ಕೊಪ್ಪಳ : ಜಿಲ್ಲಾಸ್ಪತ್ರೆ ಆವರಣದ ಪಾರ್ಕಿಂಗ್ ಜಾಗದಿಂದ ಕಳ್ಳತನ ಆಗಿದ್ದ ಬೈಕ್ ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ 16 ಬೈಕ್ ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ ಕೌಲ್ ಬಜಾರ ಮೂಲದ 20 ವರ್ಷದ ಇರ್ಫಾನ್ (ಹಾಲಿ ವಸ್ತಿ ಹೊಸಪೇಟೆ ) ಎಂಬುವವನು ಅರೆಸ್ಟ್ ಆಗಿದ್ಧಾನೆ.
ಅಗಸ್ಟ್ 21 ರಂದು ಕಾಸನಕಂಡಿಯ ಗವಿಸಿದ್ದಪ್ಪ ಎಂಬುವವರು ತಮ್ಮ ಬೈಕ್ ಅನ್ನು ಕೊಪ್ಪಳ ಜಿಲ್ಲಾಸ್ಪತ್ರೆ ಆವರಣದ ಪಾರ್ಕಿಂಗ್ ಜಾಗದಲ್ಲಿ ಬಿಟ್ಟಿದ್ದರು. ಅಂದು ಬೈಕ್ ಕಳ್ಳತನವಾಗಿದ್ದು ಅಗಸ್ಟ್ 25 ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆಗೆ ಹೊರಟ ಪೊಲೀಸರಿಗೆ ಇರ್ಫಾನ್ ಸಿಕ್ಕು ಬಿದ್ದಿದ್ದು ಇತ ಕದ್ದಿದ್ದ 16 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ 16 ಬೈಕ್ ಗಳ ಮೊತ್ತ 11 ಲಕ್ಷ 90 ಸಾವಿರ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಹೇಳಿದರು.