ಕೊಪ್ಪಳ ನಗರದ ಹುಲಿಕೆರೆ ಹಂದಿಕೆರೆ ಮೋತಿಕೆರೆಗಳ ಮೂಲ ವಿಸ್ತೀರ್ಣ ಮತ್ತು ಒತ್ತುವರಿ ಅಳೆಯದೆ ಅವುಗಳನ್ನ ಅಭಿವೃದ್ಧಿ ಮಾಡೋದು ಅವೈಜ್ಞಾನಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ಎಂದು ಎಂಎಲ್ಸಿ ಹೇಮಲತಾ ನಾಯಕ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಹಂದಿಕೆರೆಗೆ 243 ಲಕ್ಷ, ಮೋತಿ ಕೆರೆಗೆ 241 ಲಕ್ಷದಲ್ಲಿ ಅಭಿವೃದ್ಧಿಗೆ ಶಾಸಕರು ಮುಂದಾಗಿದ್ದಾರೆ. ಆದರೆ ಈ ಕಾಮಗಾರಿಗಳಿಗೆ ಡಿಪಿಆರ್, ಅಂದಾಜು ಪಟ್ಟಿ, ಟೆಂಡರ್ ಆಗಿರುವ ದಾಖಲೆ ಇದೆಯಾ ?ಎಂದು ಅವರು ಪ್ರಶ್ನಿಸಿದ್ದಾರೆ.
ಹುಲಿಕೆರೆ 84 ಎಕರೆ ಅಲ್ಲ 138 ಎಕರೆ ಇದೆ ಎಂದು ಗೊತ್ತಾಗಿದೆ ಅದರಲ್ಲಿ ಆಂಜನೇಯ ಮೂರ್ತಿ ಯಜ್ಞ ಮಂಟಪ ದರ್ಗಾ ಸೇರಿ 26 ಗುಂಟೆ ಒತ್ತುವರಿ ಆಗಿದೆ. ಆ ಒತ್ತುವರಿ ತೆರವು ಇನ್ನೂ ಆಗಿಲ್ಲ. ಹಂದಿಕೆರೆ ಮೋತಿಕೆರೆಗಳ ಸ್ಥಿತಿಯು ಬೇರೆ ಇಲ್ಲ.
ಹಂದಿಕೆರೆ ಮೋತಿಕೆರೆಗಳ ವಿಸ್ತೀರ್ಣ ಎಷ್ಟು ? ಎಷ್ಟು ಒತ್ತುವರಿ ಆಗಿದೆ ? ಎಂಬ ಪ್ರಶ್ನೆಗೆ ಉತ್ತರ ನೀಡಬೇಕು. ಶಾಸಕರು ಅಭಿವೃದ್ಧಿಯ ಹೆಸರಲ್ಲಿ ಅಡಿಗಲ್ಲು ಹಾಕಿ ಪ್ರಚಾರ ಪಡೆಯುವುದು ಸರಿಯಲ್ಲ ಎಂದಿರುವ ಹೇಮಲತಾ ನಾಯಕ ಅವರು ಕೆರೆ ಅಭಿವೃದ್ಧಿ ಕಾಮಗಾರಿಗಳು ಮುಂದೆ ಕಾನೂನು ವಿವಾದಕ್ಕೆ ಸಿಲುಕಿದರೆ ಸರಕಾರದ ಹಣ, ಜನರ ವಿಶ್ವಾಸ ಎಲ್ಲಾ ಹಾಳು.
ಒತ್ತುವರಿ ತೆರವು ಸಂಪೂರ್ಣ ಸರ್ವೇ ಮಾಡಿ ಜಮೀನು ಲಭ್ಯತೆ ನೋಡಿ ಅಭಿವೃದ್ಧಿ ಮಾಡಿ. ಕೆರೆ ಉಳಿಸಿ ಆಮೇಲೆ ಕಾಮಗಾರಿ ಮಾಡಿ. ಮೊದಲು ಒತ್ತುವರಿ ತೆರವು ಮಾಡಿ ಆಮೇಲೆ ಅಡಿಗಲ್ಲು ಹಾಕಿ ಎಂದು ಹೇಮಲತಾ ನಾಯಕ್ ಆಗ್ರಹಿದ್ದಾರೆ.