Advt. 
 Views   337

ಕೊಪ್ಪಳದಲ್ಲಿ ಜೈಲ್ ಭರೋ ಚಳುವಳಿ

Aug 10, 2026, 05:27 PM IST
ಕೊಪ್ಪಳದಲ್ಲಿ ಜೈಲ್ ಭರೋ ಚಳುವಳಿ

ಕೊಪ್ಪಳ : ಬಲವಂತದ ಭೂಸ್ವಾಧೀನ, ಕಾರ್ಪೋರೇಟ್ ಭೂ ಕಬಳಿಕೆ ವಿರೋಧಿಸಿ ಕಾರ್ಪೊರೇಟ್‌ಗಳೇ ದೇಶ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ CITU , KPRS, AIAWU ಜಂಟಿಯಾಗಿ ಇಂದು ಜೈಲ್ ಭರೋ ಚಳುವಳಿ ನಡೆಸಿದರು.

ಜಿಲ್ಲಾಡಳಿತ ಭವನ ಮುಂದೆ ನೂರಾರು ಪ್ರತಿಭಟನಾಕಾರರನ್ನು ಪೋಲಿಸರು ಬಂಧಿಸಿ ಕರೆದೊಯ್ದರು.

ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಖಾಯಂ ಮಾಡಬೇಕು.
4 ಕಾರ್ಮಿಕ ಸಂಹಿತೆಗಳ ರದ್ದು ಪಡಿಸಿ ಪರಿಷ್ಕರಿಸಿದ ಕನಿಷ್ಠ ವೇತನ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಪಿಂಚಣಿ ನೀಡಬೇಕು. ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ, ಯುವಜನ ವಿರೋಧಿ ಕಾನೂನು ಮತ್ತು ನೀತಿಗಳನ್ನು ಜಾರಿ ಮಾಡುತ್ತ ಜನರ ಹಕ್ಕುಗಳನ್ನು ದಮನಿಸುತ್ತಿವೆ.

ಕೇಂದ್ರ - ರಾಜ್ಯ ಸರ್ಕಾರಗಳು ರೈತರ ಭೂಮಿ ಅಂಬಾನಿ, ಅದಾನಿ ಮುಂತಾದ ದೇಶಿ ವಿದೇಶಿ ಕಂಪನಿಗಳ ಬಾಯಿಗೆ ಹಾಕುತ್ತಿವೆ. ದೇಶದ ಕಾರ್ಮಿಕರನ್ನು ಜೀತಪದ್ಧತಿಗೆ ನೂಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತ ಕೊಪ್ಪಳ ಜಿಲ್ಲೆ ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷರು ಮಂಟನಗೌಡ ನಾಡಗೌಡ, ಸಿಐಟಿಯು ರಾಜ್ಯ ಕಾರ್ಯದರ್ಶಿ ನಿರುಪಾದಿ ಬೆಣಕಲ್ , ದುರುಗಮ್ಮ, ಮಲ್ಲಪ್ಪ ಮ್ಯಾಗಡೆ, ಲಕ್ಷ್ಮೀಸೋನಾರೆ, ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ಜಿಲ್ಲಾಧ್ಯಕ್ಷರು ಬಸವರಾಜ ಎಂ. ಕಾರ್ಯದರ್ಶಿ ಸುಂಕಪ್ಪ, ಬಾಳಪ್ಪ ಹುಲಿಹೈದರ, ಹುಸೇನಪ್ಪ, ಗಂಗಾಧರಯ್ಯ, ಅಕ್ಕಮಹಾದೇವಿ, ಮೇರಿ, ಸಂಗಮ್ಮ, ರೈತ ಸಂಘದ ಶ್ರೀನಿವಾಸ ಹೊಸಳ್ಳಿ, ಶಿವಣ್ಣ, ಫಕೀರಮ್ಮ , SFI ಎಮುಖಂಡ ಶಿವಕುಮಾರ್ ಈಚನಾಳ, ಬಾಲಾಜಿ, ಶರೀಫ್, ನಾಗರಾಜ ಸೇರಿದಂತೆ ನೂರಾರು ಜನ ಬಂಧನಕ್ಕೊಳಗಾದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Sep 7 2026 9:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಿರಾಣಿ ಅಂಗಡಿಯಲ್ಲಿ ಕಳ್ಳತನ
Sep 6 2026 7:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೇತ್ರದಾನ ಮಹತ್ವ ಸಾರಿದ ಜಾಗೃತಿ ಜಾಥಾ
Sep 6 2026 7:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಗಲಿದ ರಂಗ ಜಂಗಮರಿಗೆ ನುಡಿ ನಮನ
Sep 6 2026 6:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ
Sep 5 2026 8:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವಿವಿಧ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ SIT ತನಿಖೆಯಾಗಲಿ : ಕೊಡ್ಲಿಪೇಟೆ
Sep 4 2026 3:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾಸ್ಪತ್ರೆ ಪಾರ್ಕಿಂಗ್‌ನಿಂದ ಬೈಕ್ ಕಳ್ಳತನ ಕೇಸ್ ನಿಂದ ಪತ್ತೆ
Sep 3 2026 7:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಬ್ಬಿಗೆ ₹5500 ಬೆಂಬಲ ಬೆಲೆ ನೀಡಿ : ರೈತರ ಆಗ್ರಹ
Sep 3 2026 6:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೊದಲು ಕೆರೆ ಒತ್ತುವರಿ ತೆರವು : ಆಮೇಲೆ ಅಭಿವೃದ್ಧಿ
Sep 2 2026 7:23PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪಿಂಚಣಿ ಸ್ಥಗಿತ ಖಂಡಿಸಿ ಪ್ರತಿಭಟನೆ : ಅರ್ಹರಿಗೆ ಅನ್ಯಾಯ ಬೇಡ
Sep 2 2026 6:01PM | ಜಿಲ್ಲಾ ಸುದ್ದಿಗಳು | ಕೊಪ್ಪಳ KPSC ನೇಮಕಾತಿ ಹಗರಣ ಖಂಡಿಸಿ SFI ಪ್ರತಿಭಟನೆ




Copyright © 2026 Agni Divya. All Rights Reserved.
Designed & Developed by We Make Digitize