Advt. 
 Views   171

SVC ಕಾಲೇಜು : ಮೊದಲ ಬ್ಯಾಚಿನ ಫಲಿತಾಂಶ ತಾಲೂಕಿಗೆ ಟಾಪ್

Apr 09, 2026, 05:05 AM IST
SVC ಕಾಲೇಜು : ಮೊದಲ ಬ್ಯಾಚಿನ ಫಲಿತಾಂಶ ತಾಲೂಕಿಗೆ ಟಾಪ್

ಕೊಪ್ಪಳ : ಕಾಲೇಜಿನ ಮೊದಲ ಬ್ಯಾಚ್ ಮೂಲಕ ದ್ವಿತೀಯ ಪಿಯು ಫಲಿತಾಂಶದಲ್ಲಿ ತಾಲೂಕಿಗೆ ಮೊದಲ ಸ್ಥಾನ ಪಡೆದ ಸಾಧನೆ ಕುಷ್ಟಗಿಯಎಸ್ ವಿ ಸಿ ಪಿಯು ಕಾಲೇಜಿನದು.‌

ವಿಜ್ಞಾನ ವಿಭಾಗದಲ್ಲಿ ಕುಷ್ಟಗಿ ತಾಲೂಕಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಎಸ್‌ವಿಸಿ ಸಂಸ್ಥೆಯ ವೀರೇಶ್ (94.33%), ಕಿರಣ್ (92.83%) ಹಾಗೂ ವಿನೋದ್ (91.83%) ತಮ್ಮದಾಗಿಸಿಕೊಂಡು ಸಾಧನೆ ಮಾಡಿದ್ದರೆ ಕಾಲೇಜಿಗೂ ಕೀರ್ತಿ ತಂದಿದ್ದಾರೆ.

ಇದೆ ಕಾಲೇಜಿನ ಐದು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 13 ವಿದ್ಯಾರ್ಥಿಗಳು ಪ್ರಥಮ ದರ್ಜೆ ಮತ್ತು ಇಬ್ಬರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕಳೆದ 2024 ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡ ಕಾಲೇಜು ಪ್ರಥಮ ಪರೀಕ್ಷಾ ಫಲಿತಾಂಶದಲ್ಲಿ ಐತಿಹಾಸಿಕ ಸಾಧನೆ ದಾಖಲಿಸಿರುವುದು ಕುಷ್ಟಗಿ ಪಟ್ಟಣಕ್ಕೆ ಹೆಮ್ಮೆ ತಂದಿದೆ. ಇಂತಹ ಸಾಧನೆ ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಎಂದು ಸಂಸ್ಥೆಯ ಅಧ್ಯಕ್ಷ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸಿ ವಿ ಚಂದ್ರಶೇಖರ್, ಸಂಸ್ಥೆಯ ಸಿಇಓ ಡಾ. ಜಗದೀಶ್ ಅಂಗಡಿ, ಪ್ರಾಂಶುಪಾಲ ಭೀಮಸೇನ್ ಆಚಾರ್ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


May 17 2026 8:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾ ಮಂತ್ರಿ ಆರೋಗ್ಯ ಮಂತ್ರಿ ಬೆಂಗಳೂರಿಗೆ ಸೀಮಿತ
May 16 2026 7:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಳೆ ಬಿರುಗಾಳಿಗೆ ಬಾಳೆತೋಟಗಳಿಗೆ ಅಪಾರ ಹಾನಿ
May 15 2026 7:19AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಲಿಗೆಮ್ಮ ಜಾತ್ರೆಯ ಟ್ರಾಕ್ಟರ್ ನದಿಗೆ : ಮಗು ಸೇರಿ 6 ಸಾವು
May 14 2026 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೀಟ್ ರದ್ದು ಮಾಡಿ ರಾಜ್ಯಗಳಿಗೆ ಅಧಿಕಾರ ನೀಡಿ
May 13 2026 8:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೋದಿ ಬೈದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆ : ಹಿಟ್ನಾಳಗೆ ಬಿಜೆಪಿ ಕೌಂಟರ್
May 12 2026 6:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗ ಪ್ರದರ್ಶನಕ್ಕೆ ಇರುತ್ತಿದ್ದ ಮಿಯಾ ಜಾಕಿ ಈಗ ಮಾರಾಟಕ್ಕೆ !
May 11 2026 8:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಭಕ್ತಿ ಸಂಭ್ರಮದಲ್ಲಿ ಜರುಗಿದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ
May 11 2026 7:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರೋಧಿ ಧರಣಿ 193ನೇ ದಿನಕ್ಕೆ : ಕೆರೆ ಲೀಸ್ ವಿವಾದ ಚರ್ಚೆ
May 11 2026 3:16AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಂಜನಾದ್ರಿಗೆ ಅರ್ಪಿಸಿದ ಆಭರಣದಲ್ಲಿ ಚಿನ್ನಲೇಪಿತ ತಾಮ್ರ ?
May 10 2026 9:13AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸುರೇಶ್ ಡಿ ನೂತನ ಪೊಲೀಸ್ ಇನ್ಸಪೆಕ್ಟರ್




Copyright © 2026 Agni Divya. All Rights Reserved.
Designed & Developed by We Make Digitize