Advt. 
 Views   307

ಹುಲಿಗೆಮ್ಮ ಜಾತ್ರೆಯ ಟ್ರಾಕ್ಟರ್ ನದಿಗೆ : ಮಗು ಸೇರಿ 6 ಸಾವು

May 15, 2026, 07:19 AM IST
ಹುಲಿಗೆಮ್ಮ ಜಾತ್ರೆಯ ಟ್ರಾಕ್ಟರ್ ನದಿಗೆ : ಮಗು ಸೇರಿ 6 ಸಾವು

ಕೊಪ್ಪಳ : ಹುಲಿಗೆಮ್ಮದೇವಿ ಜಾತ್ರೆಗೆ ಹೊರಟಿದ್ದ ಭಕ್ತರ ಡ್ರಾಕ್ಟರ್ ಗೆ ಲಾರಿಯೊಂದು ಹಿಂದಿನಿಂದ ಗುದ್ದಿದ ಪರಿಣಾಮ ಟ್ರಾಕ್ಟರ್ ತುಂಗಭದ್ರಾ ಸೇತುವೆ ಮೇಲಿನಿಂದ ನದಿಗೆ ಬಿದ್ದು ಒಂದು ವರ್ಷದ ಮಗು ಸೇರಿ 6 ಜನ ಸಾವಿಗೀಡಾದ ದಾರುಣ ಘಟನೆ ಇಂದು ಮಧ್ಯಾಹ್ನ 3 ರ ಸುಮಾರಿಗೆ ಜರುಗಿದೆ.

ಈ ದುರ್ಘಟನೆಯಲ್ಲಿ 10 ಜನ ಗಂಭೀರ ಗಾಯಗೊಂಡಿದ್ದಾರೆ. ಮೃತರು ಹಾಗೂ ಗಾಯಾಳುಗಳು ಸಂಡೂರು ತಾಲೂಕು ಮಲ್ಲಾರಹಳ್ಳಿ ಮತ್ತು ಯಶವಂತಪುರದವರು.

ಘಟನೆ ತುಂಗಭದ್ರಾ ಡ್ಯಾಂ ಮುಂಭಾಗದಲ್ಲಿರುವ ವಾಹನಗಳ ಸಂಚಾರದ ಸೇತುವೆ ಕೆಳಗೆ ಅಂದ್ರೆ ಟಿ.ಬಿ.ಡ್ಯಾಂ ಸರ್ಕಲ್ ನಿಂದ ಒಂದೂವರೆ ಕಿ.ಮೀ ದೂರದಲ್ಲಿ ನಡೆದಿದೆ

ಸಾವಿಗೀಡಾದವರನ್ನು ಭರತ್ (1) ಗೌರಮ್ಮ , ಗೀತಾ (20),
ಮಹಾಂತೇಶ (18), ಮಂಜಪ್ಪ , ಕೆಂಚಪ್ಪ ಎಂದು ಗೊತ್ತಾಗಿದೆ.

ಗಾಯಗೊಂಡವರನ್ನು ಮಲ್ಲಾರಹಳ್ಳಿಯ ರೇಣುಕಮ್ಮ ,
ಅರುಣಮ್ಮ, ಯಶವಂತಪುರದ ನಾಗರಾಜ, ಸವಿತಾ,
ಚೇತನಾ, ಅಂಜಲಿ, ಅರ್ಜುನ , ರತ್ನಮ್ಮ ಮಾಯಾ,
ಅಜಯ ಹಾಗೂ ಇನ್ನು ಮೂವರ ಹೆಸರು ತಿಳಿದು ಬಂದಿಲ್ಲ.

ದುರ್ಘಟನೆಗೆ ಕಾರಣವಾದ ಲಾರಿ ಚಾಲಕ ಪೊಲೀಸ್ ವಶದಲ್ಲಿದ್ದಾನೆ. ಈ ಲಾರಿ ಬೆಂಗಳೂರಿನಿಂದ ರಾಜಸ್ಥಾನಕ್ಕೆ ತೆರಳುತ್ತಿದ್ದ ಕೊರಿಯರ್ ಸಂಸ್ಥೆಗೆ ಸೇರಿದೆ.

ನದಿಗೆ ಬಿದ್ದ ಟ್ರಾಕ್ಟರ್ ಭಾಗಶಃ ಹಾನಿಗೀಡಾಗಿದ್ದು ಟ್ರಾಕ್ಟರ್ ನಲ್ಲಿದ್ದ ಅಡುಗೆ ಸಾಮಾನು ಹಾಸಿಗೆ ತರಕಾರಿ ಡ್ರಮ್ಮು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿವೆ.

ವಿಜಯನಗರ ಜಲ್ಲೆಯ ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯ ಸರಹದ್ದು ಆರಂಭವಾಗುವ 40 ಅಡಿ ಮುಂಚೆಯೆ ಈ ದುರ್ಘಟನೆ ನಡೆದಿದ್ದು ಮುನಿರಾಬಾದ್ ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಕೊಪ್ಪಳ ಡಿವೈಎಸ್ಪಿ ಘಟನಾ ಸ್ಥಳದಲ್ಲಿದ್ದಾರೆ.

ಬಳ್ಳಾರಿ ವಲಯದ ಐಜಿಪಿ ಡಾ. ಹರ್ಷ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jun 11 2026 12:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಹಿಳೆಯ ಸುಟ್ಟು ಕೊಂದ ಆರೋಪಿ ಅರೆಸ್ಟ್
Jun 9 2026 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದಾಖಲೆಗಳೊಂದಿಗೆ ಜಿಲ್ಲಾಡಳಿತಕ್ಕೆ ದೂರು
Jun 9 2026 6:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ : ಗಾಣಿಗ ಸಂಘ ಒತ್ತಾಯ
Jun 7 2026 6:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನಮ್ಮ ಪಕ್ಷಕ್ಕೆ ಬನ್ನಿ : ಬಿಜೆಪಿ-ಜೆಡಿಎಸ್ ನಾಯಕರ ಆಹ್ವಾನ
Jun 7 2026 11:57AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ : ನಿಗೂಢ ಚಾಕು ದಾಳಿ: ತಂದೆ ಮಗಳು ಸಾವು
Jun 6 2026 7:46PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಚಿವ ಸ್ಥಾನಕ್ಕೆ ಹೋರಾಟ ಸಭೆಯಲ್ಲಿ ಭಿನ್ನಮತ
Jun 6 2026 8:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ಷರಾಭ್ಯಾಸ ಮಕ್ಕಳ ಉಜ್ವಲ ಭವಿಷ್ಯದ ಮೊದಲ ಹೆಜ್ಜೆ
Jun 5 2026 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಮೀರ್ ಪರ ಡಿಸಿಎಂ ಸ್ಥಾನಕ್ಕಾಗಿ ಆಗ್ರಹ
Jun 4 2026 8:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪೊಲೀಸ್ ಠಾಣೆ, ಪುರಸಭೆಗೆ ಕೆಆರ್‌ಎಸ್ ಪಕ್ಷ ಮನವಿ
Jun 4 2026 5:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿಕೆಶಿ ನೂತನ ಸಿಎಂ : ಕೊಪ್ಪಳದಲ್ಲಿ ಸಂಭ್ರಮದ ಕೊರತೆ !




Copyright © 2026 Agni Divya. All Rights Reserved.
Designed & Developed by We Make Digitize