ಕೊಪ್ಪಳ : ಮೊನ್ನೆ ಜರುಗಿದ ಟ್ರಾಕ್ಟರ್ ಅಪಘಾತದ ಗಾಯಾಳುಗಳ ಆರೋಗ್ಯ ವಿಚಾರಿಸಲು ಮಾಜಿ ಸಚಿವರು ಬಿ.ಶ್ರೀರಾಮುಲು ಇಂದು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರು.
ಸಂಡೂರು ತಾಲೂಕು ಮಲ್ಲಾರಹಳ್ಳಿ, ಕೂಡ್ಲಿಗಿಯ ಯಶವಂತಪುರದ ಗಾಯಾಳುಗಳು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಯೋಗಕ್ಷೇಮ ವಿಚಾರಿಸಿ ಕಿಮ್ಸ್ ಆಸ್ಪತ್ರೆ ಅವ್ಯವಸ್ಥೆ ನೋಡಿ ಆಸ್ಪತ್ರೆಯಲ್ಲಿ ಸಂತೆ ಮಾರ್ಕೆಟ್ ನಂಥ ವಾತಾವರಣ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಮಂತ್ರಿ ಮತ್ತು ಆರೋಗ್ಯ ಮಂತ್ರಿ ಬೆಂಗಳೂರಿಗೆ ಸೀಮಿತ ಆಗಿದ್ದಾರೆ ಎಂದರು. ಟ್ರಾಕ್ಟರ್ ಅಪಘಾತದ ಗಾಯಾಳುಗಳಿಗೆ ಪರಿಹಾರ ಕೊಡಬೇಕು. ಮೃತರ ಕುಟುಂಬಕ್ಕೆ ಸಿಎಂ 10 ಲಕ್ಷ ರೂ. ಪರಿಹಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
----------------
ಪ್ರಧಾನಿ ಮೋದಿಯವರು ಯುದ್ದ ಸಂದರ್ಭದಲ್ಲಿ ಹೊರದೇಶದಿಂದ ಆಮದು ಮಾಡಿಕೊಳ್ಳುವ ಬಂಗಾರ, ತೈಲಗಳ ಕಡಿಮೆ ಬಳಕೆ ಮಾಡಿ ಎಂದಿದ್ದಕ್ಕೆ ಕಾಂಗ್ರೆಸ್ ನವರು ವ್ಯಂಗ್ಯ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಇವರು ಕೂಡ ಭದ್ರತೆಯ ವಾಹನ ಸಂಖ್ಯೆ ಕಡಿತಗೊಳಿಸಬೇಕು. ನಾವು ದೇಶ ಮೊದಲು ಅಂತಿವಿ ಅವರು ಕುಟುಂಬ ಮೊದಲು ಅಂತಾರೆ ಎಂದು ಶ್ರೀ ರಾಮುಲು ಕುಟುಕಿದರು.
----------------
ದೇಶಕ್ಕೆ ಒಳ್ಳೆಯ ಎಕಾನಾಮಿಸ್ಟ್ ಪ್ರಧಾನಿ ಆಗಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆಗೆ ಪ್ರಯಿಕ್ರಿಯಿಸಿ - ಕಾಂಗ್ರೆಸ್ ನವರು ಹಿಂದೆಲ್ಲ ಒಳ್ಳೆಯ ಎಕನಾಮಿಸ್ಟ್ ಗಳನ್ನೆ ಪ್ರಧಾನಿ ಮಾಡಿಯೆ ದೇಶ ಅಧೋಗತಿಗೆ ಇಳಿಸಿದ್ದು ಎಂದ ಅವರು ರಾಯರಡ್ಡಿ ವಿದ್ಯಾವಂತರು ಸ್ಕಾಲರ್ಸ್ ಆರ್ಥಿಕ ಸಲಹೆಗಾರರು. ರಾಜ್ಯದ ಆರ್ಥಿಕ ಪರಿಸ್ಥಿತಿ ಏನಿದೆ ? ಎಲ್ಲ ದಿವಾಳಿ ಮಾಡಿಟ್ಟಿದ್ದಾರೆ. ಗ್ಯಾರಂಟಿ ಹೆಸರಲ್ಲಿ ಗೆದ್ದಿದ್ದಾರೆ. 2028 ರಲ್ಲಿ ಅವರು ತಿಣುಕಾಡಿದರೂ ಗೆಲ್ಲಲಿಕ್ಕೆ ಆಗಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದರು.
------------------
ರಾಜ್ಯದ ಆಡಳಿತ ಮೂರು ವರ್ಷ ತಲುಪಿದೆ. ಸಾಧನೆ ಏನಿದೆ ? ಮೂರು ವರ್ಷದ ಮಗುವಿನ ತುಂಟಾಟದಂತೆ ಆಡಳಿತ ಇದೆ.
ನೀರು, ಕರೆಂಟ್, ಪ್ರೆಟೋಲ್ ಡಿಸೆಲ್ ಸೆಸ್, ನೋಂದಣಿ, ಡೆತ್ ಸರ್ಟಿಫಿಕೆಟ್ ಎಲ್ಲದರ ದರ ಏರಿಸಿದ್ದಾರೆ. ಸರಕಾರಿ ನೌಕರರು, ಅಂಗನವಾಡಿಯವರ ಸಂಬಳ ಕೊಟ್ಟಿಲ್ಲ. ಸಿದ್ದರಾಮಯ್ಯ ಆರ್ಥಿಕ ತಜ್ಞರಲ್ಲ ಅವರಿಗೆ ಆಡಳಿತ ಗೊತ್ತಿಲ್ಲ.
ಸಿಎಂ ಕುರ್ಚಿಯ ನಾಲ್ಕು ಕಾಲುಗಳಲ್ಲಿ ಒಂದನ್ನು ಡಿ.ಕೆ.ಶಿವಕುಮಾರ ಕಸಿದುಕೊಂಡಿದ್ಧಾರೆ. ಮೂರು ಕಾಲಿನಲ್ಲಿ ಹೇಗೆ ಆಡಳಿತ ಮಾಡ್ತಾರೊ ? ಎಂದರು.