Advt. 
 Views   289

ವಿವಿಧ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ SIT ತನಿಖೆಯಾಗಲಿ : ಕೊಡ್ಲಿಪೇಟೆ

Sep 05, 2026, 08:25 PM IST
ವಿವಿಧ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ SIT ತನಿಖೆಯಾಗಲಿ : ಕೊಡ್ಲಿಪೇಟೆ

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಕೋಟ್ಯಾಂತರ ರೂ. ಗಳ ಅಕ್ರಮ ಮತ್ತು ವಂಚನೆಯಲ್ಲಿ ಅಧಿಕಾರಿಗಳ ಪಾತ್ರ ಹಾಗೂ ರಾಜಕೀಯ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಯಬೇಕು ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಕೊಪ್ಪಳದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಹಗರಣ ಸಂಬಂಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು ಸಾರ್ವಜನಿಕರ ಗಮನ ಸೆಳೆದಿವೆ. ಪತ್ರಿಕಾ ವರದಿಗಳ ಬೆನ್ನಲ್ಲೇ ಪ್ರಕರಣದ ತನಿಖೆ ಚುರುಕುಗೊಂಡು ಆರೋಪಿಗಳ ಬಂಧನ ಆಗಿದ್ದು ಸ್ವಾಗತಾರ್ಹ.‌

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 3 ಹುದ್ದೆಗಳಿಗೆ 7 ಮಂದಿಯನ್ನು ಭರ್ತಿ ಮಾಡಿರುವುದೇಕೆ ? ಈ ನೇಮಕಾತಿಯಲ್ಲಿ ನಿಯಮಾವಳಿ ಉಲ್ಲಂಘಿಸಲಾಗಿದೆಯೇ, ಹುದ್ದೆಗಳ ಮಂಜೂರಾತಿ ಮತ್ತು ನೇಮಕಾತಿಯಲ್ಲಿ ಅಧಿಕಾರ ದುರುಪಯೋಗ ಆಗಿದೆಯೇ ? ಅರ್ಹರ ಬದಲು ನಿರ್ದಿಷ್ಟ ವ್ಯಕ್ತಿಗಳಿಗೆ ಅನುಕೂಲ ಮಾಡಲಾಗಿದೆಯೆ ಎಂಬುದು ತನಿಖೆಯಾಗಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಆಗಬೇಕು.

ನಿವೇಶನಗಳ ಹಂಚಿಕೆ, ದಾಖಲೆಗಳ ಸೃಷ್ಟಿ, ಹಣಕಾಸಿನ ಅವ್ಯವಹಾರ ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿ ಇದ್ದರೂ ಸೂಕ್ತ ಕ್ರಮ ಜರುಗಿಸಬೇಕು.

2016 ರಲ್ಲಿ ಸರ್ದಾರ್ ಗಲ್ಲಿಯಲ್ಲಿ ಆರಂಭವಾಗಿರುವ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಗೆ ಇದುವರೆಗೆ ಸ್ವಂತ ಕಟ್ಟಡ ಇಲ್ಲ. ಈ ಶಾಲೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಅನುದಾನದಲ್ಲಿ ಕಟ್ಟಡ ನಿರ್ಮಿಸಬೇಕು.

ಕೊಪ್ಪಳ ನಗರಸಭೆ, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಕಾಮಗಾರಿ, ಟೆಂಡರ್‌ಗಳು, ಅನುದಾನ ಬಳಕೆ ಹಾಗೂ ಭ್ರಷ್ಟಾಚಾರದ ಆರೋಪಗಳಿದ್ದು ಈ ಇಲಾಖೆಗಳ ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡ (SIT) ರಚಿಸಬೇಕು ಎಂದು ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆಗೆ SDPI ಜಿಲ್ಲಾಧ್ಯಕ್ಷರು ಯೂಸುಫ್ ಮೋದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಯಯ್ಯದ್ ಶಾಕಿಬ್,
ನಿಜಾಮುದ್ದಿನ್ ಮಾಳೆಕೊಪ್ಪ, ಕೊಪ್ಪಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರು ಸಲೀಮ್ ಖಾದ್ರಿ , ಕಾರ್ಯದರ್ಶಿ
ಸಯ್ಯದ್ ಸಾದಿಕ್ ಬೆಂಬಲಿಸಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Oct 15 2026 3:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ಟೋಬರ್ 16 ABVP ಬೃಹತ್ ಪ್ರತಿಭಟನೆ
Oct 14 2026 3:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿ ಡಿಕ್ಕಿಯಿಂದ ಬೈಕ್ ಸವಾರ ಸಾವು
Oct 14 2026 3:20PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಂಜನಾದ್ರಿ ಬೆಟ್ಟ : ವಿದ್ಯಾದಾಸ ಬಾಬಾ ವಿರುದ್ದ FIR
Oct 13 2026 8:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಸಿಲುಕುತ್ತಿದ್ದ ರೈತ : ನೇಣಿಗೆ ಯತ್ನಿಸಿದ ರೈತ ಮಹಿಳೆ
Oct 12 2026 7:00PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜಕೀಯದ ಮೂಲಕ ಗೌಡರ ಹೊಸ ಇನ್ನಿಂಗ್ಸ್
Oct 12 2026 5:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ದಂಪತಿಗೆ ಗಂಭೀರ ಗಾಯ
Oct 11 2026 4:24PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದಸರಾ ವೇದಿಕೆಯಲ್ಲಿ ಪರಿಸರದ ಕಳಕಳಿ
Oct 9 2026 7:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದಸರಾ ಉದ್ಘಾಟಿಸಲಿದ್ದಾರೆ ಗವಿಶ್ರೀಗಳು : ಮುಸ್ಲಿಂ ಸಮುದಾಯದಿಂದ ಅಭಿನಂದನೆ
Oct 9 2026 8:22AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಜಾತಿ ನಿಂದನೆ ಪ್ರಕರಣ : ಪ್ರತಿದೂರು ದಾಖಲು
Oct 8 2026 8:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶ್ರೀ ಹುಲಿಗೆಮ್ಮ ದೇವಿ ಹುಂಡಿ ಎಣಿಕೆ: ₹47.45 ಲಕ್ಷ ಸಂಗ್ರಹ




Copyright © 2026 Agni Divya. All Rights Reserved.
Designed & Developed by We Make Digitize