Advt. 
 Views   146

26 ಹುದ್ದೆಗಳಿಗೆ 3 ಸಾವಿರಕ್ಕೂ ಹೆಚ್ಚು ಅರ್ಜಿ

Aug 08, 2026, 08:25 AM IST
26 ಹುದ್ದೆಗಳಿಗೆ 3 ಸಾವಿರಕ್ಕೂ ಹೆಚ್ಚು ಅರ್ಜಿ

ಕೊಪ್ಪಳ : ನಿನ್ನೆ ಶುಕ್ರವಾರ DHO ಕಚೇರಿ ಆವರಣ ಅಂದ್ರೆ ಹಳೆ ಜಿಲ್ಲಾ ಆಸ್ಪತ್ರೆ ಆವರಣ ಮತ್ತದರ ಮುಂದಿನ ರಸ್ತೆಯಲ್ಲಿ ಜನಜಂಗುಳಿ ಸೇರಿತ್ತು.

ಅದು ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಎಷ್ಟಿದೆ ಎಂಬುದು ನಿನ್ನೆ ಸಾಕ್ಷಿಯಾಗಿತ್ತು. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಅದೂ ಒಂದು ವರ್ಷದ ಅವಧಿಯ ಹೊರಗುತ್ತಿಗೆ ನೌಕರಿಗೆ, 26 ಹುದ್ದೆಗಳಿಗೆ 3 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆಗಮಿಸಿದ್ದರು.

ಅರ್ಜಿ ಸಲ್ಲಿಕೆಗೆ ನಿನ್ನೆಯೇ ಕೊನೆ ದಿನವಾದ್ದರಿಂದ ಬೆಳಗ್ಗೆಯಿಂದ ಜಿಲ್ಲಾ ಹಳೆ ಜಿಲ್ಲಾ ಆಸ್ಪತ್ರೆ ಆವರಣ ಮತ್ತು ಮುಂಭಾಗದಲ್ಲಿ ಯುವ ನಿರುದ್ಯೋಗಿಗಳು ಅರ್ಜಿ ಸಲ್ಲಿಸಲು ಜಮಾಯಿಸಿದ್ದರಿಂದ ರಸ್ತೆಯಲ್ಲಿ ಎರಡು ಸಲ ಟ್ರಾಫಿಕ್ ಜಾಮ್ ಆಯ್ತು.

ನಂತರ ಟ್ರಾಫಿಕ್ ಪೊಲೀಸರು ಬಂದು ಸಂಚಾರ ವ್ಯವಸ್ಥೆ ಸರಿ ಪಡಿಸಿದರೂ ಮತ್ತೆ ಆಗಾಗ ಸಂಚಾರ ಸಮಸ್ಯೆ ಉಂಟಾಗುತ್ತಲೆ ಇತ್ತು.

ಅರ್ಜಿ ಸಲ್ಲಿಸಲು ಬಂದ ಮಹಿಳಾ ಅಭ್ಯರ್ಥಿಗಳು ಇಲ್ಲಿ ಅಗತ್ಯ ಸೌಲಭ್ಯಗಳಿಲ್ಲದೆ ಪರದಾಡಿದರು. ಅರ್ಜಿ ಸಲ್ಲಿಸಲು ಬಂದವರಿಗೆ ಮಾಹಿತಿ ಕೌಂಟರ್ ತೆರೆದಿದ್ದು ಸ್ವಲ್ಪ ಮಟ್ಟಿಗೆ ಸಹಾಯ ಆಯಿತು.

ಸ್ಟಾಫ್ ನರ್ಸ್ 11, ಲ್ಯಾಬ್ ಟೆಕ್ನಿಷಿಯನ್ 11, ಫಾರ್ಮಸಿಸ್ಟ್ 4 ಒಟ್ಟು 26 ಹುದ್ದೆಗಳಿಗೆ 3 ಸಾವಿರಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಬೆಳಗ್ಗೆಯಿಂದ ಸಂಜೆ ಆರರವರೆಗೆ ಸರದಿಯಲ್ಲಿ ನಿಂತು ಅರ್ಜಿಗಳನ್ನ ಸಲ್ಲಿಸಿದರು.

ಒಂದು ಹಂತದಲ್ಲಿ ರಸ್ತೆಯಲ್ಲಿ ಪಾರ್ಕಿಂಗ್ ಮತ್ತು ಜಂಗುಳಿಯಿಂದ ಸಂಚಾರಕ್ಕೆ ತೊಂದರೆ ಆಗತೊಡಗಿದಾಗ ಪಕ್ಕದಲ್ಲಿದ್ದ ಈದ್ಗಾ ಕಮಿಟಿಯವರು ಗೇಟ್ ಓಪನ್ ಮಾಡಿ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಟ್ಟರು.

26 ಹುದ್ದೆಗಳಿಗೆ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದು ನೋಡಿದರೆ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದ್ದು ವಿದ್ಯಾವಂತರಿಗೆ ಸೂಕ್ತ ಉದ್ಯೋಗ ಒದಗಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Sep 7 2026 9:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಿರಾಣಿ ಅಂಗಡಿಯಲ್ಲಿ ಕಳ್ಳತನ
Sep 6 2026 7:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೇತ್ರದಾನ ಮಹತ್ವ ಸಾರಿದ ಜಾಗೃತಿ ಜಾಥಾ
Sep 6 2026 7:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಗಲಿದ ರಂಗ ಜಂಗಮರಿಗೆ ನುಡಿ ನಮನ
Sep 6 2026 6:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ
Sep 5 2026 8:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವಿವಿಧ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ SIT ತನಿಖೆಯಾಗಲಿ : ಕೊಡ್ಲಿಪೇಟೆ
Sep 4 2026 3:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾಸ್ಪತ್ರೆ ಪಾರ್ಕಿಂಗ್‌ನಿಂದ ಬೈಕ್ ಕಳ್ಳತನ ಕೇಸ್ ನಿಂದ ಪತ್ತೆ
Sep 3 2026 7:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಬ್ಬಿಗೆ ₹5500 ಬೆಂಬಲ ಬೆಲೆ ನೀಡಿ : ರೈತರ ಆಗ್ರಹ
Sep 3 2026 6:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೊದಲು ಕೆರೆ ಒತ್ತುವರಿ ತೆರವು : ಆಮೇಲೆ ಅಭಿವೃದ್ಧಿ
Sep 2 2026 7:23PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪಿಂಚಣಿ ಸ್ಥಗಿತ ಖಂಡಿಸಿ ಪ್ರತಿಭಟನೆ : ಅರ್ಹರಿಗೆ ಅನ್ಯಾಯ ಬೇಡ
Sep 2 2026 6:01PM | ಜಿಲ್ಲಾ ಸುದ್ದಿಗಳು | ಕೊಪ್ಪಳ KPSC ನೇಮಕಾತಿ ಹಗರಣ ಖಂಡಿಸಿ SFI ಪ್ರತಿಭಟನೆ




Copyright © 2026 Agni Divya. All Rights Reserved.
Designed & Developed by We Make Digitize