Advt. 
 Views   316

ಡಿಕೆಶಿ ನೂತನ ಸಿಎಂ : ಕೊಪ್ಪಳದಲ್ಲಿ ಸಂಭ್ರಮದ ಕೊರತೆ !

Jun 04, 2026, 05:36 PM IST
ಡಿಕೆಶಿ ನೂತನ ಸಿಎಂ : ಕೊಪ್ಪಳದಲ್ಲಿ ಸಂಭ್ರಮದ ಕೊರತೆ !

ಕೊಪ್ಪಳ : ಡಿ.ಕೆ. ಶಿವಕುಮಾರ ನೂತನ ಮುಖ್ಯಮಂತ್ರಿ ಆದ ಸಂದರ್ಭ ಸಂಭ್ರಮಿಸಲು ಜಿಲ್ಲೆಯ ಕಾಂಗ್ರೆಸ್ ನಲ್ಲಿ ನಿರಾಸಕ್ತಿ ಮೂಡಿತಾ ? ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರಲ್ಲದೆ ಸಾರ್ವಜನಿಕರಲ್ಲೂ ಚರ್ಚೆ ಹುಟ್ಟು ಹಾಕಿದೆ.

ಅತ್ತ ಡಿ.ಕೆ.ಶಿವಕುಮಾರ ಪ್ರಮಾಣ ವಚನ ತೆಗೆದುಕೊಂಡರೆ ಜಿಲ್ಲೆಯ ಗಂಗಾವತಿ, ಕುಷ್ಟಗಿ ಬಿಟ್ಟರೆ ಕನಕಗಿರಿ ಕೊಪ್ಪಳ ಯಲಬುರ್ಗಾದಲ್ಲಿ ಕಾಂಗ್ರೆಸ್ಸಿಗರ ಸಂಭ್ರಮ ಇರಲಿಲ್ಲ. ಒಂದು ಬ್ಯಾನರೂ ಕಾಣಲಿಲ್ಲ.

2023ರ ಚುನಾವಣೆಯಲ್ಲಿ ಸೋತಿರುವ ಬಯ್ಯಾಪುರರ ಕುಷ್ಟಗಿಯಲ್ಲಿ ಇಕ್ಬಾಲ್ ಅನ್ಸಾರಿಯ ಗಂಗಾವತಿಯಲ್ಲಿ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರೆ, ಗೆದ್ದು ಅಧಿಕಾರದಲ್ಲಿರುವ ಹಿಟ್ನಾಳ ತಂಗಡಗಿ ರಾಯರೆಡ್ಡಿ ಕ್ಷೇತ್ರದಲ್ಲಿ ಸಂಭ್ರಮ ಕಾಣಲಿಲ್ಲ.

ಗೆದ್ದಿರುವ ಈ ಮೂವರಲ್ಲಿ ಮಂತ್ರಿಯಾಗಿದ್ದ ಶಿವರಾಜ ತಂಗಡಿಗೆ ಡಿಕೆಶಿ ಸರ್ಕಾರದಲ್ಲೂ ಮುಂದುವರೆಯಲು ಮತ್ತು ಹೊಸದಾಗಿ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರೆಡ್ಡಿ ಮಂತ್ರಿ ಆಗಲು ಪ್ರಯತ್ನಿಸಿದ್ದರು.

ಆದರೆ ಹೊಸ ಸರ್ಕಾರದ ಮೊದಲ ದಿನ ಈ ಮೂವರಲ್ಲಿ ಯಾರೊಬ್ಬರೂ ಮಂತ್ರಿಯಾಗಿಲ್ಲ. ಅದೇ ಕಾರಣಕ್ಕೆ ಮೂರೂ ಕ್ಷೇತ್ರದಲ್ಲಿ ಇವರ ಬೆಂಬಲಿಗರು ಸಂಭ್ರಮಾಚರಣೆ ಮಾಡಲಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಆಗಾಗ ಪ್ರತಿಭಟನೆ, ಪತ್ರಿಕಾ ಹೇಳಿಕೆ ಮೂಲಕ ಸದ್ದು ಮಾಡುವ ಮಹಿಳಾ ಕಾಂಗ್ರೆಸ್ ಕೂಡ ಸಂಭ್ರಮಾಚರಣೆ ಮಾಡಲಿಲ್ಲ.

ಕೊಪ್ಪಳದಲ್ಲಿ ಕೆ.ಎಂ ಸೈಯದ್ ಅಲ್ಲೊಂದು ಇಲ್ಲೊಂದು ಬ್ಯಾನರ್ ಹಾಕಿಸಿದ್ದರೆ ಶಾಸಕರು ಸಂಸದರು ಇರುವ ಜಿಲ್ಲಾ ಕೇಂದ್ರದಲ್ಲಿ ಸಂಭ್ರಮಾಚರಣೆ ಆಗದೇ ಇರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬೇಸರ ಉಂಟು ಮಾಡಿದೆ.

ಐದೂ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಒಂದೊಂದು ದಿಕ್ಕಿನಂತಾಗಿದ್ದು ಕಾಂಗ್ರೆಸ್ ಸಂಘಟನಾ ಸಮಸ್ಯೆ ಜೊತೆಗೆ ಸಮನ್ವಯದ ಸಮಸ್ಯೆಯನ್ನೂ ಎದುರಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize