ಕಾರ್ಖಾನೆ ವಿರುದ್ದ ಧರಣಿ 115 ದಿನ ಆದರೂ ಧರಣಿ ಸ್ಥಳಕ್ಕೆ ಬಾರದ ಶಾಸಕ ರಾಘವೇಂದ್ರ ಹಿಟ್ನಾಳ ಫೆ. 24 ರ ಕೊಪ್ಪಳ ಬಂದ್ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮಕ್ಕೆ ಬಂದಾಗ ಜನರ ಸಮಸ್ಯೆಗೆ ಸ್ಪಂದಿಸದ ನೀವು ಮಾತನಾಡಬೇಡಿ ಎಂದು ಜನ ಚುರುಕು ಮುಟ್ಟಿಸಿದ್ದರು
ಮೂರನೆ ಸಲ ಗೆದ್ದ ಮೇಲೆ ಕ್ಷೇತ್ರಕ್ಕೆ ವಿಕೆಂಡ್ ಶಾಸಕ ಆಗಿರುವ ರಾಘವೇಂದ್ರ ಹಿಟ್ನಾಳಗೆ ಫೆ. 24 ರ ವೇದಿಕೆಯಲ್ಲಿ ಕುಳಿತಾಗ ಜನರಿಂದ ಬಂದ ಆಕ್ರೋಶ , ಅಸಮಾಧಾನ ಅರ್ಥ ಆಗಿಲ್ಲ ಅನಿಸುತ್ತೆ.
ಮೊನ್ನೆಯ ಎಫೆಕ್ಟ್ ಎಂಬಂತೆ ನಿನ್ನೆ ಶಾಸಕ ಕಾರ್ಖಾನೆಗಳ ಧೂಳು ಹೊಗೆಯಿಂದ ಜೀವನವೆ ಝರ್ಜರಿತ ಆಗಿರುವ ಹಿರೇಬಗನಾಳಕ್ಕೆ ಹೋಗಿದ್ರು. ಅಲ್ಲಿಯ ಜನ ನಮ್ಮೂರು ನೋಡ್ರಿ ಎಷ್ಟು ಧೂಳು ಇದೆ ಒಂದ್ಸಲ ನೋಡ ಬರ್ರಿ ಅಂತ ಕರೆದರೆ ಶಾಸಕರು ಕೇರ್ ಲೆಸ್ ಮಾಡಿ ಕಾರು ಹತ್ತುವಾಗ ಜನ ಧಿಕ್ಕಾರ ಕೂಗಿದ್ಧಾರೆ.
ಗ್ರಾಮಸ್ಥರು ಕೇಳಿದ್ದಾದರೂ ಏನು ? ಕಾರ್ಖಾನೆಗಳಿಂದ ಆಗಿರುವ ಹಾನಿಯ ವರದಿ ಜಾರಿ ಮಾಡಿ ಮತ್ತು ಹಾನಿಕಾರಕ ಕಾರ್ಖಾನೆಗಳನ್ನು ಬಂದ್ ಅಥವಾ ಶಿಫ್ಟ್ ಮಾಡಿ, ಒಂದ್ಸಲ ಮುಖ್ಯಮಂತ್ರಿಗಳನ್ನು ಬಜೆಟ್ ಆದ ಮೇಲೆ ನಮ್ಮ ಗ್ರಾಮಕ್ಕೆ ಕರೆದುಕೊಂಡು ಬರ್ರಿ ಅಂತ.
ಇದಕ್ಕೆ ಕೊಟ್ಟ ಉತ್ತರ ಮಾತ್ರ ಬಂಡಲ್. ಮಾಲಿನ್ಯ ತಡೆಯಲು ಮಂಡಳಿಗೆ ಪತ್ರ ಬರಿತಿನಿ, ಲಾರಿ ಓಡಾಟಕ್ಕೆ ಬೇರೆ ಬೈಪಾಸ್ ಮಾಡಿಸೋಣ ಅಂದ್ರು. ಶಾಸಕರ ಮಾತಿನಲ್ಲಿ ಜನಪರ ಕಾಳಜಿ ಜೀರೋ ಅಂತ ಗ್ಯಾರಂಟಿ ಆಗಿಯೆ ಅವರು ಊರಾಗ ಹೋಗಿ ಬರೋಣ ಬರ್ರಿ ಧೂಳು ನೋಡ ಬರ್ರಿ ಅಂದ್ರೆ ಶಾಸಕರು ಮುಖ ತಿರುಗಿಸಿ ಕಾರು ಹತ್ತಲು ಹೊರಟರು. ಜನ ಧಿಕ್ಕಾರ ಕೂಗಿದರು.
ಇದು ಮೂರು ಸಲ ಶಾಸಕ ಆಗಿರುವ ರಾಘವೇಂದ್ರ ಹಿಟ್ನಾಳ ಜನರ ಸಮಸ್ಯೆಗೆ ತೋರಿಸುವ ಸ್ಪಂದನೆ !
ಹಿಂದೆ SMK ಅವರ ಕಾಂಗ್ರೆಸ್ ಸರಕಾರ ಸಂದರ್ಭ ಬಗನಾಳನಲ್ಲಿ ಲಾಠಿ ಚಾರ್ಜ್ ಆದಾಗ ದೇಶದ ಮಾಜಿ ಪ್ರಧಾನಿ ದೇವೇಗೌಡರು ಬಗನಾಳಗೆ ಬಂದಿದ್ದರು. ಶಾಸಕರಿಗೆ ರಾಜ್ಯದ ಮುಖ್ಯಮಂತ್ರಿಗಳನ್ನು ಬಗನಾಳಗೆ ಕರೆದುಕೊಂಡು ಬರೋದು ಕಷ್ಟವೆ ?