Advt. 
 Views   259

ಲಾರಿಗೆ ಸಿಲುಕುತ್ತಿದ್ದ ರೈತ : ನೇಣಿಗೆ ಯತ್ನಿಸಿದ ರೈತ ಮಹಿಳೆ

Oct 13, 2026, 08:55 PM IST
ಲಾರಿಗೆ ಸಿಲುಕುತ್ತಿದ್ದ ರೈತ : ನೇಣಿಗೆ ಯತ್ನಿಸಿದ ರೈತ ಮಹಿಳೆ

ಕೊಪ್ಪಳ : ಇಂದು ರೈತ ಸಂಘದಿಂದ ಹಿಟ್ನಾಳ ಟೋಲ್ ಗೇಟ್ ನಲ್ಲಿ ನಡೆದ ಹೆದ್ದಾರಿ ಬಂದ್ ಸಂದರ್ಭ ಇಬ್ಬರು ಪ್ರಾಣಪಾಯಕ್ಕೆ ಸಿಲುಕುವ ಅಪಾಯ ಎದುರಾಗಿತ್ತು.

ಓರ್ವ ರೈತ ಲಾರಿಗಳ ಚಕ್ರಕ್ಕೆ ಸಿಲುಕುವ, ಬೇಡಿಕೆಗಳಿಗಾಗಿ ರೈತ ಮಹಿಳೆಯೊಬ್ಬರು ನೇಣು ಹಾಕಿಕೊಳ್ಳಲು ಹೋದ ಘಟನೆಗಳು ಜರುಗಿದವು.

ಎರಡೂ ಘಟನೆಗಳಲ್ಲಿ ಅದೃಷ್ಠವಶಾತ್ ಇಬ್ಬರೂ ಪಾರಾದರು. ರೈತ ಹೋರಾಟಗಾರರು, ಪೊಲೀಸರು ನಿಟ್ಟುಸಿರು ಬಿಟ್ಟರು.

ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿಗೆ ತರಬೇಕು, ಟನ್ ಕಬ್ಬಿಗೆ ₹5500 ನಿಗದಿ ಮಾಡಬೇಕು, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ₹ 60 ನಿಗದಿಪಡಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳೊಂದಿಗೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ರೈತ ಸಂಘ (ಚುನ್ನಪ್ಪ ಪುಜೇರಿ ಬಣ) ಬೃಹತ್ ಹೋರಾಟ ನಡೆಸಿತು.

ಬೇಡಿಕೆಗಳ ಬಗ್ಗೆ ಕೇಂದ್ರ ಸಚಿವರು ಪ್ರಹ್ಲಾದ ಜೋಶಿ ದೆಹಲಿಗೆ ಬರುವಂತೆ ನೀಡಿದ್ದ ಆಹ್ವಾನದಂತೆ ನಿನ್ನೆ ದೆಹಲಿಯಲ್ಲಿ ಸಚಿವರು ಮತ್ತು ರೈತ ಸಂಘದ ಮಾತುಕತೆ ವಿಫಲವಾಗಿದೆ.

ಹಾಗಾಗಿ ಇಂದು ಮತ್ತೆ ತಮ್ಮ ಬೇಡಿಕೆ ಈಡೇರಿಸುವಂತೆ ರಾಜ್ಯದ ಅನೇಕ ಕಡೆ ಹಮ್ಮಿಕೊಂಡಿದ್ದ ಹೆದ್ದಾರಿ ಬಂದ್ ಕರೆಯಂತೆ ಕೊಪ್ಪಳ ಜಿಲ್ಲಾಧ್ಯಕ್ಷರು ಸುಖಮುನಿಯಪ್ಪ, ಗೌರವಾಧ್ಯಕ್ಷರು ಬಸವರಾಜ ಚಿಲವಾಡಗಿ ನೇತೃತ್ವದಲ್ಲಿ ರೈತ ಸಂಘ ಹಿಟ್ನಾಳ ಟೋಲ್ ನಲ್ಲಿ ಮೂರು ತಾಸು ಹೆದ್ದಾರಿ ಬಂದ್ ಮಾಡಿತು. ಈ ಹೋರಾಟದಲ್ಲಿ ಕ್ರಾಂತಿಕಾರಿ ಕಿಸಾನ್ ಸೇನೆ ಸಾಥ್ ನೀಡಿತು.

ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ರೈತರ ಬೃಹತ್ ನೋಡಿ ಪೊಲೀಸ್ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿತ್ತು. 11 ಗಂಟೆಗೆ ಹುಲಿಗಿಗೆ ಹೊರಟಿದ್ದ ಬಸ್ ತಡೆದ ರೈತರು ಪಕ್ಕದಲ್ಲಿ ಬೃಹತ್ ಲಾರಿ ಹೊರಟಿದ್ದು ಲಾರಿ ತಡೆಯಲು ರೈತ ರಸ್ತೆಯಲ್ಲೇ ಅಡ್ಡ ಮಲಗಿದಾಗ ಗದ್ದಲ ಗೊಂದಲದಲ್ಲೆ ಚಾಲಕ ಲಾರಿ ಚಾಲನೆ ಮಾಡುತ್ತಲೇ ಬಂದಾಗ ರೈತ ಲಾರಿ ಚಕ್ರಕ್ಕೆ ಸಿಲುಕುತ್ತಿದ್ದ. ರೈತನನ್ನು ಉಳಿಸಿದ ಹೋರಾಟಗಾರರು ರೊಚ್ಚಿಗೆದ್ದು ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆ ನಂತರ ಹೆದ್ದಾರಿ ಸಂಪೂರ್ಣ ಸ್ತಬ್ದಗೊಂಡು ಕೊಪ್ಪಳ ಬಾಗಲಕೋಟೆ, ಟಿಬಿ ಡ್ಯಾಮ್ ನತ್ತ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತವು.

ರೈತರ ಬೇಡಿಕೆಗಳ ಮನವಿ ಸ್ವೀಕರಿಸಲು ಸ್ವತಃ ಜಿಲ್ಲಾಧಿಕಾರಿಗಳು ಟೋಲ್ ಗೇಟ್ ಹತ್ತಿರ ಆಗಮಿಸಿದರು. ಹೋರಾಟಗಾರರು ತಮ್ಮ ಬೇಡಿಕೆಗಳ ಕುರಿತು ಸವಿಸ್ತಾರವಾಗಿ ಮಾತನಾಡುತ್ತಿದ್ದರು. ಅದೇ ಹೊತ್ತಿಗೆ ಹತ್ತಿರದ ಗಿಡಕ್ಕೆ ರೈತ ಮಹಿಳೆಯೊಬ್ಬರು ನೇಣು ಹಾಕಿಕೊಳ್ಳಲು ಯತ್ನಿಸಿದಾಗ ಸ್ವಲ್ಪ ಹೊತ್ತು ಆತಂಕ ಗೊಂದಲ ಉಂಟಾಯಿತು.

ರೈತ ಮಹಿಳೆಯನ್ನು ಬಚಾವ್ ಮಾಡಿ ಅಸ್ವಸ್ಥಗೊಂಡ ಆ ಮಹಿಳೆಗೆ ಚಿಕಿತ್ಸೆಗಾಗಿ ಪೊಲೀಸ್ ವಾಹನದಲ್ಲಿ ಕೊಪ್ಪಳಕ್ಕೆ ಕರೆತರಲಾಯಿತು.

ಮನವಿಯನ್ನ ಸಲ್ಲಿಕೆ ನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮತ್ತೆ ವಾಹನಗಳ ಸಂಚಾರ ಆರಂಭವಾಯಿತು. ಸಂಚಾರ ಸಹಜ ಸ್ಥಿತಿಗೆ ಬರಲು ಸುಮಾರು ಒಂದು ಗಂಟೆ ಬೇಕಾಯಿತು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 15 2026 3:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗವಿಶಂಕರ ಅವರ ಸಾಧನೆಗೆ ರಾಜ್ಯಮಟ್ಟದ ಪ್ರಶಸ್ತಿ
Nov 14 2026 7:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ವಿರುದ್ದ ಜನಾಂದೋಲನ ರೂಪಿಸಿ : ಹೆಚ್ಡಿಕೆ
Nov 13 2026 8:16PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಚಿವರ ಸಮ್ಮುಖ ಹಾಸ್ಟೆಲ್ ದುಸ್ಥಿತಿ ಹೇಳಿದ್ರು ಹೇಮಲತಾ ನಾಯಕ
Nov 13 2026 8:09AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಶಾ ಕಾರ್ಯಕರ್ತೆಯರಿಂದ ಅಹೋರಾತ್ರಿ ಅನಿರ್ದಿಷ್ಟ ಧರಣಿ
Nov 12 2026 6:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವರ್ಷವಾದರೂ ಮುಗಿಯದ ರಸ್ತೆ ಕಾಮಗಾರಿ : ಜೆಡಿಎಸ್ ಆಕ್ರೋಶ
Nov 12 2026 4:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಎಎಸ್ಪಿ ಸರಕಾರಿ ಕಾರಿಗೆ ಟಿಟಿ ವಾಹನ ಡಿಕ್ಕಿ
Nov 11 2026 4:24PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನವೆಂಬರ್ 15 ರಂದು ರಾಜ್ಯಮಟ್ಟದ ಸಮಾವೇಶ
Nov 11 2026 8:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜನರ ಕೈಗೆ ಸಿಗದೆ ತಪ್ಪಿಸಿಕೊಂಡ ಖದೀಮ ಪೊಲೀಸರ ಬಲೆಗೆ ಬಿದ್ದ
Nov 10 2026 7:55PM | ವಿಶೇಷ ವರದಿ | ಆಸಕ್ತಿಕರ ವಿಷಯಗಳು ದೀಪಾವಳಿ ಸಂಭ್ರಮದ ನಡುವೆ ದುಃಖಿತರ ಮನೆಗೆ ಭೇಟಿ
Nov 9 2026 6:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಳಕಾಗೋಣ... ಮತ್ತೊಬ್ಬರ ಸಂಕಷ್ಟದ ಬದುಕಿಗೂ




Copyright © 2026 Agni Divya. All Rights Reserved.
Designed & Developed by We Make Digitize