ಕೊಪ್ಪಳ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಕಾಂಗ್ರೆಸ್ ಆಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಈ ಸಂದರ್ಭ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಜ್ಯೋತಿ ಗೊಂಡಬಾಳ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದಲ್ಲಿ ಕೆಲವರು ಅರೆಸ್ಟ್ ಆಗಿದ್ದಾರೆ ಎನ್.ಟಿ.ಎ. ಮೂಲಕ ನೀಟ್ ಮಾಡುವುದನ್ನು ರದ್ದುಗೊಳಿಸಿ, ಇದೇ ಸಾಲಿನಿಂದ ಆಯಾ ರಾಜ್ಯಗಳಿಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಬಿಜೆಪಿಗರ ಮಕ್ಕಳೂ ಸಹ ನೀಟ್ ಬರೆದಿದ್ದು ಅವರಲ್ಲೂ ಅನೇಕರಿಗೆ ಅನ್ಯಾಯ ಆಗುವದನ್ನು ಬಿಜೆಪಿ ಸಂಸದರು ಮುಖಂಡರು ಗಮನಿಸಿ ನಮ್ಮ ಹೋರಾಟಕ್ಕೆ ಕೈ ಜೋಡಿಸಿ ಮಬ್ಭಕ್ತರಲ್ಲ ಎಂದು ಸಾಬೀತು ಮಾಡಲಿ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ - ಎನ್.ಟಿ.ಎ. ಅಂದ್ರೆ ನೆವರ್ ಟ್ರಸ್ಟೆಡ್ ಎಜೆನ್ಸಿ (ಎಂದಿಗೂ ನಂಬಿಕೆಗೆ ಅರ್ಹವಲ್ಲದ ಎಜೆನ್ಸಿ) ಆಗಿದೆ.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ನೀಟ್ ರದ್ದು ಮಾಡಿ ಆಯಾ ರಾಜ್ಯಗಳೇ ಸೀಟು ಹಂಚಿಕೆ ಪ್ರಕ್ರಿಯೆ ಮಾಡಲು ಅವಕಾಶ ಕೊಡಬೇಕು. ಬಿಜೆಪಿಯ 10 ವರ್ಷ ಆಡಳಿತದಲ್ಲಿ ಎನ್.ಟಿ.ಎ. 70 ಸಲ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪೇಪರ್ ಲೀಕ್ ಮಾಡಿ ಮಾರಾಟ ಮಾಡಿದ್ದು ನೋಡಿದರೆ ಇದೊಂದು ಕಾರ್ಪೊರೇಟ್ ಪರೀಕ್ಷಾ ವ್ಯವಹಾರ ಆಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ದೇಶದ 22.5 ಲಕ್ಷ ಮಕ್ಕಳ ಜೀವನದ ಜೊತೆಗೆ ಆಟ ಆಡಿದ್ದಾರೆ. ಇವರಿಗೆ ಕಠಿಣ ಶಿಕ್ಷೆ ಆಗಬೇಕು. ಭಾಷಣ ಶೂರ ಪ್ರಧಾನಮಂತ್ರಿ ಮತ್ತು ಶಿಕ್ಷಣ ಸಚಿವರುಗಳು, ಗೃಹ ಮಂತ್ರಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅಕ್ಬರ್ ಪಾಶಾ ಪಲ್ಟನ್, ಸೋಮಶೇಖರ್ ಹಿಟ್ನಾಳ, ಮಲ್ಲಿಕಾರ್ಜುನ ಪೂಜಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಿಂಗರಾಜ್ ಕಲ್ಗುಡಿ, ಹನುಮೇಶ ಬೆಣ್ಣಿ, ಕುರುಗೋಡ ರವಿ ಯಾದವ ಅನೇಕರಿದ್ದರು.