ಕೊಪ್ಪಳ : ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದ ಎರಡು ಶೇಂಗಾ ಹೊಟ್ಟಿನ ಬಣವಿಗಳು ಸಂಪೂರ್ಣವಾಗಿ ಭಸ್ಮವಾದ ಘಟನೆ ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಕಲಕೇರಿಯ ಸುರೇಶ ಹೊಸಳ್ಳಿ ಅವರಿಗೆ ಸೇರಿದ ಶೇಂಗಾ ಹೊಟ್ಟು ಬಣವಿಗಳು ಬೆಂಕಿಗೆ ಆಹುತಿಯಾಗಿವೆ. ರೈತ ಸುರೇಶ ಅವರು ಶೇಂಗಾ ರಾಶಿ ಮಾಡಿ ಬಣವಿಗಳನ್ನು ಹಾಕಿದ್ದರು.
ಆದರೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಣವಿಗಳು ಸಂಪೂರ್ಣ ನಾಶವಾಗಿವೆ.
ಬೆಂಕಿಯಿಂದ ಸಾವಿರಾರು ರೂಪಾಯಿ ಮೌಲ್ಯದ ಶೇಂಗಾ ಹೊಟ್ಟು ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಿಯಂತ್ರಿಸಿದರು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ.
ಹತ್ತು ದಿನಗಳ ಹಿಂದೆ ಇದೆ ಕಲಕೇರಿ ಗ್ರಾಮದ ಅಮರೇಶಪ್ಪ ಎಂಬುವವರ ನಾಲ್ಕು ಬಣವೆಗಳು ಸುಟ್ಟು ಲಕ್ಷಾಂತರ ಮೌಲ್ಯದ ಮೇವು ಹೊಟ್ಟು ಭಸ್ಮ ಆಗಿತ್ತು