ಕೊಪ್ಪಳ : ಕಳೆದ ವಾರದಿಂದ ನಗರದಲ್ಲಿ ಸರಣಿ ಕಳ್ಳತನ ಮುಂದುವರೆದಿದ್ದು ಇಂದು ಬೆಳಗಿನ ಜಾವ ನಗರ ಪೊಲೀಸ್ ಠಾಣೆ ಹತ್ತಿರದ ಕಿರಾಣಿ ಅಂಗಡಿಯಲ್ಲಿ ಕಳ್ಳತನ ನಡೆದಿದೆ.
ನಗರ ಪೊಲೀಸ್ ಠಾಣೆ ಮುಂದೆ 50 ಮೀಟರ್ ದೂರ ಇರುವ ವೆಂಕಟೇಶ್ವರ ಕಿರಾಣಿ ಸ್ಟೋರ್ ನ ಬೀಗ ಮುರಿದು ಅಥವಾ ಕತ್ತರಿಸಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ಧಾರೆ.
ಎರಡು ಲಕ್ಷಕ್ಕೂ ಹೆಚ್ಚು ನಗದು ಹಣ ಕಳ್ಳತನ ಆಗಿದೆ ಎಂದು ತಿಳಿದು ಬಂದಿದೆ.
ಕಳ್ಳತನ ಜಾಗದಲ್ಲಿ ಬೀಗ ಕಂಡು ಬಂದಿಲ್ಲ ಅಂಗಡಿ ಮುಂದಿನ ರಾಜಕಾಲುವೆಯಲ್ಲಿ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಕೆಲ ದಿನಗಳ ಹಿಂದೆ ಹೊರವಲಯದ ಶಿವಗಂಗಾ ನಗರದಲ್ಲಿ ಒಂದು ಮನೆಯಲ್ಲಿ ಕಳ್ಳತನ , ಇನ್ನೊಂದು ಮನೆಯಲ್ಲಿ ಕಳ್ಳತನ ಯತ್ನ ನಡೆದಿತ್ತು.
ಸೆ.1 ರಂದು ಜಿಲ್ಲಾಸ್ಪತ್ರೆ ಮುಂದಿನ ಮೆಡಿಕಲ್ ಶಾಪ್ , ಬೇಕರಿ, ಹೊಟೆಲ್ ನಲ್ಲಿ ಏಕಕಾಲಕ್ಕೆ ಕಳ್ಳತನ ಆಗಿತ್ತು. ಈ ಮೂರು ಅಂಗಡಿಗಳ ಶಟರ್ಸ್ ಮುರಿದು ಕಳ್ಳತನ ಮಾಡಲಾಗಿತ್ತು.
ವೆಂಕಟೇಶ್ವರ ಕಿರಾಣಿ ಸ್ಟೋರ್ ಗೆ ನಗರ ಠಾಣೆ ಪೊಲೀಸರು ಆಗಮಿಸಿದ್ದು ಸ್ಥಳ ಪರಿಶೀಲಿನೆ ನಡೆಸಿದ್ದು ಬೆರಳಚ್ಚು ವಿಭಾಗದ ಅಧಿಕಾರಿಗಳು ಹಾಗೂ ಶ್ವಾನದಳ ಆಗಮಿಸಿತು.
ಕಳ್ಳತನ ನಡೆದ ಅಂಗಡಿಯಿಂದ ಶ್ವಾನವು ಹಸನ್ ರಸ್ತೆ ಮೂಲಕ ವಾರಕಾರ ಓಣಿ , ಹುಲಿಕೆರೆ ರಸ್ತೆಯಲ್ಲಿ ಸಾಗಿ ಮುಂದೆ ಹೋಗದೆ ನಿಂತಿತು.