Advt. 
 Views   237

ಚುನಾವಣಾ ತಯಾರಿ ಬಗ್ಗೆ SDPI ಸಂಘಟನಾ ಸಭೆ

Aug 11, 2026, 05:32 PM IST
ಚುನಾವಣಾ ತಯಾರಿ ಬಗ್ಗೆ SDPI ಸಂಘಟನಾ ಸಭೆ

ಕೊಪ್ಪಳ : ಮುಂಬರುವ ನಗರಸಭೆ ಚುನಾವಣೆ ಹಾಗೂ 2028 ರ ವಿಧಾನಸಭೆ ಚುನಾವಣೆಗೆ SDPI (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಸಿದ್ದತೆ ಆರಂಭಿಸಿದೆ.‌

ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕು ಸಮಿತಿಯ ಸಭೆ ಇಂದು ನಗರದಲ್ಲಿ ಜರುಗಿದೆ. ಪಕ್ಷದ ತಾಲೂಕು ಅಧ್ಯಕ್ಷರು ಸಲೀಂ ಖಾದ್ರಿ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಸಮಿತಿ ಸದಸ್ಯರು ಪಕ್ಷದ ಜಿಲ್ಲಾ ಉಸ್ತುವಾರಿ ಅಬ್ರಾರ್ ಅಹ್ಮದ್ ರವರ ಉಪಸ್ಥಿತಿಯಲ್ಲಿ ಸಭೆ ಜರುಗಿತು.

ಕೊಪ್ಪಳ ನಗರದ ಎಲ್ಲಾ ವಾರ್ಡಗಳಲ್ಲಿ SDPI ಪಕ್ಷವನ್ನು ಇನ್ನಷ್ಟು ಸಂಘಟಿಸಿ ಬಲಿಷ್ಠಗೊಳಿಸುವ ಬಗ್ಗೆ ಹಾಗೂ ನಗರಸಭೆ ಚುನಾವಣೆ ಮತ್ತು 2028 ರ ವಿಧಾನಸಭಾ ಕ್ಷೇತ್ರ ಚುನಾವಣೆ ತಯಾರಿ ಬಗ್ಗೆ ಮಾಹಿತಿ ರೂಪುರೇಷೆಯನ್ನು ಜಿಲ್ಲಾ ಉಸ್ತುವಾರಿ ಅಬ್ರಾರ್ ಅಹ್ಮದ್ ರವರು ವಿವರಿಸಿದರು ಎಂದು ತಿಳಿದು ಬಂದಿದೆ.

ಅದೇ ರೀತಿ ವಿಧಾನಸಭಾ ಕ್ಷೇತ್ರ ಹಾಗೂ ಸ್ಥಳೀಯ ಮಟ್ಟದ ಬೂತ್ ಗಳಲ್ಲಿ ಪಕ್ಷವನ್ನು ಬಲಿಷ್ಟ ಗೊಳಿಸುವ ಬಗ್ಗೆ ಪ್ರಮುಖ ಚರ್ಚಿ ನಡೆಯಿತು ಎಂದು ತಿಳಿದು ಬಂದಿದೆ.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್ ಮಾಳೆಕೊಪ್ಪ, ಜಿಲ್ಲಾ ಕಾರ್ಯದರ್ಶಿ ರಜೀಉರ್ ರೆಹ್ಮಾನ, ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಮುಹ್ಮದ್ ಸಾದಿಕ್ ಮತ್ತು ಸಮಿತಿ ಸದಸ್ಯರು ಹಾಗೂ ಬ್ರಾಂಚ್ ನ ಅಧ್ಯಕ್ಷರು/ಕಾರ್ಯದರ್ಶಿಗಳು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Sep 7 2026 9:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಿರಾಣಿ ಅಂಗಡಿಯಲ್ಲಿ ಕಳ್ಳತನ
Sep 6 2026 7:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೇತ್ರದಾನ ಮಹತ್ವ ಸಾರಿದ ಜಾಗೃತಿ ಜಾಥಾ
Sep 6 2026 7:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಗಲಿದ ರಂಗ ಜಂಗಮರಿಗೆ ನುಡಿ ನಮನ
Sep 6 2026 6:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ
Sep 5 2026 8:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವಿವಿಧ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ SIT ತನಿಖೆಯಾಗಲಿ : ಕೊಡ್ಲಿಪೇಟೆ
Sep 4 2026 3:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾಸ್ಪತ್ರೆ ಪಾರ್ಕಿಂಗ್‌ನಿಂದ ಬೈಕ್ ಕಳ್ಳತನ ಕೇಸ್ ನಿಂದ ಪತ್ತೆ
Sep 3 2026 7:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಬ್ಬಿಗೆ ₹5500 ಬೆಂಬಲ ಬೆಲೆ ನೀಡಿ : ರೈತರ ಆಗ್ರಹ
Sep 3 2026 6:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೊದಲು ಕೆರೆ ಒತ್ತುವರಿ ತೆರವು : ಆಮೇಲೆ ಅಭಿವೃದ್ಧಿ
Sep 2 2026 7:23PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪಿಂಚಣಿ ಸ್ಥಗಿತ ಖಂಡಿಸಿ ಪ್ರತಿಭಟನೆ : ಅರ್ಹರಿಗೆ ಅನ್ಯಾಯ ಬೇಡ
Sep 2 2026 6:01PM | ಜಿಲ್ಲಾ ಸುದ್ದಿಗಳು | ಕೊಪ್ಪಳ KPSC ನೇಮಕಾತಿ ಹಗರಣ ಖಂಡಿಸಿ SFI ಪ್ರತಿಭಟನೆ




Copyright © 2026 Agni Divya. All Rights Reserved.
Designed & Developed by We Make Digitize