Advt. 
 Views   113

ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ

Feb 28, 2026, 04:59 AM IST
ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ

ಕೊಪ್ಪಳ : ನಾನೊಬ್ಬ ಹೆಣ್ಣು ಮಗಳು, ಎಚ್ಚರವಾಗಿದ್ದೆ ಪ್ರತಿಭಟನೆ ಮಾಡಿದ್ದೇನೆ ಅದರ ಮೂಲಕ ಅವರಿಗೆ ಒಳ್ಳೆಯ ಉತ್ತರ ಕೊಟ್ಟಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಹೇಳಿದರು.

ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ಎರಡು ದಿನಗಳ ಹಿಂದೆ ಸಂಸದ ರಾಜಶೇಖರ ಹಿಟ್ನಾಳ ಹುಲಿಕೆರೆ ಪ್ರಕರಣ ಸಂಬಂಧ ಮಾತನಾಡುತ್ತಾ ತಮ್ಮ ಬಗ್ಗೆ ಅಕ್ಷೇಪಾರ್ಹ ಪದ ಬಳಕೆ ಬಗ್ಗೆ ಪ್ರತಿಕ್ರಿಯಿಸಿದರು.

ಅವರು ಬಳಸಿದ ಪದದಿಂದ ನೋವಾಯಿತು. ನಾವು ಹೆಣ್ಣುಮಕ್ಕಳು ಅವರಂತೆ ಮಾತನಾಡಕಾಗಲ್ಲ ಮನಸ್ಸಿಗೆ ಬೇಜಾರಾಗುತ್ತದೆ.

ಈಗ ನನ್ನ ಬಗ್ಗೆ ಮಾತಾಡಿದ್ರು , ಹಿಂದೆ ಸಾಣಾಪುರ ಘಟನೆ ಅದಾಗ ಅದು ಸಣ್ಣ ಘಟನೆ ಅಂದಿದ್ದರು. ಹೆಣ್ಣುಮಕ್ಕಳ ವಿಷಯದಲ್ಲಿ ಸಂಸದರು ಲಘುವಾಗಿ ಮಾತಾಡ್ತಾರಲ್ಲ ಬಹಳ ಬೇಜಾರಾಗುತ್ತೆ ಎಂದು ಅವರು ಹೇಳಿದರು.

ಕೊಪ್ಪಳದಲ್ಲಿ ಹೋಳಿ ಹಬ್ಬ ಆಯೋಜಿಸಿದ ಕುರಿತು ಎರಡು ದಿನಗಳ ಹಿಂದೆ ಸಂಸದ ರಾಜಶೇಖರ ಹಿಟ್ನಾಳ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹುಲಿಕೆರೆ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ ಅಲ್ಲಿ ನಡೆದಿದ್ದ ಎಲ್ಲ ಕಾಮಗಾರಿಯನ್ನು ಹೇಮಲತಾ ನಾಯಕ ಅವರು ಶಿವರಾತ್ರಿ ಕಾರ್ಯಕ್ರಮಕ್ಕೆ ಬಂದಾಗ ನೋಡಿದ್ದರು.‌ ಆಗ ಅವರು ಏಕೆ ಸುಮ್ಮನಿದ್ದರು ಎನ್ನುತ್ತ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು.

ಇಂದು ಹೇಮಲತಾ ನಾಯಕ ಅವರು ಹುಲಿಕೆರೆ ಪ್ರಕರಣ ಕುರಿತು ಮಾತನಾಡುತ್ತ ದರ್ಗಾ - ದೇವಸ್ಥಾನ ಕಮಿಟಿ ಅವರು ಒಪ್ಪಿಗೆ ಕೊಟ್ರೆ ಸಾಕಾ ರಸ್ತೆ ಮಾಡಿಕೊಳ್ಳಲು ? ಈ ಬಗ್ಗೆ ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ದೂರು ಕಳಿಸುವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ನೀಲಕಂಠಯ್ಯ ಹಿರೇಮಠ, ಬಿಜೆಪಿ ಜಿಲ್ಲಾ ಎಸ್ ಸಿ ಘಟಕದ ಅಧ್ಯಕ್ಷರು ಗಣೇಶ ಹೊರತಟ್ನಾಳ, ಬಿಜೆಪಿ ನಗರ ಅಧ್ಯಕ್ಷರು ಅಮರೇಶ ಮುರಲಿ, ಮಹೇಶ ಅಂಗಡಿ ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 2 2026 7:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 27 2026 7:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ
Feb 26 2026 6:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಾರ್ಚ್ 1 ರಂದು ಮುಧೋಳದಲ್ಲಿ ಪ್ರಶಸ್ತಿ ಪ್ರದಾನ




Copyright © 2026 Agni Divya. All Rights Reserved.
Designed & Developed by We Make Digitize