Advt. 
 Views   1193
Jul 21 2022 7:16PM

ದಾಂಪತ್ಯದಲ್ಲಿ ಪರಸ್ಪರ ಅರ್ಥಮಾಡಿಕೊಂಡವರ ಬದುಕು ಸ್ವರ್ಗ ಸುಖ


ಅತ್ತ ವಿವಾಹ ಸಂಭ್ರಮ. ಮತ್ತೊಂದೆಡೆ ರುಚಿ ರುಚಿ ಭಕ್ಷ್ಯ ಭೋಜನ, ಇನ್ನೊಂದೆಡೆ ಸಾಹಿತ್ಯದ ಸವಿರುಚಿಯ ಸೊಗಸು. ಇದು ಗುರುವಾರ ಕಂಡು ಬಂದದ್ದು ಕೊಪ್ಪಳದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ.

ಗುರುವಾರ ಶಕ್ತಿಶಾರದೆಯ ಮೇಳ, ಬೆರಗು ಪ್ರಕಾಶನದ ರೂವಾರಿ ಡಿ.ಎಂ.ಬಡಿಗೇರ ಅವರ ಪುತ್ರ ಗೌತಮ ಹಾಗೂ ಸುಪ್ರಿಯಾ ವಿವಾಹ ಸಂದರ್ಭದಲ್ಲಿ.

 ದಾಂಪತ್ಯದಲ್ಲಿ ಪರಸ್ಪರ ಅರ್ಥಮಾಡಿಕೊಂಡವರ ಬದುಕು ಸ್ವರ್ಗ ಸುಖ. ಸಂಸಾರದಲ್ಲಿ ಏರಿಳಿತ ಸಾಮಾನ್ಯ. ಸಂಸಾರದಲ್ಲಿ ಬಾಗಿದವರು ಸುಖವಾಗಿ ಬಾಳುತ್ತಾರೆ. ಇದು ಸುಖ ಸಂಸಾರದ ಗುಟ್ಟು ಎಂದು ಖ್ಯಾತ ವಾಗ್ಮಿ ಡಾ. ಶಂಭು ಬಳಿಗಾರ ಅವರು ಸುಖಿ ದಾಂಪತ್ಯದ ಬಗ್ಗೆ  ಹೇಳಿದರು.

ಸಂಸಾರ ಅಂಂದ್ರೆ ಮೂರು ಥರ. ಹಾಲು-ಜೇನು- ಹೊಂದಾಣಿಕೆ ಮತ್ತು ಸುಖ. ಹಾಲು-ನೀರು- ಹೊಂದಾಣಿಕೆ ಮತ್ತು ತುಸು ನೆಮ್ಮದಿ.  ಹುಳಿ ಮಜ್ಜಿಗೆ ಹೇಳೋದೆ ಬೇಡ. ಸಂಸಾರದಲ್ಲಿ ಸುಖವಾಗಿ ಬಾಳಲು ಶ್ರೀಮಂತಿಕೆ- ಬಡತನ ಕಾರಣ ಅಲ್ಲ. ಸಮರಸವೇ ದಾಂಪತ್ಯದ ನಿಜವಾದ ಗುಟ್ಟು ಎಂದು ಅವರು ಹೇಳಿದರು. 

ವಿವಾಹಿತ ಮತ್ತು ಅವಿವಾಹಿತರ ಮಸ್ಥಿತಿ ಇಲಿ ಮತ್ತು ಬೋನಿಗೆ ಹೋಲಿಸಿ ಹೇಳಿದ ರೂಪಕ ಸಾಹಿತ್ಯಾಸಕ್ತರನ್ನು ನಗೆಗಡಲಲ್ಲಿ ತೇಲಿಸಿತು.

ಮದುವೆ ಮತ್ತು ದಾಂಪತ್ಯ ಕುರಿತ ಅನೇಕ ಪ್ರಸಂಗಗಳ ಬಗ್ಗೆ ಉಪಮೇಯಗಳೊಂದಿಗೆ ರಸವತ್ತಾಗಿ ವಿವರಿಸುತ್ತ ನೆರೆದ ಸಾಹಿತ್ಯಾಸಕ್ತರ ಮನಗೆದ್ದರು.

'ಬಡವನಾದರೇನು ಪ್ರಿಯೆ ಕೈ ತುತ್ತು ಉಣಿಸುವೆ' ಹಾಡಿನ ಖ್ಯಾತಿಯ ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ ಕೊಪ್ಪಳದ ಸಾಹಿತ್ಯ ವಲಯದ ಒಡನಾಟ ನೆನೆದರು. ತಮಗೆ ಬಂದಿರುವ 'ಜಾಜಿ ಮಲ್ಲಿಗೆ ಕವಿ' ಬಿರುದು  ಕೊಪ್ಪಳದಲ್ಲಿ ಜರುಗಿದ 62 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ನಿರೂಪಿಸುತ್ತಿದ್ದ ಸಾಹಿತಿ ವಿಜಯಶ್ರೀ ಸಬರದರವರು ಕೊಟ್ಟ ಬಿರುದು ಶಾಶ್ವತವಾಗಿ ತಮ್ಮೊಂದಿಗೆ ಇರುವ ನೆನಪುಗಳನ್ನು ಮೆಲುಕು ಹಾಕಿದರು.

ಡಾ.ಸಿದ್ದಲಿಂಗ ಪಟ್ಟಣಶೆಟ್ಟಿಯವರ ಮೊದಲ ಕವನ ಸಂಕಲನ 'ನೀನಾ' ಮರುಮುದ್ರಣದ ಲೋಕಾರ್ಪಣೆ ಮಾಡಿದ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಚೆನ್ನಬಸವಣ್ಣ  ಮಾತನಾಡಿದರು.

ಹೇಮಾ ಪಟ್ಟಣಶೆಟ್ಟಿಯವರು ದಾಂಪತ್ಯದ ಕಾವ್ಯ ವಾಚನ ಮಾಡಿದರು. ಖ್ಯಾತ ಪ್ರಬಂಧಕಾರ ಈರಪ್ಪ ಕಂಬಳಿ ಮಾತನಾಡಿದರು. ಸಾಹಿತಿ ಹೆಚ್.ಎಸ್.ಪಾಟೀಲರು ಅಧ್ಯಕ್ಷತೆ ವಹಿಸಿದ್ದರು. ಬೆರಗು ಪ್ರಕಾಶನದ ಡಿ.ಎಂ.ಬಡಿಗೇರ ಉಪಸ್ಥಿತರಿದ್ದರು.

ಸಾಹಿತಿ ಮಹೇಶ ಬಳ್ಳಾರಿ ನಿರೂಪಿಸಿದರು. ಗವಿಸಿದ್ದಪ್ಪ ಕೊಪ್ಪಳ ವಂದಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಆರ್.ಎಸ್. ಸರಗಣಾಚಾರ, ಅಂದಪ್ಪ ಬೆಣಕಲ್, ಡಾ.ಮಹಾಂತೇಶ ಮಲ್ಲನಗೌಡರ, ರಮೇಶ ಬನ್ನಿಕೊಪ್ಪ , ಹಿರಿಯ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಸಾವಿತ್ರಿ ಮುಜುಮದಾರ, ಮಲ್ಲಿಕಾರ್ಜುನ ಹ್ಯಾಟಿ, ಶರಣಬಸಪ್ಪ ದಾನಕೈ , ರಾಜೇಶ ಯಾವಗಲ್, ಎಸ್.ಟಿ.ಹಂಚಿನಾಳ, ಸುಮಂಗಲಾ ಹಂಚಿನಾಳ,  ಕಳಕೇಶ ಬಳಿಗಾರ ಸೇರಿದಂತೆ ಜಿಲ್ಲೆಯ ಸಾಹಿತ್ಯ ವಲಯದ ಅನೇಕ ಮಹನೀಯರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Mar 25 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ಯಾರಂಟಿ ಸಮಿತಿಗಳನ್ನು ರದ್ದುಪಡಿಸಿ : KRS ಪಕ್ಷ ಆಗ್ರಹ
Mar 25 2025 5:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : OFC ಕೇಬಲ್ ಗಳಿಗೆ ಬೆಂಕಿ ಅವಘಡ
Mar 24 2025 9:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
Mar 24 2025 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ
Mar 23 2025 2:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಮಸ್ಯೆಗಳಿಗೆ ದನಿಯಾದರೆ ಸಮ್ಮೇಳನಗಳಿಗೆ ಸಾರ್ಥಕತೆ : ಮಾಲಾ ಬಡಿಗೇರ
Mar 21 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 21 2025 10:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 19 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಧ್ವನಿ ಎತ್ತಿದವರಿಗೆ ಥ್ಯಾಂಕ್ಸ್ ಮೌನಿಗಳ ವಿರುದ್ದ ಆಕ್ರೋಶ
Mar 19 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮದ್ಯ ಜೂಜಾಟದ ಕೇಸಿಗೆ ಯಾರೂ ಜಮಾನತ್ ಕೊಡಲ್ಲ
Mar 19 2025 8:39AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸರಕಾರಕ್ಕೆ ಪತ್ರ ಬರೆದ ಹಾಲವರ್ತಿ ಗ್ರಾಮಸ್ಥರು





     
Copyright © 2021 Agni Divya News. All Rights Reserved.
Designed & Developed by We Make Digitize