ಕೊಪ್ಪಳ : ತಾಲೂಕಿನ ಬಂಡಿಹರ್ಲಾಪುರ ಹತ್ತಿರ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಗಣಿಗಳ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಅಕ್ರಮ ಗಣಿಗಾರಿಕೆ ಬಗ್ಗೆ ಜಿಲ್ಲೆಯ ಪೊಲೀಸರು ಯಾವುದೆ ಕ್ರಮ ಜರುಗಿಸದೆ ಇದ್ದಾಗ ಬಳ್ಳಾರಿ ವಲಯದ ಐಜಿಪಿಯವರಿಗೆ ದೂರು ಹೋಗಿದ್ದು ಅವರ ನಿರ್ದೇಶನದಂತೆ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ನಡೆದಿದೆ.
ರವಿ ಇಳಕಲ್ ಹಾಗೂ ಇತರರಿಗೆ ಸೇರಿದ ಅಕ್ರಮ ಗಣಿಗಾರಿಕೆ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಕಲ್ಲು ತುಂಬಿದ 3 ಲಾರಿ ಸೇರಿ 12 ಲಾರಿ, 16 ಟ್ರಾಕ್ಟರ್ , 13 ಜೆಸಿಬಿ/ ಹಿಟಾಚಿ, 2 ಕ್ರೇನ್ ಸೀಜ್ ಮಾಡಿದ್ದಾರೆ ಪೊಲೀಸರು.
ಕೊಪ್ಪಳ ಎಸ್ಪಿ , ಹೆಚ್ಚುವರಿ ಎಸ್ಪಿ , 7 ಇನ್ಸಪೆಕ್ಟರ್ , 2 ಎಎಸ್ಐ, ಹಾಗೂ 30 ಸಿಬ್ಬಂದಿ ಸಮೇತ ದಾಳಿ ನಡೆಸಲಾಗಿದೆ.