ಕೊಪ್ಪಳ : ಕುವೆಂಪು ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಪಾಸಾದ 14 ವಿದ್ಯಾರ್ಥಿಗಳು ಮತ್ತವರ ಪಾಲಕರು ಅದೇ ಶಾಲೆಯಲ್ಲಿ 8ನೇ ತರಗತಿ ಆರಂಭವಾಗುತ್ತೆ ಅಂತ ಕಾಯುತ್ತಿದ್ದಾರೆ.
8ನೇ ತರಗತಿ ಆರಂಭಿಸಿ ಎಂದು ಹಲವಾರು ಬಾರಿ SDMC, ಪಾಲಕರು ಮನವಿ ಮಾಡಿದ್ದಾರೆ. ಕೊಪ್ಪಳ ಶಾಸಕರೂ DDPI ಗೆ ಹೇಳಿದ್ದಾರೆ.
ಆದರೆ DDPI ಸೋಮಶೇಖರ ಗೌಡ ಮಾಡಿದ ತಪ್ಪಿನಿಂದ ಕುವೆಂಪು ನಗರ ಶಾಲೆಯ 14 ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಅಯೋಮಯವಾಗಿದೆ. ಕುವೆಂಪು ನಗರ ಶಾಲೆಯಲ್ಲಿ 8 ನೇ ತರಗತಿ ಆರಂಭಿಸಲು DDPI ಮಾರ್ಚ್ ನಲ್ಲಿ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಆದರೆ DDPI ಸಲ್ಲಿಸಿದ ಪ್ರಸ್ತಾವನೆಯಲ್ಲಿ ಚೆಕ್ ಲಿಸ್ಟ್ ( ಶಾಲೆಯಲ್ಲಿರುವ ವಿದ್ಯಾರ್ಥಿಗಳು, ಕೊಠಡಿ, ಶಿಕ್ಷಕರು, ಮೂಲಭೂತ ಸೌಕರ್ಯ ) ಇಲ್ಲದೆ ನಿಯಮ ಅನುಸರಿಸದೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹಾಗಾಗಿ ಈವರೆಗೆ ಕುವೆಂಪು ನಗರದಲ್ಲಿ 8 ನೇ ತರಗತಿ ಆರಂಭವಾಗದೆ 14 ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಹೇಗೆ ? ಎಂಬ ಪ್ರಶ್ನೆ ಎದುರಾಗಿದೆ. ಇದರ ಹೊಣೆ DDPI ಹೊರುತ್ತಾರಾ ?
ಕುವೆಂಪು ನಗರ 500 ಮನೆಗಳ ಆಶ್ರಯ ಕಾಲೋನಿ. ಅಲ್ಲಿ ಬಡವರು , ದಲಿತರು ಹಿಂದುಳಿದ , ಅಲ್ಪಸಂಖ್ಯಾತ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ 7ನೇ ತರಗತಿ ಪಾಸಾದ 14 ವಿದ್ಯಾರ್ಥಿಗಳು 8 ನೇ ತರಗತಿ ಓದಲು 4 ಕಿ.ಮೀ ದೂರದ ಸಿಪಿಎಸ್ ಶಾಲೆಗೆ ಹೋಗಬೇಕು.
" ರಸ್ತೆಯಲ್ಲಿ ವಿಪರೀತ ವಾಹನ ಸಂದಣಿ ಅಪಘಾತಗಳ ಭಯ ಮೇಲಾಗಿ ರಸ್ತೆಯ ಎರಡೂ ಬದಿ ನಾಲ್ಕು ಸ್ಮಶಾನ ದಾಟಿ ಹೋಗಬೇಕು ಇದು ಮಕ್ಕಳ ಭಯಕ್ಕೆ ಕಾರಣ "
- ಮಲ್ಲಿಕಾರ್ಜುನ ಪೂಜಾರ
ಅಧ್ಯಕ್ಷರು SDMC ಕುವೆಂಪು ನಗರ ಕುಷ್ಟಗಿ
ಇನ್ನೊಂದೆಡೆ ಕ್ರಷರ್ ಗಳಿಂದ ಬರುವ ಟಿಪ್ಪರ್ ಗಳು, ಹತ್ತಿರದ ಬೈಪಾಸ್ ನಿಂದ ಬರುವ ವೇಗದ ವಾಹನಗಳ ಭಯ. ಹೀಗಾಗಿ ಕುವೆಂಪು ನಗರದಲ್ಲೇ 8 ನೆ ತರಗತಿ ಆರಂಭಿಸಿ ಎಂದು ಜನರ ಒತ್ತಾಯ ಇದೆ.
ಆದರೆ DDPI ಮಾತ್ರ ತಮ್ಮದೆ ಇಲಾಖೆ ಮುಖ್ಯಸ್ಥರಾಗಿ ತಮ್ಮದೆ ಇಲಾಖೆಯ ಮೇಲಧಿಕಾರಿಗಳಿಗೆ ನಿಯಮ ಅನುಸರಿಸದೆ, ಸೂಕ್ತ ದಾಖಲೆಯೊಂದಿಗೆ ಪ್ರಸ್ತಾವನೆ ಸಲ್ಲಿಸದೆ ನಿರ್ಲಕ್ಷ್ಯ ತೋರಿದ್ದಾರೆ.
----------------
DDPI ಅನುಸರಿಸಿದ ನಿರ್ಲಕ್ಷ್ಯ ಖಂಡಿಸಿ ಮತ್ತು ಕೂಡಲೇ ಕುವೆಂಪು ನಗರ ಶಾಲೆಯಲ್ಲಿ 8 ನೇ ತರಗತಿ ಆರಂಭಿಸಲು ಒತ್ತಾಯಿಸಿ ಬುಧವಾರ ಜುಲೈ 8 ರಂದು ಶಾಲೆಗೆ ಬೀಗ ಹಾಕಿ ಪ್ರತಿಭಟಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ SDMC ಅಧ್ಯಕ್ಷರು ಮಲ್ಲಿಕಾರ್ಜುನ ಪೂಜಾರ, ಮುಖಂಡರಾದ ಪರಶುರಾಮ ಕೆರಳ್ಳಿ ನಿಂಗು ಬೆಣಕಲ್ ಆಸೀಫ್ ಖಾನ್ ಹಣಗಿ ರಿಯಾಜ್ ಮಂಗಳಾಪುರ ತಿಳಿಸಿದ್ದಾರೆ.