ಕೊಪ್ಪಳ : ಲಾರಿ ಕಾರು ಮಧ್ಯೆ ನಡೆದ ಭೀಕರ ಡಿಕ್ಕಿ ಅಪಘಾತದಲ್ಲಿ ದಂಪತಿಗಳಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕುಷ್ಟಗಿ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಈ ದುರ್ಘಟನೆ ಇಂದು ಮಧ್ಯಾಹ್ನ ಜರುಗಿದ್ದು ಪಂಜಾಬ ಮೂಲದ ರಾಜೀವ್ ಶರ್ಮಾ, ಅವರ ಪತ್ನಿ ಪೂನಂ ರಾಜೀವ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆಗೆ ಕರೆದೊಯ್ಯಲಾಗಿದೆ.
ಬೆಂಗಳೂರು ಮೂಲದ ಲಾರಿ ಮತ್ತು ಕಾರು ನಡುವೆ ಈ ಡಿಕ್ಕಿ ಅಪಘಾತ ನಡೆದಿದೆ. ರಾಜೀವ್ ದಂಪತಿಗಳು ಬೆಂಗಳೂರಿನಿಂದ NH 50 ರಲ್ಲಿ ಸೊಲ್ಲಾಪುರಕ್ಕೆ ಕಾರಿನಲ್ಲಿ ತೆರಳುವಾಗ ಕುಷ್ಟಗಿ ಹತ್ತಿರ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ರಾಜೀವ್ ಕಾಲಿಗೆ ಗಂಭೀರ ಪ್ರಮಾದ ಏಟಾಗಿರುವ ಸಾಧ್ಯತೆ ಕಂಡಿದೆ. ಅವರ ಪತ್ನಿ ಪೂನಂ ಅವರಿಗೆ ಹಣೆ ಬಳಿ ಗಂಭೀರ ಗಾಯ ಆಗಿರುವ ಬಗ್ಗೆ ತಿಳಿದು ಬಂದಿದೆ.