ಕೊಪ್ಪಳ : ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪಾರ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಸೌಜನ್ಯ ಎಸ್.ಎಚ್ ಶೇ. 97 (582), ವಾಣಿಜ್ಯ ವಿಭಾಗದಲ್ಲಿ ರೇಖಾ ಶೇ 93.17 (559), ವಿಜ್ಞಾನ ವಿಭಾಗದಲ್ಲಿ ಚೈತ್ರಾ ಶೇ. 96 (576) ಅಂಕ ಪಡೆದು ಆಯಾ ವಿಭಾಗದಲ್ಲಿ ಕಾಲೇಜಿಗೆ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ 54, ವಾಣಿಜ್ಯ ವಿಭಾಗದಲ್ಲಿ 08 ಹಾಗೂ ವಿಜ್ಞಾನ ವಿಭಾಗದಲ್ಲಿ 44 ಹೀಗೆ ಒಟ್ಟು 106 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಲ್ಲಿ 398 ಪ್ರಥಮ ಶ್ರೇಣಿ, 78 ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.ಕಾಲೇಜಿನ ಒಟ್ಟಾರೆ ಫಲಿತಾಂಸ ಶೇ. 88.56 ಆಗಿದೆ ಎಂದು ಪ್ರಾಚಾರ್ಯ ಡಾ. ವಿರೇಶಕುಮಾರ ತಿಳಿಸಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶೀರ್ವದಿಸಿದ್ದಾರೆ. ಶ್ರೀಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಆಡಳಿತ ಮಂಡಳಿಯವರು ಪ್ರಾಚಾರ್ಯರು ಹಾಗೂ ಸಕಲ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.