Advt. 
 Views   1211

ಕೊಪ್ಪಳ : ಮಹಿಳೆಯ ಸುಟ್ಟು ಕೊಂದ ಆರೋಪಿ ಅರೆಸ್ಟ್

Jun 11, 2026, 12:51 PM IST
ಕೊಪ್ಪಳ :  ಮಹಿಳೆಯ ಸುಟ್ಟು ಕೊಂದ ಆರೋಪಿ ಅರೆಸ್ಟ್

ಕೊಪ್ಪಳ : ಸೋಮವಾರ ರಾತ್ರಿ ಕನಕಗಿರಿಯ ಮನೆ ಮಹಡಿ ಮೇಲೆ ಮಹಿಳೆಯನ್ನು ಸುಟ್ಟು ಪೈಶಾಚಿಕ ಕೃತ್ಯ ಎಸಗಿದ್ದ ಆರೋಪಿ ಕುಷ್ಟಗಿ ತಾಲೂಕು ಕಂದಕೂರಿನ ಶಾಮೀದ್ ಸಾಬನನ್ನು ಪೊಲೀಸರು ಬಂಧಿಸಿದ್ದಾರೆ.

ಗುರುತು ಸಿಗದಂತೆ ಸುಡಲ್ಪಟ್ಟ ಮಹಿಳೆ ಕಾರಟಗಿಯ ರತ್ನಮ್ಮ ನಾಯಕ (43) ಎಂದು ಗೊತ್ತಾಗಿದೆ.

ಘಟನೆ ಕುರಿತು ಇಂದು ಮಾತನಾಡಿದ ಕೊಪ್ಪಳ ಎಸ್ಪಿ ಡಾ. ರಾಮ್ ಅವರು ಕನಕಗಿರಿ ಹೊರವಲಯದಲ್ಲಿ ಇರುವ ಸಂಗನಗೌಡ ಮಾಲಿಪಾಟೀಲ್ ಎಂಬುವವರ ನಿರ್ಮಾಣ ಹಂತದ ಮಹಡಿ ಮೇಲಿನ ಕೋಣೆಯಲ್ಲಿ ಸೋಮವಾರ ರಾತ್ರಿ ಮಹಿಳೆಗೆ ಬೆಂಕಿ ಹಚ್ಚಲಾಗಿತ್ತು ಎಂದರು.

ಬೆಂಕಿ ಹೊತ್ತಿದ ದೃಶ್ಯದ ವಿಡಿಯೋ ನೋಡಿ ಇಡಿ ಜಿಲ್ಲೆ ಬೆಚ್ಚಿಬಿದ್ದಿತ್ತು.‌ ಕಾರಟಗಿಯ ರತ್ನಮ್ಮ ಹಾಗೂ ಈ ಶಾಮೀದ್ ಸಾಬ ನಡುವೆ ಕಳೆದ ಮೂರು ತಿಂಗಳಿನಿಂದ ಅಕ್ರಮ ಸಂಬಂಧ ಇತ್ತು.

ಇತ್ತೀಚಿಗೆ ರತ್ನಮ್ಮ ಬೇರೆಯವರ ಜೊತೆ ಅಕ್ರಮ ಸಂಬಂಧ ಇರಬಹುದು ಎಂಬ ಸಂಶಯದಿಂದ ಕನಕಗಿರಿಯ ಹೊರವಲಯದ ಸಂಗನಗೌಡರ ಮನೆ ಮಹಡಿಗೆ ಕರೆದುಕೊಂಡು ಹೋಗಿ ಕುತ್ತಿಗೆ ಹಿಚುಕಿ ನಂತರ ಬೆಂಕಿ ಹಚ್ಚಿ ಈ ಕೃತ್ಯ ಎಸಗಿದ್ದಾನೆ.

ರತ್ಮಮ್ಮ ಮೂರು ಮಕ್ಕಳ ತಾಯಿ ಆಗಿದ್ದು ಗಂಡ ತೀರಿದ್ದಾನೆ. ಶಾಮೀದಸಾಬ ಮೂಲತಃ ಕುಷ್ಟಗಿ ತಾಲೂಕಿನ ಕಂದಕೂರ ಗ್ರಾಮದವನು. ಹುಲಿಹೈದರ್ ನ ಮಹಿಳೆ ಜೊತೆ ವಿವಾಹ ಆಗಿದ್ದಾನೆ. ಈತ ಕಳ್ಳತನವನ್ನೆ ವೃತ್ತಿ ಮಾಡಿಕೊಂಡಿದ್ದು ಠಾಣೆಗಳಲ್ಲಿ ಇತನ ವಿರುದ್ದ ಪ್ರಕರಣ ದಾಖಲಾಗಿವೆ.
 



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize