬಳಗದಿಂದ ಕೃತಿಗಳ ಬಿಡುಗಡೆ-ಅವಲೋಕನ


ಕೊಪ್ಪಳ : ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಸವರಾಜ ಪುಜಾರ ಅವರ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ 2000-01 ನೇ ಸಾಲಿನ ವಿದ್ಯಾರ್ಥಿಗಳಿಂದ ಯಶಸ್ವಿಯಾಗಿ, ಸಂಭ್ರಮದಿಂದ ಜರುಗಿತು.

ಹಳೆ ವಿದ್ಯಾರ್ಥಿಗಳೆ ಕಾರ್ಯಕ್ರಮ ಆಯೋಜಿಸಿ ಕೃತಿ ಲೋಕಾರ್ಪಣೆಗೊಳಿಸಿ, ಕೃತಿ ಕುರಿತು ಮಾತನಾಡಿದ್ದು ಮತ್ತು ಹಿರಿಯ ಸಾಹಿತಿಗಳು ಸಭಿಕರಾಗಿ ಕುಳಿತು ಸಾಹಿತ್ಯಕ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮವನ್ನು ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ ಉದ್ಘಾಟಿಸಿದರು.
----------------------
ಎಷ್ಟೋ ಜನರಿಗೆ ಶಾಲೆಗಳಿಗೆ ಅವಕಾಶ ಇಲ್ಲದ ಆ ಕಾಲದಲ್ಲಿ ಅಂಬೇಡ್ಕರ್ ಅವರು ಕೊಟ್ಟ ಹಕ್ಕು ಮತ್ತು ಸೌಲಭ್ಯದಿಂದ ಅಕ್ಷರ ಕಲಿತು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ನನ್ನ ಉದ್ಯೋಗದ ಆರಂಭದ ದಿನಗಳಲ್ಲಿ ಬಸವರಾಜ ಪುಜಾರ ಸರ್, ಪರೀಕ್ಷಿತರಾಜ್ ಸರ್ ಧನ ಸಹಾಯ ಮಾಡಿದ್ದಾರೆ. ನಾನು ಎರಡು ಸಲ ನಗರಸಭೆ ಸದಸ್ಯನಾಗಿ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಎಲ್ಲ ಅವರ ಸಹಕಾರ.  ಪುಜಾರ ಸರ್ ಐದು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯ.
- ಮುತ್ತುರಾಜ ಕುಷ್ಟಗಿ ನಗರಭೆ ಸದಸ್ಯರು
------------------
ಶರಣರು, ದಾಸರು, ಸೂಫಿ ಸಂತರ ತತ್ವಗಳಿಂದ ಈ ಭಾಗ ಸೌಹಾದದ ನೆಲೆವೀಡು. ಎಲ್ಲ ಧರ್ಮಗಳಲ್ಲೂ ಮೂಲಭೂತವಾದಿಗಳಿದ್ದಾರೆ. ಅಂಥವರಿಂದ ಎಲ್ಲ ಧರ್ಮದ ಶಾಂತಿಪ್ರಿಯರ ಬದುಕು ಅಲ್ಲೋಲ ಕಲ್ಲೋಲಗೊಳ್ಳುವುದು. ಅದನ್ನು ಮೀರಿ ನಿಲ್ಲಲು ಸೌಹಾರ್ದ ತಾಣಗಳತ್ತ ಗಮನ ಹರಿಸುವ ಅವಶ್ಯಕತೆಯಿದೆ. ಜಿಲ್ಲೆಯ ಕೋಮು ಸೌಹಾರ್ದ ತಾಣಗಳ ಬಗ್ಗೆ ಪುಜಾರ ಸರ್ PHD ಕೃತಿ ಮಹತ್ವದ ಕೃತಿ.
- ಮಂಜುನಾಥ ಡೊಳ್ಳಿನ
ಹಿರಿಯ ಸಹಾಯ ವಾರ್ತಾಧಿಕಾರಿಗಳು
( ಕೊಪ್ಪಳ ಜಿಲ್ಲೆಯ ಕೋಮು ಸೌಹಾರ್ದ ತಾಣಗಳು ಕೃತಿ ಕುರಿತು)
-------------------
ಮಾತು ಸೃಷ್ಟಿಕರ್ತನ ಅನುಗ್ರಹಗಳಲ್ಲಿ ಒಂದು. ವಿಶ್ವದಲ್ಲಿ ಅತ್ಯಂತ ಹರಿತ, ಕಹಿ ಮತ್ತು ಸಿಹಿಯಾದದ್ದು ಮಾತು. ಮಾತಿನಿಂದ ಜಗತ್ತು ಗೆಲ್ಲಲು ಸಾಧ್ಯವಿದೆ.
- ಜಾಫರ್ ಗೇಟಿನ್
(ಮಾತೆಂಬುದು ಮಕರಂದ ಕೃತಿ ಕುರಿತು)
--------------------
ಹಳೆಗನ್ನಡ ಮತ್ತು ವಚನಗಳ ಪ್ರಭಾವ ಈ ಕೃತಿಯಲ್ಲಿದೆ. ಬರಹದಲ್ಲಿ ಉಪನ್ಯಾಸಕರ ಚಿಂತನೆ, ಸಂಶೋಧಕರ ವಿಮರ್ಶಾ ದೃಷ್ಟಿಕೋನ, ಸಂವಾದದ ಸ್ವರೂಪ ಎಲ್ಲ ಮೇಳೈಸಿದೆ ಈ ಕೃತಿಯಲ್ಲಿ.
- ಶಂಕ್ರಯ್ಯ ಅಬ್ಬಿಗೇರಿಮಠ ಉಪನ್ಯಾಸಕರು
( ಮೌನದೊಳಗಿನ ಮಾತು ಕೃತಿ ಕುರಿತು)

ಗವಿಸಿದ್ದಪ್ಪ ದೊಡ್ಡಮನಿ 'ಕಾಲ್ನಡಿಗೆ' ಕೃತಿ ಕುರಿತು, ಮಂಜುನಾಥ ತಿಮ್ಮಕ್ಕನವರ 'ಹಿತ್ತಲ ಗಿಡ ಮದ್ದು' ಕೃತಿ ಕುರಿತು ಮಾತನಾಡಿದರು.
------------------
ಶಿಕ್ಷಕ ವೃತ್ತಿ ಅನನ್ಯವಾದದ್ದು. ವಿದ್ಯೆ ಹೇಳಿಕೊಟ್ಟ ಗುರುಗಳ ಋಣ ಯಾವ ರೀತಿಯಲ್ಲೂ ತೀರಿಸಲು ಸಾದ್ಯವಿಲ್ಲ. ದೇಶದ ಅನೇಕ ಯುವಕ-ಯುವತಿಯರು ಇಂದು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅವರ ಸಾಧನೆಗಳಿಗೆ ಶಿಕ್ಷಕರ ಕೊಡುಗೆ ಅಪಾರವಾಗಿದೆ.
-ಚಂದ್ರಶೇಖರಗೌಡ ಪಾಟೀಲ್ ಹಲಗೇರಿ
(ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು )
---------------------
ವೇದಿಕೆಯಲ್ಲಿ ರಾಘವೇಂದ್ರ , ಉದ್ಯಮಿ ಶ್ರೀನಿವಾಸ ಗುಪ್ತಾ , ವಕೀಲರಾದ ವೀರನಗೌಡ ಉಪಸ್ಥಿತರಿದ್ದರು.
------------------
ಅಡಿವೆಪ್ಪ ಸ್ವಾಗತಿಸಿದರು.ಕು.ನಿಧಿ ಸವಡಿ ಪ್ರಾರ್ಥಿಸಿದರು. ಮಂಜುಳಾ ಪಾಟೀಲ್ ನಿರೂಪಿಸಿದರು. ಮಿನಾಕ್ಷಿ ಉಪಲಾಪುರ ವಂದಿಸಿದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 4 2025 8:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಕ್ಕರೆ ಕಾರ್ಖಾನೆಗೆ ಎನ್ಓಸಿ ಕೊಡಬೇಡಿ : ಗ್ರಾಮಸ್ಥರ ಒತ್ತಾಯ
Jul 2 2025 9:14PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕರೆಂಟ್ ಕನೆಕ್ಷನ್ ಕಟ್ ಮಾಡಲು ಹೋದವರು ಕರೆಂಟ್ ಬಿಲ್ ಕಟ್ಟಿದರು
Jul 1 2025 8:01AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಮಗಾರಿ ಗುತ್ತಿಗೆ ಹಿಟ್ನಾಳ್ ಕುಟುಂಬದ ಕಪಿಮುಷ್ಠಿಯಲ್ಲಿ : ಸಿವಿಸಿ
Jun 26 2025 11:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ ಇಂಜಿನಿಯರಿಂಗ್ ಕಾಲೇಜ್ ಕಳಪೆ ಕಾಮಗಾರಿ
Jun 25 2025 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಅಭಿವೃದ್ದಿ ಏಕೆ ಮಾಯವಾಗಿದೆ ?
Jun 24 2025 4:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಮ್ಮ ಊರಿನ ಹತ್ರ ಸಕ್ಕರೆ ಫ್ಯಾಕ್ಟರಿ ಬೇಡ
Jun 24 2025 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕುಷ್ಟಗಿ : ವಸತಿ ಇಲಾಖೆಯಲ್ಲಿ ಲಂಚ ಆರೋಪ : ತನಿಖೆ ನಡೆಯಲಿ
Jun 23 2025 9:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಡಾ. ಬಸವರಾಜ ದಿಂಡೂರ ಅಭಿನಂದನಾ ಗ್ರಂಥ ಬಿಡುಗಡೆ
Jun 22 2025 1:35PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ತಪ್ಪಿದ ಭಾರಿ ಅನಾಹುತ
Jun 22 2025 9:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಖಬರಸ್ಥಾನ ಸ್ವಚ್ಚತೆ : ವಾಗ್ವಾದ





     
Copyright © 2021 Agni Divya News. All Rights Reserved.
Designed & Developed by We Make Digitize