ಕೊಪ್ಪಳ : ಹೋಳಿ ಹಬ್ಬದ ಸಂಭ್ರಮದ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಮೂವರು ಯುವಕರು ನೀರು ಪಾಲಾಗಿದ್ಧು ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ಗಂಗಾವತಿಯ ಗಾಂಧಿನಗರದ ಸೂರ್ಯ ಮತ್ತು ಅಭಿಷೇಕ ಎಂದು ತಿಳಿದು ಬಂದಿದೆ.
ಬೆಳಗ್ಗೆಯಿಂದ ಹೋಳಿಯ ಬಣ್ಣ ಆಡಿ ಮಧ್ಯಾಹ್ನ ಸ್ನಾನ ಮತ್ತು ಊಟಕ್ಕೆ ಎಂದು ಇವರು ಸಾಣಾಪುರ ಕೆರೆಗೆ ಹೋಗಿದ್ದರು. ಸ್ನಾನಕ್ಕೆ ಎಂದು ಕೆರೆಯಲ್ಲಿ ಇಳಿದ ಮೂವರು ಸ್ನೇಹಿತರು ಕಾಲುಜಾರಿ ನೀರುಪಾಲಾಗಿದ್ಧಾರೆ.
ಅವರಲ್ಲಿ ಒಬ್ಬಾತ ಈಜಿ ದಡ ಸೇರಿದ್ದು ಆತನ ಸ್ನೇಹಿತರಾದ ಸೂರ್ಯ ಮತ್ತು ಅಭಿಷೇಕ ಕೆರೆ ನೀರಲ್ಲಿ ಕಾಣೆಯಾಗಿದ್ದರು.
ವಿಷಯ ತಿಳಿದು ಪೋಲೀಸರು ಹಾಗೂ ಅಗ್ನಿಶಾಮಕ ದಳದವರು ಹುಡುಕಾಟ ನಡೆಸಿದಾಗ ಸಂಜೆಯ ವೇಳೆಗೆ ಸೂರ್ಯ ಮತ್ತು ಅಭಿಷೇಕ ಶವವಾಗಿ ಪತ್ತೆಯಾಗಿದ್ಧಾರೆ.