ಕೊಪ್ಪಳ : ಪ್ರಧಾನಿ ಮೋದಿ ಕರೆ ನೀಡಿದ್ದ ಸಲಹೆಗಳ ಬಗ್ಗೆ ಎಂಪಿ ರಾಜಶೇಖರ ಹಿಟ್ನಾಳ ಕೊಟ್ಟ ಕಾಮೆಂಟ್ ಗೆ ಬಿಜೆಪಿ ಜಿಲ್ಲಾಧ್ಯಕ್ಷರು ನವೀನಕುಮಾರ ಗುಳಗಣ್ಣವರ ಇವರಿಗೆ ಯಾವಾಗಲೂ ಮೋದಿ ಬೈದ್ರೆ ದೊಡ್ಡವರಾಗಿ ಬಿಡ್ತೀವಿ ಎಂಬ ಹುಚ್ಚುಭ್ರಮೆ ಎಂದು ತಿರುಗೇಟು ನೀಡಿದ್ದಾರೆ.
ಹಾಗೆ ನೋಡಿದರೆ ರಾರಾ ಬ್ರದರ್ಸ್ ಯಾವತ್ತೂ ಅವರಾಗಿಯೆ ಬಿಜೆಪಿ ಬಗ್ಗೆ ಟೀಕೆ, ಭಾಷಣ ಮಾಡಲ್ಲ ಕಾರಣ ಅವರ ರಾಜಕಾರಣ. ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಮಾತ್ರ ಬಿಜೆಪಿ ಬಗ್ಗೆ ಮಾತಾಡ್ತಾರೆ.
ನಿನ್ನೆ ಮಾವು ಮೇಳ ಉದ್ಘಾಟನೆಗೆ ಸಚಿವ ಶಿವರಾಜ ತಂಗಡಗಿ ಬರಬೇಕಿತ್ತು. ಆದ್ರೆ ಸಚಿವರು ತಮ್ಮ ಮಗನ ಎಂಗೇಜ್ ಮೆಂಟ್ ಕಾರ್ಯಕ್ರಮ ಕಾರಣಕ್ಕೆ ಬರಲಿಲ್ಲ. ಶಾಸಕರಂತೂ ಬೆಂಗಳೂರು ನಿವಾಸಿ. ಹಾಗಾಗಿ ಎಂಎಲ್ಸಿ ಹೇಮಲತಾ ನಾಯಕ ಮೇಳ ಉದ್ಘಾಟಿಸಿದರು.
ನಂತರ ಬಂದ ಸಂಸದರು ಮಾಧ್ಯಮಗಳೊಂದಿಗೆ ಮಾತನಾಡಿ ಮೋದಿ ಆಡಳಿತ ತುಘಲಕ್ ದರ್ಬಾರ್ ಗೆ ಹೋಲಿಸಿ ಸಿಲೆಂಡರ್ ಸಿಗೋದು ಕನ್ಫರ್ಮ್ ಮಾಡಿಕೊಂಡು ಮದುವೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಮುಂದೆ ಏನಿದೆಯೋ...? ಎಂದರು.
ಪೆಟ್ರೋಲ್-ಚಿನ್ನ ಖರೀದಿ ಮಾಡಬೇಡಿ ಅಲ್ಲಿ ಹೋಗಬೇಡಿ ಇಲ್ಲಿ ಹೋಗಬೇಡಿ ಅನ್ನೋದು ಮತ್ತು ಜನ ಏನು ಮಾಡಬೇಕು ಅನ್ನೋದು ಅವರೆ ತೀರ್ಮಾನ ಮಾಡುತ್ತಿದ್ದಾರೆ.
ಎಲ್ಲಿದೆ 15 ಲಕ್ಷ ? ಎಲ್ಲಿದೆ ಅಚ್ಚೆ ದಿನ್ ? ಎಂದು ಕೇಳುತ್ತ ಉದ್ಯಮಿ ಮಹೇಶ ರಡ್ಡಿ ಅಂಜನಾದ್ರಿಗೆ ನೀಡಿದ್ದ ಬಂಗಾರದ ಅಸಲಿಯತ್ತ ಬಗ್ಗೆ ಮಾತನಾಡುತ್ತ ಗಂಗಾವತಿ ಶಾಸಕ ಜನಾರ್ದನ ರಡ್ಡಿ ವಿರುದ್ದ ವಾಗ್ದಾಳಿ ಮಾಡಿದ್ರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ - ಮೋದಿಯವರ ಸಲಹೆಗಳು ದೇಶದ ಆರ್ಥಿಕ ದೃಷ್ಟಿಯಿಂದ ಹೇಳಿದ್ದು. ಇದು ವ್ಯಂಗ್ಯ ಮಾಡುವ ಸಮಯ ಅಲ್ಲ.
ಯುದ್ದ ಸಂದರ್ಭದಲ್ಲಿ ಭಾರತೀಯರ ಸಣ್ಣ ಉಳಿತಾಯ ದೇಶದ ಆರ್ಥಿಕತೆಯನ್ನು ದೊಡ್ಡ ಸಂಕಷ್ಟದಿಂದ ಪಾರು ಮಾಡಬಲ್ಲದು.
ದೇಶದ ಜನ ಮೋದಿಯವರ ಮೇಲೆ ವಿಶ್ವಾಸವಿಟ್ಟು ಮೂರನೇ ಸಲ ಅವಕಾಶ ನೀಡಿದ್ದಾರೆ. ಅವರು ಏನೆ ಸಲಹೆ ನೀಡಿದರೂ ಅವು ದೇಶದ ಹಿತ ದೃಷ್ಠಿಯಿಂದ ಎಂದು ತಿಳಿಯಿರಿ ಎಂದು ಪ್ರತಿಕ್ರಿಯೆ ನೀಡಿರುವ ಗುಳಗಣ್ಣವರ ಜವಾಬ್ದಾರಿ ಸ್ಥಾನದಲ್ಲಿರುವ ನೀವು ದೇಶದ ಆರ್ಥಿಕ ಸ್ಥಿತಿ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದ್ದಾರೆ.