ಕೊಪ್ಪಳ : ಜಾತಿ ನಿಂದನೆ ಪ್ರಕರಣದಲ್ಲಿ ಸ್ಟೇಶನ್ ಜಾಮೀನು ಕೊಡಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಪೋಲಿಸರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
DAR ಆವರಣದಲ್ಲಿ ಇರುವ ನಾಗರಿಕರ ಹಕ್ಕುಗಳ ಜಾರಿ ನಿರ್ದೇಶನ ಪೊಲೀಸ್ ಠಾಣೆಯ ಪೇದೆಗಳಾದ ಮಾರುತಿ ಬ್ಯಾಳಿ ಹಾಗೂ ಚಂದಾಲಿಂಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಜಾಮೀನು ಕೊಡಿಸುತ್ತೇವೆ ಎಂದು 60 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಮಾರುತಿ ಹಾಗೂ ಚಂದಾಲಿಂಗ.
ಪೇದೆ ಚಂದಾಲಿಂಗ ಪೊಲೀಸ್ ಅಲ್ಲದ ವ್ಯಕ್ತಿಯ ಫೋನ್ ಪೇ ಗೆ 15 ಸಾವಿರ ಹಾಗೂ ಪೇದೆ ಮಾರುತಿಯು ಪಾನ್ ಶಾಪ್ ಮಾಲೀಕರೊಬ್ಬರ ಫೋನ್ ಪೇ ಗೆ 3 ಸಾವಿರ ರೂಪಾಯಿ ಹಾಕಿಸಿ ಆ ಹಣ ಪಡೆದಿದ್ದಾರೆ.
ಮೆಹಬೂಬ ಪಾಷಾ ನೀಡಿದ್ದ ದೂರಿನಂತೆ ಕಾರ್ಯಾಚರಣೆಗೆ ಇಳಿದ ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್, ಇನ್ಸಪೆಕ್ಟರ್ ಸುನೀಲ್, ಚಂದ್ರಪ್ಪ , ಶೈಲಾ ಪ್ಯಾಟಿಶೆಟ್ಟರ್ ಹಾಗೂ ಸಿಬ್ಬಂದಿ ಇಬ್ಬರು ಪೇದೆಗಳನ್ನು ಬಂಧಿಸಿದ್ದಾರೆ.
ಪೊಲೀಸ್ ಪೇದೆಗಳನ್ನು ಬಲೆಗೆ ಕೆಡವಿದ ಲೋಕಾಯುಕ್ತರ ಕಾರ್ಯಕ್ಷಮತೆ ಬಗ್ಗೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.