ಕೊಪ್ಪಳ : 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ನಿಮಿತ್ಯ ಕೊಪ್ಫಳದ ಎಮ್. ಎಮ್. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಹಾಗೂ ಶ್ರೀ ಗುರು ಮಹಿಪತೀರಾಜ್ ನೇತ್ರ ಭಂಡಾರ- ಸಂಶೋಧನ ಪ್ರತಿಷ್ಠಾನ, ಹುಬ್ಬಳ್ಳಿ ವತಿಯಿಂದ ಶನಿವಾರ (ಸೆ. 5) ನೇತ್ರದಾನ ಕುರಿತು ಜನಜಾಗೃತಿ ಜರುಗಿತು.
ಶ್ರೀ ಗವಿಮಠ ಆವರಣದಲ್ಲಿ ಜಾಥಾಕ್ಕೆ ಚಾಲನೆ ನೀಡಿದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು 'ಮರಣಾನಂತರ ನೇತ್ರದಾನ ಮೂಲಕ ದೃಷ್ಟಿಹೀನರ ಬದುಕಿಗೆ ಬೆಳಕು ನೀಡಬಹುದು. ನೇತ್ರದಾನದ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ' ಎಂದು ತಿಳಿಸಿದರು.
ಜಾಥಾ ಗವಿಮಠ ಆವರಣದಿಂದ ಗಂಜ್ ಸರ್ಕಲ್ ಮೂಲಕ ಹೊಸಪೇಟೆ ರಸ್ತೆಯ ಎಮ್. ಎಮ್. ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ಸಮಾರೋಪಗೊಂಡಿತು.
ಜಾಥಾದಲ್ಲಿ ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ನೇತ್ರದಾನದ ಮಹತ್ವದ ಘೋಷಣೆ ಹೇಳುತ್ತ , ಜಾಗೃತಿ ಫಲಕಗಳ ಪ್ರದರ್ಶಿಸುತ್ತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ. ಪ್ರಕಾಶ್. ಎಚ್, ಪ್ರಮುಖರಾದ ಪದಮ್ ಮೆಹತಾ, ಎಮ್. ಎಮ್. ಜೋಶಿ ಆಸ್ಪತ್ರೆಯ ಸಿಇಓ ಕುತುಬುದ್ಧಿನ್ ಮುಲ್ಲಾ, ಕೊಪ್ಪಳ ಶಾಖೆಯ ನೇತ್ರ ತಜ್ಞರು ಡಾ. ವಾಗೀಶ್ ತೆಗ್ಗಿನಕೇರಿಮಠ, ಕೊಪ್ಪಳ ಶಾಖೆಯ ಮುಖ್ಯಸ್ಥರು ವಿಕ್ರಮ್ ಗುಡಗೇರಿ, ಡಾ. ಗಿರಿಜಾ ಪಾಟೀಲ್, ಮಾರ್ಕೆಟಿಂಗ್ ವ್ಯವಸ್ಥಾಪಕರು ಬಸಯ್ಯ ಹಿರೇಮಠ, ಸಂಸ್ಥೆಯ ಸಿಬ್ಬಂದಿ, ಲಯನ್ಸ್ ಕಣ್ಣಿನ ಆಸ್ಪತ್ರೆ ಸಿಬ್ಬಂದಿಗಳು, ಇನ್ನೆರವೀಲ್ ಕ್ಲಬ್ ಸ್ವಯಂ ಸೇವಾ ಸಂಸ್ಥೆಗಳು, ನ್ಯಾಷನಲ್ ಪ್ಯಾರಾಮೆಡಿಕಲ್ ಕಾಲೇಜು, ಬಸವಶ್ರೀ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜ್, ಆಶಾ ಕಾರ್ಯಕರ್ತೆಯರು, ಶಿವಶಾಂತವೀರ ಕಾಲೇಜ್, ಮರಿಶಾಂತವೀರ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.