Advt. 
 Views   74

ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ

Feb 27, 2026, 07:05 AM IST
ಕೊಪ್ಪಳದಿಂದಲೇ ಜೆಡಿಎಸ್ ಮೊದಲ ಗೆಲುವು : ಸಮೀಕ್ಷೆ

ಕೊಪ್ಪಳ : ಮುಂದಿನ ವಿಧಾನಸಭಾ ಚುನಾವಣೆ ಫಲಿತಾಂಶ ದಿನ ಜೆಡಿಎಸ್ ನ ಮೊದಲ ಗೆಲುವು ಕೊಪ್ಪಳದಿಂದಲೇ ಆರಂಭವಾಗಲಿದೆ ಎಂಬುದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿಯವರು ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ ಎಂದು ಸಿ.ವಿ. ಚಂದ್ರಶೇಖರ ಹೇಳಿದರು.

ಗುರುವಾರ ಪಕ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

ಕೊಪ್ಪಳದಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿ ಉತ್ತಮವಾಗಿದೆ ಇಲ್ಲಿ ಎನ್‌ಡಿಎ ಗೆಲುವು ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ದುರಾಡಳಿತದಲ್ಲಿ ತೊಡಗಿ ಜನಸಾಮಾನ್ಯರ ಸಮಸ್ಯೆ ಕಡೆ ಗಮನ ಹರಿಸುತ್ತಿಲ್ಲ 13 ವರ್ಷದಿಂದ ಶಾಸಕರಾಗಿರುವ ರಾಘವೇಂದ್ರ ಹಿಟ್ನಾಳ್ ರಿಗೆ ಮತದಾರರು ಗೇಟ್ ಪಾಸ್ ನೀಡಲಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ 60 ಸಾವಿರ ಸದಸ್ಯತ್ವ ನೋಂದಣಿ ಗುರಿಯೊಂದಿಗೆ 500 ಜನ ಮಹಿಳೆಯರ ತಂಡಗಳು ರಚನೆಯಾಗಿವೆ ಎಂದರು.

ಪ್ರಸ್ತುತ ರಾಜ್ಯ ರಾಜಕೀಯ ಪರಿಸ್ಥಿತಿ ಗಮನಿಸಿದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆ ಕಾಂಗ್ರೆಸ್ ಪಕ್ಷ ಹಿಂಜರಿಕೆಯಲ್ಲಿದೆ ಎಂದು ಚಂದ್ರಶೇಖರ್ ಅಭಿಪ್ರಾಯಪಟ್ಟರು.

" ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಹುದ್ದೆಯ ಘನತೆ ಮಣ್ಣು ಪಾಲು ಮಾಡಿದ್ದಾರೆ ಸರಕಾರ ಅಡಳಿತದ ಮೇಲೆ ನಿಯಂತ್ರಣ ಕಳೆದುಕೊಂಡು ಎಲ್ಲಾ ರಂಗಗಳಲ್ಲಿ ಸಂಪೂರ್ಣ ವಿಫಲಗೊಂಡಿದೆ "
- ಸುರೇಶ ಭೂಮರಡ್ಡಿ ಜೆಡಿಎಸ್ ಜಿಲ್ಲಾಧ್ಯಕ್ಷರು

ಈ ಕಾರ್ಯಕ್ರಮಕ್ಕೂ ಮುನ್ನ ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ ಬಿಎಲ್ಎ - 2 ಕಾರ್ಯಾಗಾರ
ನಡೆಯಿತು. ಶಿವಶಂಕರ ರೆಡ್ಡಿ ವಿಶೇಷ ಸಮಗ್ರ ಪರಿಷ್ಕರಣೆಯ ಮಹತ್ವ, ಅದರ ಉದ್ದೇಶ, ಕಾನೂನು ಚೌಕಟ್ಟು ಹಾಗೂ ಅನುಸರಿಸಬೇಕಾದ ವಿಧಾನಗಳ ಕುರಿತು ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೆ ತರಬೇತಿ ನೀಡಿದರು.

ಜಿಲ್ಲಾ ಜೆಡಿಎಸ್ ಗೌರವ ಅಧ್ಯಕ್ಷರು ದೇವಪ್ಪ ಕಟ್ಟಿಮನಿ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷರು ಮಂಜುನಾಥ್ ಸೊರಟೂರ, ರಾಜ್ಯ ಮುಖಂಡ ಶರಣಪ್ಪ ಕುಂಬಾರ, ಶರಣಪ್ಪ ಜಡಿ, ತಾಲೂಕು ಗೌರವಾಧ್ಯಕ್ಷರು ಈಶಪ್ಪ ಮಾದಿನೂರ, ನಗರ ಅಧ್ಯಕ್ಷರು ಸೋಮನಗೌಡ ಹೊಗರನಾಳ, ನಗರ ಘಟಕದ ಗೌರವಾಧ್ಯಕ್ಷೆ ರತ್ನಮ್ಮ ಹಿರೇಮಠ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಲ ಮೇದಾರ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರು ರಮೇಶ್ ಡಂಬ್ರಳ್ಳಿ, ತಾಲೂಕು ಅಧ್ಯಕ್ಷರು ವಿರೇಶಗೌಡ್ರ ದಳಪತಿ, ಅಲ್ಪ ಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷರು ಸಿರಾಜ್ ಬಿಜಾಪುರ್, ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ , ಸಹ ವಕ್ತಾರ ಯಮನಪ್ಪ ಕಟಗಿ, ಯಲಬುರ್ಗಾ ತಾಲೂಕು ಅಧ್ಯಕ್ಷರು ಬಸವರಾಜ ಗುಳಗುಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ಮುಖಂಡ ಶೆಟ್ಟೆಪ್ಪ ಹೊಸಳ್ಳಿ, ಶಂಕ್ರಪ್ಪ ಕೊಳ್ಳಿ ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Mar 5 2026 7:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬಲ್ದೋಟಾ ಗೇಟ್ ಬಂದ್ : ಹೋರಾಟಕ್ಕೆ ಮಣಿಯುತ್ತಾ ಸರಕಾರ ?
Mar 4 2026 11:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಾರ್ಖಾನೆ ಧೂಳಿಗೆ ಬೇಸತ್ತು ದಯಾಮರಣ ಬೇಡಿಕೆ
Mar 4 2026 6:32AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೋಳಿ ನಂತರ ಕೆರೆಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ನೀರುಪಾಲು
Mar 2 2026 7:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಸ್ಲಿಂರ 4% ಮೀಸಲಾತಿ : ಕಾಂಗ್ರೆಸ್ ವಿರುದ್ಧ ನಾಡಗೌಡ್ರು ವಾಗ್ದಾಳಿ
Mar 1 2026 8:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಕ್ರಮ ಗಣಿಗಾರಿಕೆ ಮೇಲೆ ಪೊಲೀಸ್ ದಾಳಿ
Mar 1 2026 5:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಣವೆಗಳಿಗೆ ಬೆಂಕಿ ಸಂಪೂರ್ಣ ಭಸ್ಮ
Mar 1 2026 5:22PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಯುದ್ದ ಸ್ಥಿತಿ : ದುಬೈನಲ್ಲಿ ಉಳಿದುಕೊಂಡಿರುವ ರಾಯರಡ್ಡಿ ಪುತ್ರಿ
Feb 28 2026 5:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ
Feb 28 2026 4:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಂಸದರಿಂದ ಅಕ್ಷೇಪಾರ್ಹ ಪದ ಬಳಕೆ ನೋವುಂಟು ಮಾಡಿದೆ
Feb 26 2026 6:21AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಾರ್ಚ್ 1 ರಂದು ಮುಧೋಳದಲ್ಲಿ ಪ್ರಶಸ್ತಿ ಪ್ರದಾನ




Copyright © 2026 Agni Divya. All Rights Reserved.
Designed & Developed by We Make Digitize