Advt. 
 Views   71

ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ

Mar 02, 2026, 07:50 AM IST
ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ

ಕೊಪ್ಪಳ : 2028 ರ ವಿಧಾನಸಭೆ ಮತ್ತು ಗ್ರಾ. ಪಂ, ತಾ.ಪಂ, ಜಿಮಪಂ ಚುನಾವಣೆಗೆ ಕಹಳೆ ಎಂಬಂತೆ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಿನ್ನೆ ರವಿವಾರ ಸಂಜೆ ಶಿವಶಾಂತವೀರ ಮಂಗಲ ಭವನದಲ್ಲಿ ಅದ್ದೂರಿಯಾಗಿ ಜರುಗಿತು.

ಅದಕ್ಕೂ ಮುಂಚೆ ಬನ್ನಿಕಟ್ಟಿಯಿಂದ ಮಂಗಲ ಭವನದವರೆಗೆ ರಾಜ್ಯ ಯುವ ಘಟಕದ ಅಧ್ಯಕ್ಷರು ನಿಖಿಲ್ ಕುಮಾರಸ್ವಾಮಿ ಭರ್ಜರಿ ರೋಡ್ ಶೋ ನಡೆಯಿತು.

ಸಮಾವೇಶದಲ್ಲಿ ಸಿಂಧನೂರಿನ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡರು ಮುಸ್ಲಿಮರ ಶೇ. 4 ಮೀಸಲಾತಿ ಬಗ್ಗೆ ಮಾತನಾಡಿ ಮುಸ್ಲಿಂರ ಓಟು ಪಡೆದು ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಮುಸ್ಲಿಂರನ್ನು ಕೈಬಿಟ್ಟಿದೆ ಎಂದು ನೆನಪಿಸಿದರು.

ಹೆಚ್. ಡಿ. ದೇವೇಗೌಡರು ಮುಸ್ಲಿಂರಿಗೆ 4% ಮೀಸಲಾತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿದರು. ಆ ಮೀಸಲಾತಿಯನ್ನು 2022 ರಲ್ಲಿ ಬಿಜೆಪಿಯವರು ತೆಗೆದು ಹಾಕಿದರು.

2023 ರ ಚುನಾವಣೆಯಲ್ಲಿ ತಾವು ಆಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಮುಸ್ಲಿಮರ 4% ಮೀಸಲಾತಿ ವಾಪಸ್ ಕೊಡ್ತೀವಿ ಎಂದು ರಾಜ್ಯದ ಅನೇಕ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ಸಿಗರು ಹೇಳಿದರು. ಆದರೆ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಆಗ್ತಿದೆ ಆದರೆ ಮುಸ್ಲಿಮರ ಮೀಸಲಾತಿ ಕೊಟ್ಟಿಲ್ಲ.

2023 ರಲ್ಲಿ ಜೆಡಿಎಸ್ ಗೆ ಓಟ್ ಹಾಕಿದ್ರೆ ಬಿಜೆಪಿ ಬರುತ್ತೆ ಅಂತ ಕಾಂಗ್ರೆಸ್ ನವರು ಹೇಳಿ ಹೆದರಿಸಿದರು. ಆದ್ರೆ ಬಿಜೆಪಿ ಬಂದು ಆಗಲೆ 15 ವರ್ಷ ಆಗಿದೆ.

ಕಾಂಗ್ರೆಸ್ ಮುಸ್ಲಿಮರನ್ನು ಓಟ್ ಬ್ಯಾಂಕ್ ಆಗಿ ಚುನಾವಣೆಯಲ್ಲಿ ಉಪಯೋಗಿಸಿ ನಂತರ ಕೈಬಿಡುತ್ತೆ. ಇವತ್ತಿಗೂ ಕಾಂಗ್ರೆಸ್ ಒಬ್ಬ ಮುಸ್ಲಿಂ ನಾಯಕರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಲ್ಲ. ಆದರೆ ನಾವು ಜೆಡಿಎಸ್ ನವರು ಹಿಂದೆಯೆ ಮುಸ್ಲಿಮರನ್ನು ಪಕ್ಷದ ಅಧ್ಯಕ್ಷರನ್ನು ಮಾಡಿದ್ಧೆವು ಎಂದು ವೆಂಕಟರಾವ ನಾಡಗೌಡರು ಹೇಳಿದರು.
------------
ನಂತರ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷರು ಸುರೇಶ ಭೂಮರಡ್ಡಿ - ನಾವು 2023 ರ ಚುನಾವಣೆಯಲ್ಲಿ 20 ದಿನದಲ್ಲಿ 45 ಸಾವಿರ ಓಟು ಪಡೆದಿದ್ದೇವೆ. ಇನ್ನೂ 45 ಸಾವಿರ ಓಟು ಬರುತ್ತಿದ್ವು. ಅಲ್ಪಸಂಖ್ಯಾತರಿಗೆ ಇಲ್ಲ ಸಲ್ಲದು ಹೇಳಿ ದಾರಿ ತಪ್ಪಿಸಿದ್ರು. ಈಗ ಸಿವಿಸಿ ಬಗ್ಗೆ ಎಲ್ಲ ಗೊತ್ತಾಗಿದೆ.‌ ಸಿವಿಸಿ ಮತ್ತು ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ ಮಾಡಲ್ಲ ಎಂದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 28 2026 4:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ
Feb 27 2026 7:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ
Feb 26 2026 6:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಾರ್ಚ್ 1 ರಂದು ಮುಧೋಳದಲ್ಲಿ ಪ್ರಶಸ್ತಿ ಪ್ರದಾನ




Copyright © 2026 Agni Divya. All Rights Reserved.
Designed & Developed by We Make Digitize