Advt. 
 Views   241

ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್

Jul 03, 2026, 12:25 PM IST
ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್

ಕೊಪ್ಪಳ : ಪರವಾನಗಿ ಇಲ್ಲದೆ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಸ್ಥಳಕ್ಕೆ ನಿನ್ನೆ ದಾಳಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು 8 ಜನರ ವಿರುದ್ದ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ‌ ಅಕ್ರಮ ಮರಳು ಗಣಿಗಾರಿಕೆ ಕನಕಗಿರಿ ತಾಲೂಕು ನವಲಿ ಹಾಗೂ ಸಂಕನಾಳ ಹತ್ತಿರ ನಡೆದಿತ್ತು. ಅಕ್ರಮ ಮರಳು ಗಣಿಗಾರಿಕೆ ತಡೆಯಲು ಅಧಿಕಾರಿಗಳು ವಿಫಲರಾಗಿರುವ ಹಿನ್ನಲೆಯಲ್ಲಿ ಕೊಪ್ಪಳ ಲೋಕಾಯುಕ್ತ ಡಿಎಸ್ಪಿ ಲೋಕೇಶ ಸ್ಥಳಕ್ಕೆ ದಾಳಿ ಮಾಡಿದ್ಧಾರೆ.

ನವಲಿ ಹತ್ತಿರ ಹುಸೇನಬಿ ಎಂಬುವವರ ಜಮೀನಿನಲ್ಲಿ ಅಕ್ತಮವಾಗಿ 10 ಮೀಟರ್ ಆಳದವರೆಗೆ ಅಗೆದು ಮಣ್ಣು ತೆಗೆದು ನೀರಿನಿಂದ ತೊಳೆದು ಮರಳು ತೆಗೆಯುವ ಕಾರ್ಯ ನಡೆದಿತ್ತು. ಅಲ್ಲಿಯೆ 6 ಲೋಡ್ ಮರಳು ಸಂಗ್ರಹ ಪತ್ತೆಯಾಗಿದೆ.

ಅದೇ ರೀತಿ ಸಂಕನಾಳ ಹತ್ತಿ ಶಂಕ್ರಪ್ಪ , ಭಾಗಪ್ಪ , ಹುಲಿಗೆಮ್ಮ , ವೀರೇಶಪ್ಪ, ಶ್ಯಾಮಪ್ಪ , ನಿಂಗಮ್ಮ ಎಂಬುವವರ ಜಮೀನಿನಲ್ಲಿ 15 ಅಡಿ ಆಳದಲ್ಲಿ ತೆಗೆದು ಮಣ್ಣು ತೆಗೆದು ನೀರಿನಿಂದ ತೊಳೆದು ಮರಳು ತೆಗೆಯುವ ಕಾರ್ಯ ನಡೆದಿತ್ತು. ದಾಳಿ ನಡೆಸಿದಾಗ ಅಲ್ಲಿ 15 ಲೋಡ್ ಮರಳು ಸಂಗ್ರಹ ಪತ್ತೆಯಾಗಿದೆ.

ಎರಡೂ ಕಡೆ ದಾಳಿ ಸಂದರ್ಭದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ಜೆಸಿಬಿ ಹಿಟಾಚಿ ಟಿಪ್ಪರ್ ಗಳನ್ನು ವಶಕ್ಕೆ ಪಡೆದು ಜಮೀನಿನ ಮಾಲೀಕರಾದ ಹುಸೇನಬಿ, ಶಂಕ್ರಪ್ಪ , ಭಾಗಪ್ಪ , ಹುಲಿಗೆಮ್ಮ, ವೀರೇಶಪ್ಪ , ಶ್ಯಾಮಪ್ಪ, ನಿಂಗಮ್ಮ, ಮಹಾಂಕಾಳಮ್ಮ ಇವರ ವಿರುದ್ದ ಕನಕಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Aug 16 2026 7:55AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಾಳಾದ ರಸ್ತೆ : ಸಚಿವರು ಶಾಸಕ ಸಂಸದರಿಗೆ ಪ್ರತಿಭಟನೆಯ ಬಿಸಿ
Aug 13 2026 7:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ 350 ಅಡಿ ತ್ರಿವರ್ಣ ಧ್ವಜದ ಮೆರವಣಿಗೆ
Aug 12 2026 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೊರ ರಾಜ್ಯಗಳಿಗೆ ನಿಗದಿ ಮಾಡಿದ ನಂತರ ನಮ್ಮ ರೈತರ ನೆನಪಾಯಿತೇ...?
Aug 11 2026 7:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಾಸಕರೆ ಸದನದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಿ : ಸಿವಿಸಿ
Aug 11 2026 6:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತುಂಗಭದ್ರಾ ಡ್ಯಾಂನಿಂದ ವಿವಿಧ ಕಾಲುವೆಗಳಿಗೆ ನೀರು
Aug 11 2026 5:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಚುನಾವಣಾ ತಯಾರಿ ಬಗ್ಗೆ SDPI ಸಂಘಟನಾ ಸಭೆ
Aug 10 2026 8:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ 7083 ಮೃತರ ಖಾತೆಗೆ ಹಣ
Aug 10 2026 5:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಜೈಲ್ ಭರೋ ಚಳುವಳಿ
Aug 8 2026 5:48PM | ವೈವಿಧ್ಯ | ವಿಷ್ಮಯ ಕವನ : ಪ್ರೀತಿ ಕೊಂದವಳು !
Aug 8 2026 8:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ 26 ಹುದ್ದೆಗಳಿಗೆ 3 ಸಾವಿರಕ್ಕೂ ಹೆಚ್ಚು ಅರ್ಜಿ




Copyright © 2026 Agni Divya. All Rights Reserved.
Designed & Developed by We Make Digitize