Advt. 
 Views   106

ಭಕ್ತಿ ಸಂಭ್ರಮದಲ್ಲಿ ಜರುಗಿದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ

May 11, 2026, 08:04 AM IST
ಭಕ್ತಿ ಸಂಭ್ರಮದಲ್ಲಿ ಜರುಗಿದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ

ಕೊಪ್ಪಳ : ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ‌ ಇಂದು (ಮೇ 11) ಭಕ್ತಿ ಸಂಭ್ರಮದಿಂದ ಜರುಗಿತು.

ಹುಲಿಗಿ ಗ್ರಾಮದಲ್ಲಿ ಸಂಜೆ 5.30ಕ್ಕೆ ರಥೋತ್ಸವ ಜರುಗಿತು ರಥೋತ್ಸವ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆ ಹಾಗೂ ವಿಜಯನಗರ, ಬಳ್ಳಾರಿ, ಗದಗ, ರಾಯಚೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ಧ ಲಕ್ಷಾಂತರ ಭಕ್ತರು ಸಾಕ್ಷಿಯಾಗಿ ಜಯಘೋಷ ಮೊಳಗಿಸಿದರು.

ಶ್ರೀ ಹುಲಿಗೆಮ್ಮ‌ದೇವಿ ಮೂರ್ತಿಯೊಂದಿಗೆ ಸಾಗಿದ
ತೇರು ಪಾದಗಟ್ಟೆ ತಲುಪಿ ಮರಳಿ ಸ್ವಸ್ಥಾನಕ್ಕೆ ಬಂದು ಸೇರುತ್ತಿದ್ದಂತೆ ಭಕ್ತ ಸಮೂಹದಿಂದ ಕರತಾಡನ ಕೇಳಿ ಬಂದಿತು. ಉದೋ ಉದೋ ಊದೋ.. ಹುಲಿಗೆಮ್ಮ‌ ಎಂದು ಭಕ್ತರು ಮತ್ತೆ ಮತ್ತೆ ಘೋಷಣೆ ಮೊಳಗಿಸಿದರು.

ಈ ಸಂದರ್ಭ ಸಂಸದರಾದ ರಾಜಶೇಖರ ಹಿಟ್ನಾಳ, ಪರಿಷತ್ ಶಾಸಕರಾದ ಹೇಮಲತಾ ನಾಯಕ, ಮಾಜಿ ಸಂಸದರಾದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಹಿರಿಯ ಗಣ್ಯರು ಭಾಗಿಯಾಗಿ ಪೂಜೆ ಸಲ್ಲಿಸಿದರು.

ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ ಸೂಕ್ತ ಪೊಲೀಸ್ ಬಂದೋಬಸ್ತ್ ನಿರ್ವಹಿಸಿದರು. ಶ್ರೀ ಹುಲಿಗೆಮ್ಮ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ಕಾರ್ಯದರ್ಶಿ ಪ್ರಕಾಶರಾವ್, ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷರಾದ ದಯಾನಂದ ಸ್ವಾಮೀಜಿ ಸೇರಿದಂತೆ ಹುಲಿಗಿ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು, ಗಣ್ಯರು ಇದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jun 11 2026 12:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಹಿಳೆಯ ಸುಟ್ಟು ಕೊಂದ ಆರೋಪಿ ಅರೆಸ್ಟ್
Jun 9 2026 8:29PM | ಜಿಲ್ಲಾ ಸುದ್ದಿಗಳು | ಕೊಪ್ಪಳ ದಾಖಲೆಗಳೊಂದಿಗೆ ಜಿಲ್ಲಾಡಳಿತಕ್ಕೆ ದೂರು
Jun 9 2026 6:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ : ಗಾಣಿಗ ಸಂಘ ಒತ್ತಾಯ
Jun 7 2026 6:40PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನಮ್ಮ ಪಕ್ಷಕ್ಕೆ ಬನ್ನಿ : ಬಿಜೆಪಿ-ಜೆಡಿಎಸ್ ನಾಯಕರ ಆಹ್ವಾನ
Jun 7 2026 11:57AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಂಗಾವತಿ : ನಿಗೂಢ ಚಾಕು ದಾಳಿ: ತಂದೆ ಮಗಳು ಸಾವು
Jun 6 2026 7:46PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಚಿವ ಸ್ಥಾನಕ್ಕೆ ಹೋರಾಟ ಸಭೆಯಲ್ಲಿ ಭಿನ್ನಮತ
Jun 6 2026 8:08AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ಷರಾಭ್ಯಾಸ ಮಕ್ಕಳ ಉಜ್ವಲ ಭವಿಷ್ಯದ ಮೊದಲ ಹೆಜ್ಜೆ
Jun 5 2026 8:53PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಮೀರ್ ಪರ ಡಿಸಿಎಂ ಸ್ಥಾನಕ್ಕಾಗಿ ಆಗ್ರಹ
Jun 4 2026 8:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪೊಲೀಸ್ ಠಾಣೆ, ಪುರಸಭೆಗೆ ಕೆಆರ್‌ಎಸ್ ಪಕ್ಷ ಮನವಿ
Jun 4 2026 5:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿಕೆಶಿ ನೂತನ ಸಿಎಂ : ಕೊಪ್ಪಳದಲ್ಲಿ ಸಂಭ್ರಮದ ಕೊರತೆ !




Copyright © 2026 Agni Divya. All Rights Reserved.
Designed & Developed by We Make Digitize